ಧಾರವಾಡ: ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಬೀಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳಲ್ಲಿ ಗುಡು-ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ತಜ್ಞ ಡಾ. ಆರ್.ಎಚ್. ಪಾಟೀಲ ಮಾಹಿತಿ ನೀಡಿದ್ದಾರೆ. ಇನ್ನು ದಕ್ಷಿಣದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಕರಾವಳಿ ಭಾಗಗಳಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಇನ್ನು ಕೇರಳ, ತಮಿಳುನಾಡಿನಲ್ಲೂ ಭಾರೀ ಮಳೆಯಾಗಲಿದೆ ಎಂದು ಹೇಳಿದ್ದಾರೆ. ಈ ನಡುವೆ ಉತ್ತರ ಕರ್ನಾಟಕ ಭಾಗದಲ್ಲಿ ಅಲ್ಲಲ್ಲಿ ಗುಡುಗು, ಮಿಂಚು ಸಹಿತ ಮಳೆ ಜತೆಗೆ ಬಿರುಸಿನ ಗಾಳಿ […]

  ನವದೆಹಲಿ: ಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಎರಡು ಉನ್ನತ ಮಟ್ಟದ ಸಭೆಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ವರ್ಷಗಳ ನಂತರ ಜೂನ್ 30 ರಂದು ಪ್ರಾರಂಭವಾಗಲಿರುವ ತೀರ್ಥಯಾತ್ರೆಯ ಬಗ್ಗೆ ಚರ್ಚಿಸಲು ಬ್ಯಾಕ್-ಟು-ಬ್ಯಾಕ್ ಸಭೆಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತರು ಸೇರಿದಂತೆ ಹಲವಾರು ಉದ್ದೇಶಿತ ಹತ್ಯೆಗಳನ್ನು ಅನುಸರಿಸುತ್ತವೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ […]

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ, ಮೇ 17 ಸಂಜೆ 5 ಗಂಟೆಗೆ ಬಜೆಟ್ ಅನುಷ್ಠಾನ, ಕಡತ ವಿಲೇವಾರಿ ಸಂಬಂಧಿಸಿದಂತೆ ಚರ್ಚೆ ನಡೆಸಲು ತುರ್ತು ಸಭೆ ಕರೆದಿದ್ದಾರೆ. ವಿಧಾನ ಸೌಧದದ ಸಮ್ಮೇಳನ ಸಭಾಂಗಣ ಕೊಠಡಿ ಸಂಖ್ಯೆ 334 ರಲ್ಲಿ ತುರ್ತು ಸಭೆ ನಡೆಯಲಿದ್ದು, 2022-23 ನೇ ಸಾಲಿನ ಬಜೆಟ್ ಅನುಷ್ಠಾನ, ಕಡತ ವಿಲೇವಾರಿ, ಆಡಳಿತವನ್ನು ಇನ್ನಷ್ಟು ವೇಗದಲ್ಲಿ ಚುರುಕುಗೊಳಿಸಲು ಕ್ರಮ ಕೈಗೊಳ್ಳಲು ಸಿಎಂ ಸಲಹೆ ನೀಡುವ ಸಾಧ್ಯತೆಗಳಿವೆ. ಇನ್ನಿತರ […]

  ವಾರಣಾಸಿ, ಮೇ 17: ಜ್ಞಾನವಾಪಿ ಮಸೀದಿಯ ಸಮೀಕ್ಷೆಯನ್ನು ಅಧಿಕಾರಿಗಳು ಪೂರ್ಣಗೊಳಿಸಿದ ಒಂದು ದಿನದ ನಂತರ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು, ಲೆಕ್ಕಪರಿಶೋಧಕರಿಂದ ಮಸೀದಿ ಕೊಳದೊಳಗೆ ಶಿವಲಿಂಗ ಕಂಡುಬಂದಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ ಅದು ಶಿವಲಿಂಗವಲ್ಲ ಬದಲಾಗಿ ಅಲ್ಲಿರುವುದು ಕಾರಂಜಿ ಎಂದಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಮಸೀದಿಯ ವೀಡಿಯೋಗ್ರಫಿ ಸಮೀಕ್ಷೆಯು ಮೇ 16 ರಂದು ಮುಕ್ತಾಯಗೊಂಡಿತು, ಹಿಂದೂ ಅರ್ಜಿದಾರರು ಜ್ಞಾನವಾಪಿ ಮಸೀದಿಯ ಕೊಳದೊಳಗೆ ಶಿವಲಿಂಗವನ್ನು ಗುರುತಿಸಿದ್ದಾರೆ ಎಂದು ಹೇಳಿದರು, […]

ಬೆಂಗಳೂರು: ಆರೆಸ್ಸೆಸ್‌ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡಗೇವಾರ್‌ ಅವರ ಭಾಷಣವನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಖಂಡಿಸಿದ್ದಾರೆ. ಪಠ್ಯಪುಸ್ತಕ_ಪಕ್ಷಪುಸ್ತಕ ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು “ಅಯ್ಯೋ.. ಕರ್ನಾಟಕ ಕಟುಕರ ಕೈಯಲ್ಲಿ ಸಿಕ್ಕಿಕೊಂಡಿದೆ!” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಟಾರ್ಗೆಟ್‌ […]

  ಕೇನ್ಸ್​ (ಫ್ರಾನ್ಸ್​): ಫ್ರಾನ್ಸ್​ನ ಕೇನ್ಸ್​ನಲ್ಲಿ ಇಂದಿನಿಂದ (ಮೇ 17) ನಡೆಯುತ್ತಿರುವ ಕೇನ್ಸ್​ ಫೆಸ್ಟಿವಲ್​-2022ನಲ್ಲಿ ಬಾಲಿವುಡ್​ನ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಜಡ್ಜ್​ (ಜ್ಯೂರಿ) ಆಗಿ ಆಯ್ಕೆ ಆಗಿದ್ದಾರೆ. ಈ ಹಿಂದೆ ಅನೇಕ ಬಾರಿ ಅತಿಥಿಯಾಗಿ ಹೋಗುತ್ತಿದ್ದ ದೀಪಿಕಾ ಇದೇ ಮೊದಲ ಬಾರಿಗೆ ಜ್ಯೂರಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಿನಿಮೋತ್ಸವಕ್ಕೂ ಮುನ್ನ ಜ್ಯೂರಿಗಳಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ದೀಪಿಕಾ ಭಾಗಿಯಾಗಿದ್ದಾರೆ. ದೀಪಿಕಾ, ಕ್ಯಾನ್​ ಫಿಲ್ಮ್ ಫೆಸ್ಟಿವಲ್ ನಿರ್ದೇಶಕ ಥಿಯೆರಿ ಫ್ರೆಮಾಕ್ಸ್, ಅಮೆರಿಕ ಚಲನಚಿತ್ರ ನಿರ್ದೇಶಕ […]

  ಬೆಂಗಳೂರು: ನೈಋತ್ಯ ಮಾನ್ಸೂನ್ ಕಳೆದ ಸೋಮವಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಅಪ್ಪಳಿಸಿದ್ದು, ಹವಾಮಾನ ತಜ್ಞರ ಪ್ರಕಾರ ಈ ಬಾರಿ ರಾಜ್ಯಕ್ಕೆ ಮುಂಗಾರು ಪ್ರವೇಶ ಬೇಗನೆ ಆಗಲಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಮೂರು ದಿನಗಳವರೆಗೆ ಅಂದರೆ ಮೇ 19ರವರೆಗೆ ಕರಾವಳಿ ಕರ್ನಾಟಕ ಭಾಗದಲ್ಲಿ ಆರೆಂಜ್ ಅಲರ್ಟ್ ಮತ್ತು ಮೇ 18ಕ್ಕೆ ರೆಡ್ ಅಲರ್ಟ್ ಅನ್ನು ಘೋಷಿಸಲಾಗಿದೆ. ರಾಜ್ಯದ ಒಳನಾಡು ಪ್ರದೇಶದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಕರಾವಳಿ ಹಾಗೂ […]

  ಲಕ್ನೋ:ಮುಂಗಾರು ಹಂಗಾಮಿಗೂ ಮುನ್ನವೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕಂಗಾಲಾಗಿಸಿದೆ. ಉತ್ತರ ಪ್ರದೇಶವು ಡೆಂಗ್ಯೂ ಹರಡುವಿಕೆಯನ್ನು ಎದುರಿಸಲು ಅಗತ್ಯವಾದ ವೈದ್ಯಕೀಯ ಮೂಲಸೌಕರ್ಯವನ್ನು ಹೊಂದಿದೆ ಆದರೆ ತಡೆಗಟ್ಟುವ ಕೀಲಿಯು ಜನರ ಕೈಯಲ್ಲಿದೆ ಎಂದು ರಾಜ್ಯದ ಆರೋಗ್ಯ ಮಹಾನಿರ್ದೇಶಕ ವೇದವ್ರತ ಸಿಂಗ್ ಹೇಳಿದರು. ‘ರಾಜ್ಯದಲ್ಲಿ ಸದ್ಯ 70 ಲ್ಯಾಬ್‌ಗಳಲ್ಲಿ ಡೆಂಗ್ಯೂ ಪರೀಕ್ಷೆ ಸೌಲಭ್ಯವಿದ್ದು, ಇನ್ನೂ 88 ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬ್ಲಾಕ್ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ (ಆರ್‌ಆರ್) ತಂಡಗಳನ್ನು […]

ಭಾರತದ ಅನೇಕ ಭಾಗಗಳಲ್ಲಿ ಹಗಲಿನಲ್ಲಿ ತಾಪಮಾನವು ಸುಮಾರು 50 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುತ್ತಿದೆ. ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆ   ಸುರಿಯುತ್ತಿದ್ದರೂ ದೆಹಲಿಯಂತಹ ನಗರಗಳಲ್ಲಿ ತಾಪಮಾನ   ಇನ್ನೂ ಕಡಿಮೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿರುವ ಪ್ರತಿ ಐದು ಮನೆಗಳಲ್ಲಿ ಮೂರರಲ್ಲಿ ಪ್ರತಿದಿನ ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಸಮುದಾಯ-ಆಧಾರಿತ ವೇದಿಕೆಯಾದ ಲೋಕಲ್ ಸರ್ಕಲ್ಸ್‌ನ ಸಮೀಕ್ಷೆಯಲ್ಲಿ  ತಿಳಿದುಬಂದಿದೆ. ಭಾರತದ 344 ಜಿಲ್ಲೆಗಳಲ್ಲಿ ನಡೆದ ಸಮೀಕ್ಷೆಯಲ್ಲಿ ನಾಗರಿಕರಿಂದ 35,000 […]

ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌ ವಿಷಯ ಕಡಿತ ಮಾಡಿರುವುದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಗರು ಮತ್ತು ಬ್ರಿಟಿಷರು ಇಬ್ಬರೂ ಒಂದೇ ಎಂದಿದ್ದಾರೆ. ಮಂಗಳವಾರ ಸರಣಿ ಟ್ವೀಟ್‌ ಮಾಡಿರುವ ಅವರು, ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಟಾರ್ಗೆಟ್‌ ಮಾಡಿ ಡಿಲೀಟ್‌ ಮಾಡುವುದು ಎಂದಿದ್ದಾರೆ. ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನೂ ಇಲ್ಲ. […]

Advertisement

Wordpress Social Share Plugin powered by Ultimatelysocial