ಜಿ- 20 ಶೃಂಗಸಭೆ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯನ್ನು ಬರಮಾಡಿಕೊಂಡ ಶೋಭಾ ಕರಂದ್ಲಾಜೆ!

ರಾಷ್ಟ್ರರಾಜಧಾನಿಯಲ್ಲಿ ನಾಳೆಯಿಂದ ಎರಡು ದಿನ ನಡೆಯಲಿರುವ ಜಿ-20 ಶೃಂಗಸಭೆಗಾಗಿ ಇಟಿಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇಂದು ದೆಹಲಿಗೆ ಆಗಮಿಸಿದರು. ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ನಾಳೆಯಿಂದ ಎರಡು ದಿನ ನಡೆಯಲಿರುವ ಜಿ-20 ಶೃಂಗಸಭೆಗಾಗಿ ಇಟಿಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇಂದು ದೆಹಲಿಗೆ ಆಗಮಿಸಿದರು.
ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ನಂತರ ಭಾರತೀಯ ಸಂಸ್ಕೃತಿ ಬಿಂಬಿತ ನೃತ್ಯ ರೂಪಕದೊಂದಿಗೆ ಮೆಲೋನಿ ಅವರಿಗೆ ಭಾರತಕ್ಕೆ ಸ್ವಾಗತ ಕೋರಲಾಯಿತು.
ಜಿ-20 ಶೃಂಗಸಭೆ: ಪ್ರಧಾನಿ ಮೋದಿ ವಿಶ್ವ ನಾಯಕರೊಂದಿಗೆ 15ಕ್ಕೂ ಹೆಚ್ಚು ದ್ವೀಪಕ್ಷೀಯ ಸಭೆಈ ಮಾರ್ಚ್ನಲ್ಲಿ, ರೈಸಿನಾ ಡೈಲಾಗ್ನ ಎಂಟನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲು ಮೆಲೋನಿ ಭಾರತಕ್ಕೆ ಭೇಟಿ ನೀಡಿದ್ದರು. ತಮ್ಮ ಭೇಟಿಯ ವೇಳೆ ಅವರು ನವದೆಹಲಿಯಲ್ಲಿ ಪ್ರಧಾನಿ ಮೋದಿಯವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಉಭಯ ನಾಯಕರು ಭಾರತ-ಇಟಲಿ ಪಾಲುದಾರಿಕೆಯನ್ನು ಕಾರ್ಯತಂತ್ರ ಪಾಲುದಾರಿಕೆಯ ಮಟ್ಟಕ್ಕೆ ಏರಿಸಲು ನಿರ್ಧರಿಸಿದರು. ಭಾರತ ಮತ್ತು ಇಟಲಿ 2000 ವರ್ಷಗಳಿಂದ ವ್ಯಾಪಾರ ಸಂಬಂಧಗಳನ್ನು ಹೊಂದಿರುವ ಪ್ರಾಚೀನ ನಾಗರಿಕತೆಗಳಾಗಿವೆ. ಭಾರತ ಮತ್ತು ಇಟಲಿ ನಡುವಿನ ರಾಜಕೀಯ ಸಂಬಂಧಗಳು 1947ರಿಂದ ಪ್ರಾರಂಭವಾಗಿವೆ. ರಾಷ್ಟ್ರ ರಾಜಧಾನಿಯ ಪ್ರಗತಿ ಮೈದಾನದಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಭಾರತ ಮಂಟಪದಲ್ಲಿ ಜಿ20 ಶೃಂಗಸಭೆ ನಡೆಯುತ್ತಿದೆ.

ಭಾರತವು ಕಳೆದ ವರ್ಷ ಡಿಸೆಂಬರ್ 1 ರಂದು ಜಿ- ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತ್ತು. ಜಿ-2 ಗೆ ಸಂಬಂಧಿಸಿದ ಸುಮಾರು 200 ಸಭೆಗಳನ್ನು ದೇಶಾದ್ಯಂತ 60 ನಗರಗಳಲ್ಲಿ ಆಯೋಜಿಸಲಾಗಿತ್ತು. ಭಾರತದ ಅಧ್ಯಕ್ಷತೆಯಲ್ಲಿ ಜಿ 20 ಶೃಂಗಸಭೆ ನಡೆಯುತ್ತಿರುವುದು ಇದೇ ಮೊದಲು.

Please follow and like us:

tmadmin

Leave a Reply

Your email address will not be published. Required fields are marked *

Next Post

ಗಗನಸಖಿ ಹತ್ಯೆ ಪ್ರಕರಣದ ಆರೋಪಿ ಲಾಕಪ್‌ನಲ್ಲಿ ಪ್ಯಾಂಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ

Fri Sep 8 , 2023
ಮುಂಬೈ: ಮುಂಬೈನ ಮರೋಲ್ ಪ್ರದೇಶದ ಫ್ಲ್ಯಾಟ್‌ನಲ್ಲಿ 23 ವರ್ಷದ ಗಗನಸಖಿಯನ್ನು ಕತ್ತು ಸೀಳಿ ಕೊಂದಿದ್ದ ಆರೋಪಿ ವಿಕ್ರಮ್ ಅಥ್ವಾಲ್ ಅಂಧೇರಿ ಪೊಲೀಸ್‌ ಠಾಣೆಯ ಲಾಕಪ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಗನಸಖಿ ರೂಪಲ್ ಓಗ್ರೆಯನ್ನು ವಿಕ್ರಮ್ ಅಥ್ವಾಲ್ ಕತ್ತು ಸೀಳಿ ಕೊಂದಿದ್ದ. ಛತ್ತೀಸ್‌ಗಢ ಮೂಲದವರಾಗಿದ್ದ ರೂಪಲ್ ಏರ್ ಇಂಡಿಯಾದಲ್ಲಿ ತರಬೇತಿಗಾಗಿ ಏಪ್ರಿಲ್‌ನಲ್ಲಿ ಮುಂಬೈಗೆ ಬಂದಿದ್ದರು. ಮರೋಲ್‌ನ ಕ್ರಿಶನ್‌ಲಾಲ್ ಮರ್ವಾಹ್ ಮಾರ್ಗ್‌ನಲ್ಲಿರುವ ಎನ್‌ಜಿ ಕಾಂಪ್ಲೆಕ್ಸ್‌ನಲ್ಲಿರುವ ಅವರ ಫ್ಲಾಟ್‌ನಲ್ಲಿ ಭಾನುವಾರ ರಾತ್ರಿ ಶವ […]

Advertisement

Wordpress Social Share Plugin powered by Ultimatelysocial