ವಿಮಾನ ದುರಂತ: ನೇಪಾಳದ ಪಶುಪತಿನಾಥ ದೇಗುಲದ ಸಮೀಪ ನಾಲ್ವರು ಭಾರತೀಯ ಅಂತ್ಯಕ್ರಿಯೆ

ಕಠ್ಮಂಡು: ನೇಪಾಳದ ಗುಡ್ಡಗಾಡು ಪ್ರದೇಶದಲ್ಲಿ ತಾರಾ ಏರ್ ಸಂಸ್ಥೆಯ ವಿಮಾನ ಭಾನುವಾರ ಪತನವಾಗಿ 22 ಮಂದಿ ಮೃತಪಟ್ಟಿದ್ದರು. ಇದೇವೇಳೆ ಪ್ರಾಣ ಕಳೆದುಕೊಂಡಿದ್ದ ನಾಲ್ವರು ಭಾರತೀಯರ ಅಂತ್ಯಕ್ರಿಯೆಯನ್ನು ಇಲ್ಲಿನ ಪವಿತ್ರ ಪಶುಪತಿನಾಥ ದೇವಾಲಯದ ಸಮೀಪ ಗುರುವಾರ ನೆರವೇರಿಸಲಾಗಿದೆ.

ಕೆನಡಾದ ‘ಡಿ ಹ್ಯಾವಿಲ್ಯಾಂಡ್’ ನಿರ್ಮಿತ ಈ ವಿಮಾನದಲ್ಲಿ ನಾಲ್ವರು ಭಾರತೀಯರು, ಜರ್ಮನಿಯ ಇಬ್ಬರು, 13 ಮಂದಿ ನೇಪಾಳಿಗರು ಹಾಗೂ ಮೂವರು ಸಿಬ್ಬಂದಿ ಸೇರಿ 22 ಜನರು ಪೋಖರಾ ನಗರದಿಂದ ಮಧ್ಯ ನೇಪಾಳದ ಪ್ರಸಿದ್ಧ ಚಾರಣ ತಾಣ ಜೋಮ್ಸಮ್‌ಗೆ ಪಯಣಿಸುತ್ತಿದ್ದರು.

ಉದ್ಯಮಿಯಾದ ಅಶೋಕ್‌ ಕುಮಾರ್‌ ತ್ರಿಪಾಠಿ (54) ಹಾಗೂ ಅವರಿಂದ ವಿಚ್ಛೇದನ ಪಡೆದಿದ್ದ ವೈಭವಿ ಬಂದೇಕರ್‌ ತ್ರಿಪಾಠಿ (51) ಅವರು ತಮ್ಮ ಮಕ್ಕಳಾದ ಧನುಷ್‌ (22), ರಿತಿಕಾ (15) ಅವರೊಂದಿಗೆ ರಜೆ ಕಳೆಯುವುದ್ಕಾಗಿ ನೇಪಾಳಕ್ಕೆ ಆಗಮಿಸಿದ್ದರು.

ತ್ರಿಭುವನ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ಶವಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು. ನಂತರ ನಾಲ್ವರ ಅಂತ್ಯಕ್ರಿಯೆಯನ್ನು ಪಶುಪತಿನಾಥ ದೇವಾಲಯದ ಬಳಿ ಇರುವ ವಿದ್ಯುತ್‌ ಚಿತಾಗರದಲ್ಲಿ ನೆರವೇರಿಸಲಾಗಿದೆ. ಈ ವೇಳೆ ತ್ರಿಪಾಠಿ ಅವರ ಸಹೋದರ ತಮ್ಮ ಪತ್ನಿಯೊಂದಿಗೆ ಪಾಲ್ಗೊಂಡಿದ್ದರು.

ಪಶುಪತಿನಾಥ ದೇವಾಲಯವು ಬಗಮತಿ ನದಿ ದಂಡೆಯ ಮೇಲೆ ನಿರ್ಮಾಣವಾಗಿದ್ದು, ನೇಪಾಳದಲ್ಲಿರುವ ಪ್ರಮುಖ ಹಿಂದೂ ದೇವಾಲಗಳಲ್ಲಿ ಒಂದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ಯಾಂಕ್ ಮ್ಯಾನೇಜರನ್ನು ಗುಂಡಿಕ್ಕಿ ಕೊಂದ ಉಗ್ರ,

Thu Jun 2 , 2022
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ   ಕಳೆದ ಮೂರು ದಿನಗಳಲ್ಲಿ ಹಿಂದೂಗಳ ಮೇಲಿನ ಎರಡನೇ ದಾಳಿಯಲ್ಲಿ ರಾಜಸ್ಥಾನದ ಬ್ಯಾಂಕ್ ಮ್ಯಾನೇಜರ್  ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ. ಇಲಾಖಾಹಿ ದೇಹತಿ ಬ್ಯಾಂಕ್‌ನ (Ellaquai Dehati Bank) ಅರೆಹ್ ಶಾಖೆಗೆ ಭಯೋತ್ಪಾದಕ ನುಗ್ಗಿ ಬ್ಯಾಂಕ್ ಮ್ಯಾನೇಜರ್ ವಿಜಯ್ ಕುಮಾರ್ ಮೇಲೆ ಗುಂಡು ಹಾರಿಸಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಹಂತಕನು ಶಾಖೆಯೊಳಗೆ ಪ್ರವೇಶಿಸಿ ಗುಂಡು ಹಾರಿಸಿ ಪರಾರಿಯಾಗುವುದನ್ನು ಕಾಣಬಹುದಾಗಿದೆ. ವಿಜಯ್ ಕುಮಾರ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದರು. […]

Advertisement

Wordpress Social Share Plugin powered by Ultimatelysocial