ಹೃದಯಾಘಾತದಿಂದ ಬಾಲಿವುಡ್ ನಿರ್ಮಾಪಕ ನಿತಿನ್ ಮನಮೋಹನ್ ನಿಧನ.

ಮುಂಬೈ: ಬಾಲಿವುಡ್‌ ಖ್ಯಾತ ನಿರ್ಮಾಪಕ ನಿತಿನ್ ಮನಮೋಹನ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಡಾಲಿ, ಪುತ್ರ ಸೋಹಂ, ಪುತ್ರಿ ಪ್ರಾಚಿ ಅವರನ್ನು ಅಗಲಿದ್ದಾರೆ.

ನಿತಿನ್ ಮನಮೋಹನ್‌ ಕಳೆದ 15 ದಿನಗಳಿಂದ ಇಲ್ಲಿನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ನಿತಿನ್ ಮನಮೋಹನ್‌ ಹೃದಯಾಘಾತವಾಗಿ ಮೃತಪಟ್ಟರು ಎಂದು ಕುಟುಂಬದವರು ಹೇಳಿದ್ದಾರೆ.

ಮಧುಮೇಹ, ರಕ್ತದೊತ್ತಡ ಹಾಗೂ ಮೆದುಳು ಸಂಬಂಧ ಕಾಯಿಲೆಯಿಂದ ಅವರು ಬಳಲುತ್ತಿದ್ದರು. 15 ದಿನಗಳಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

ನಿತಿನ್ ಮನಮೋಹನ್‌ ನಿಧನಕ್ಕೆ ಬಾಲಿವುಡ್‌ ಸೆಲೆಬ್ರಿಟಿಗಳು ಹಾಗೂ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಬೋಲ್ ರಾಧಾ ಬೋಲ್, ಆರ್ಮಿ, ಮಹಾ-ಸಂಗ್ರಾಮ್, ಬಾಘಿ, ದಿಲ್ ಮಾಂಗೆ ಮೋರ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

"ಉರಿಸಬೇಕು ಅಂತಿದ್ರೆ, ಒಳ್ಳೆ ಕೆಲಸ ಮಾಡಿ ಉರಿಸುತ್ತಲೇ ಇರ್ತೀವಿ": ದರ್ಶನ್ ಹೇಳಿಕೆಗೆ ಅಪ್ಪು ಫ್ಯಾನ್ಸ್ ತಿರುಗೇಟು!

Thu Dec 29 , 2022
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಿದೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣದ ಬಳಿಕ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ನಡುವೆ ಫೈಟ್ ನಡೆಯುತ್ತಿದೆ. ಈ ಪ್ರಕರಣದ ಬಳಿಕ ದರ್ಶನ್ ಫ್ಯಾನ್ಸ್ ರಾಜವಂಶದ ಕುಟುಂಬದ ವಿರುದ್ಧ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ಅಣ್ಣಾವ್ರ ಕುಟುಂಬವನ್ನು ನಿಂದಿಸುತ್ತಿದ್ದಾರೆಂದು ಅಪ್ಪು ಫ್ಯಾನ್ಸ್ ಆರೋಪ ಮಾಡುತ್ತಿದ್ದಾರೆ. ಈ ಸಂಬಂಧ ರಾಜವಂಶದ ಅಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳು ಇಂದು […]

Advertisement

Wordpress Social Share Plugin powered by Ultimatelysocial