ಭಾರತದ ಪ್ರತಿ 5 ಮನೆಗಳಲ್ಲಿ 3 ರಲ್ಲಿ ವಿದ್ಯುತ್ ಕಡಿತ!

ಭಾರತದ ಅನೇಕ ಭಾಗಗಳಲ್ಲಿ ಹಗಲಿನಲ್ಲಿ ತಾಪಮಾನವು ಸುಮಾರು 50 ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪುತ್ತಿದೆ. ಕರ್ನಾಟಕದಲ್ಲಿ ಅಲ್ಲಲ್ಲಿ ಮಳೆ   ಸುರಿಯುತ್ತಿದ್ದರೂ ದೆಹಲಿಯಂತಹ ನಗರಗಳಲ್ಲಿ ತಾಪಮಾನ   ಇನ್ನೂ ಕಡಿಮೆಯಾಗಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿರುವ ಪ್ರತಿ ಐದು ಮನೆಗಳಲ್ಲಿ ಮೂರರಲ್ಲಿ ಪ್ರತಿದಿನ ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ವಿದ್ಯುತ್ ಕಡಿತ ಉಂಟಾಗಲಿದೆ ಎಂದು ಸಮುದಾಯ-ಆಧಾರಿತ ವೇದಿಕೆಯಾದ ಲೋಕಲ್ ಸರ್ಕಲ್ಸ್‌ನ ಸಮೀಕ್ಷೆಯಲ್ಲಿ  ತಿಳಿದುಬಂದಿದೆ. ಭಾರತದ 344 ಜಿಲ್ಲೆಗಳಲ್ಲಿ ನಡೆದ ಸಮೀಕ್ಷೆಯಲ್ಲಿ ನಾಗರಿಕರಿಂದ 35,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸ್ವೀಕರಿಸಲಾಗಿದೆ.

ಕಳಪೆ ಆಡಳಿತ ಹೊಂದಿರುವ ವಿದ್ಯುತ್ ಇಲಾಖೆಗಳು, ಕಳಪೆ ಪೂರೈಕೆ, ಕಳಪೆ ಮೂಲಸೌಕರ್ಯ ಮತ್ತು ನಿರ್ವಹಣೆ ಮತ್ತು ಭ್ರಷ್ಟಾಚಾರಗಳು ತಮ್ಮ ಪ್ರದೇಶದಲ್ಲಿ ವಿದ್ಯುತ್ ಕಡಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ಕಡಿತದ ಬಗ್ಗೆ ಸೂಚನೆಯನ್ನೂ ಕೊಡೋದಿಲ್ಲ!
ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ವಿದ್ಯುತ್ ಕಡಿತದ ಬಗ್ಗೆ ತಮಗೆ ಸಂಬಂಧಿಸಿದ ವಿದ್ಯುತ್ ಇಲಾಖೆ ಅಥವಾ ಕಂಪನಿಯಿಂದ ವಿದ್ಯುತ್ ಕಡಿತದ ಬಗ್ಗೆ ಸುಧಾರಿತ ಸೂಚನೆಯನ್ನು ಪಡೆಯುವುದೇ ಇಲ್ಲ ಎಂಬ ಮಾಹಿತಿ ಸಹ ಬಹಿರಂಗಗೊಂಡಿದೆ.

ಸರ್ವೆಯಲ್ಲಿ ಭಾಗವಹಿಸಿದ ಜನರ ಅಂಕಿ ಅಂಶ ಎಷ್ಟು?
ಪ್ರತಿಕ್ರಿಯಿಸಿದವರಲ್ಲಿ ಸುಮಾರು 63 ಪ್ರತಿಶತ ಪುರುಷರು ಮತ್ತು 37 ಪ್ರತಿಶತ ಮಹಿಳೆಯರಿದ್ದಾರೆ. ಶೇಕಡಾ 41 ಕ್ಕಿಂತ ಹೆಚ್ಚು ನಾಗರಿಕರು ಮಹಾನಗರಗಳು ಅಥವಾ ಅಭಿವೃದ್ಧಿ ಹೊಂದಿದ ಜಿಲ್ಲೆಗಳಿಂದ, 32% ರಷ್ಟು ಶ್ರೇಣಿ 2 ರ ಜಿಲ್ಲೆಗಳಿಂದ ಮತ್ತು 27% ರಷ್ಟು ಶ್ರೇಣಿ 3, 4 ಮತ್ತು ಗ್ರಾಮಾಂತರ ಜಿಲ್ಲೆಗಳ ನಾಗರಿಕರಾಗಿದ್ದಾರೆ.

ಪ್ರತಿ ದಿನ ಎಷ್ಟು ಗಂಟೆಗಳ ವಿದ್ಯುತ್ ಸ್ಥಗಿತವನ್ನು ಅನುಭವಿಸುತ್ತಿದ್ದೀರಿ?
“ನಿಮ್ಮ ಮನೆಯಲ್ಲಿ ಪ್ರತಿ ದಿನ ಎಷ್ಟು ಗಂಟೆಗಳ ವಿದ್ಯುತ್ ಸ್ಥಗಿತವನ್ನು ಅನುಭವಿಸುತ್ತಿದ್ದೀರಿ?” ಎಂಬ ಪ್ರಶ್ನೆಗೆ 11,897 ಪ್ರತಿಕ್ರಿಯೆಗಳು ಬಂದಿವೆ. ಅದರಲ್ಲಿ 38 ಪ್ರತಿಶತ ನಾಗರಿಕರು “ಯಾವುದೇ ನಿಲುಗಡೆಯನ್ನು ಎದುರಿಸುತ್ತಿಲ್ಲ” ಎಂದು ಹೇಳಿದ್ದಾರೆ.

ಎಷ್ಟು ಗಂಟೆ ಕರೆಂಟ್ ಹೋಗುತ್ತೆ? ನಮಗಂತೂ ಗೊತ್ತಿಲ್ಲ
29 ಪ್ರತಿಶತದಷ್ಟು ಜನರು “2 ಗಂಟೆಗಳವರೆಗೆ” ವಿದ್ಯುತ್ ಕಡಿತವನ್ನು ಎದುರಿಸುತ್ತಿದ್ದಾರೆ. 12 ಪ್ರತಿಶತದಷ್ಟು ಜನರು “2-4 ಗಂಟೆಗಳವರೆಗೆ” ಮತ್ತು 5 ಪ್ರತಿಶತ ಜನರು “4-8 ಗಂಟೆಗಳು” ಎಂದು ಉತ್ತರಿಸಿದ್ದಾರೆ. 2 ಶೇಕಡಾ ಜನರು “8-12 ಗಂಟೆಗಳು” ಮತ್ತು ಶೇಕಡಾ 13 “ನಮ್ಮಲ್ಲಿ 24*7 ಪವರ್ ಬ್ಯಾಕಪ್ ಇರುವುದರಿಂದ ಎಷ್ಟು ಗಂಟೆಗಳ ಕಾಲ ವಿದ್ಯುತ್ ಕಡಿತ ಆಗುತ್ತದೆ ಎಂಬುದು ಗೊತ್ತಿಲ್ಲ” ಎಂದು ತಿಳಿಸಿದ್ದಾರೆ.

ವ್ಯಕ್ತಿಗತವಾಗಿ ನೋಡುವುದಿದ್ದರೆ ಇಲ್ಲಿದೆ ಅಂಕಿ ಅಂಶ
ಭಾರತದಲ್ಲಿ ಐದರಲ್ಲಿ ಮೂರು ಕುಟುಂಬಗಳು ಶಾಖದ ಅಲೆ ಮತ್ತು ಹೆಚ್ಚಿನ ತಾಪಮಾನದ ನಡುವೆ ವಿದ್ಯುತ್ ಕಡಿತವನ್ನು ಎದುರಿಸುತ್ತಿವೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ವ್ಯಕ್ತಿಗತವಾಗಿ ನೋಡುವುದಿದ್ದರೆ ಭಾರತದ ಐದು ಜನರಲ್ಲಿ ಒಬ್ಬರಿಗೆ ಪ್ರತಿದಿನ ಎರಡು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಗಂಟೆಗಳ ಕಾಲ ವಿದ್ಯುತ್ ಕೊರತೆ ಉಂಟಾಗಲಿದೆ.

ಏಪ್ರಿಲ್‌ನಲ್ಲಿ ನಡೆದ ಇದೇ ರೀತಿಯ ಸಮೀಕ್ಷೆಗೆ ಹೋಲಿಸಿದರೆ 34 ಪ್ರತಿಶತ ಕುಟುಂಬಗಳು ಈ ಹಿಂದೆ “ಯಾವುದೇ ರೀತಿಯ ವಿದ್ಯುತ್ ಕಡಿತ ಅಥವಾ ಸ್ಥಗಿತವನ್ನು ಎದುರಿಸುತ್ತಿಲ್ಲ” ಎಂದು ಹೇಳಿದ್ದವು. ಇದು ಮೇ ತಿಂಗಳಿನಲ್ಲಿ ವಿದ್ಯುತ್ ಸ್ಥಗಿತ ಆಗುತ್ತಿದೆ ಎಂದವರ ಸಂಖ್ಯೆ ಶೇ.38ಕ್ಕೆ ಹೆಚ್ಚಿದೆ.

2 ಗಂಟೆಗಳವರೆಗೆ ಸ್ಥಗಿತವನ್ನು ಎದುರಿಸುತ್ತಿರುವ ಕುಟುಂಬಗಳು ಏಪ್ರಿಲ್‌ನಲ್ಲಿ ಶೇಕಡಾ 28 ರಿಂದ ಮೇ ತಿಂಗಳಲ್ಲಿ ಶೇಕಡಾ 29 ಕ್ಕೆ ಏರಿದೆ. ಮತ್ತೊಂದೆಡೆ ಎರಡು-ನಾಲ್ಕು ಗಂಟೆಗಳವರೆಗೆ ಸ್ಥಗಿತವನ್ನು ಎದುರಿಸುತ್ತಿರುವ ಕುಟುಂಬಗಳು ಶೇಕಡಾ 18 ರಿಂದ ಶೇಕಡಾ 12 ಕ್ಕೆ ಇಳಿದಿವೆ. 8-12 ಗಂಟೆಗಳವರೆಗೆ ಸ್ಥಗಿತವನ್ನು ಎದುರಿಸುತ್ತಿರುವವರ ಸಂಖ್ಯೆ ಸಹ ಏಪ್ರಿಲ್‌ನಲ್ಲಿ ಶೇಕಡಾ 10 ರಿಂದ ಶೇಕಡಾ 5 ಕ್ಕೆ ಇಳಿದಿದೆ.

ಸಮೀಕ್ಷೆಯಲ್ಲಿ ತಿಳಿದುಬಂದ ಮತ್ತೊಂದು ಗಮನಾರ್ಹ ಅಂಶವೆಂದರೆ 24*7 ಪವರ್ ಬ್ಯಾಕಪ್ ಹೊಂದಿರುವ ಕುಟುಂಬಗಳ ಶೇಕಡಾವಾರು ಪ್ರಮಾಣವು ಏಪ್ರಿಲ್‌ನಲ್ಲಿ ಶೇಕಡಾ 6 ರಿಂದ ಮೇ ತಿಂಗಳಲ್ಲಿ ಶೇಕಡಾ 13 ಕ್ಕೆ ಏರಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಡೆಂಗ್ಯೂ ಹಾವಳಿ ಭೀತಿ : ಉತ್ತರ ಪ್ರದೇಶ ಹೈ ಅಲರ್ಟ್ ಘೋಷಣೆ,

Tue May 17 , 2022
  ಲಕ್ನೋ:ಮುಂಗಾರು ಹಂಗಾಮಿಗೂ ಮುನ್ನವೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕಂಗಾಲಾಗಿಸಿದೆ. ಉತ್ತರ ಪ್ರದೇಶವು ಡೆಂಗ್ಯೂ ಹರಡುವಿಕೆಯನ್ನು ಎದುರಿಸಲು ಅಗತ್ಯವಾದ ವೈದ್ಯಕೀಯ ಮೂಲಸೌಕರ್ಯವನ್ನು ಹೊಂದಿದೆ ಆದರೆ ತಡೆಗಟ್ಟುವ ಕೀಲಿಯು ಜನರ ಕೈಯಲ್ಲಿದೆ ಎಂದು ರಾಜ್ಯದ ಆರೋಗ್ಯ ಮಹಾನಿರ್ದೇಶಕ ವೇದವ್ರತ ಸಿಂಗ್ ಹೇಳಿದರು. ‘ರಾಜ್ಯದಲ್ಲಿ ಸದ್ಯ 70 ಲ್ಯಾಬ್‌ಗಳಲ್ಲಿ ಡೆಂಗ್ಯೂ ಪರೀಕ್ಷೆ ಸೌಲಭ್ಯವಿದ್ದು, ಇನ್ನೂ 88 ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬ್ಲಾಕ್ ಮಟ್ಟದಲ್ಲಿ ಕ್ಷಿಪ್ರ ಪ್ರತಿಕ್ರಿಯೆ (ಆರ್‌ಆರ್) ತಂಡಗಳನ್ನು […]

Advertisement

Wordpress Social Share Plugin powered by Ultimatelysocial