ಶಿವಶಕ್ತಿ ಮಿಂಚು: ಬಿಎಫ್‌ಸಿಗೆ ಜಯ,

ಬೆಂಗಳೂರು: ಶಿವಶಕ್ತಿ ನಾರಾಯಣನ್ ಅವರು ಗಳಿಸಿದ ಎರಡು ಸೊಗಸಾದ ಗೋಲುಗಳ ಬಲದಿಂದ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು.ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಬಿಎಫ್‌ಸಿ 3-1ರಿಂದ ಎಫ್‌ಸಿ ಗೋವಾ ತಂಡಕ್ಕೆ ಸೋಲುಣಿಸಿತು.ಇದರೊಂದಿಗೆ ಲೀಗ್‌ ಹಂತದಲ್ಲಿ ಮೂರನೇ ಸ್ಥಾನ ಗಳಿಸಿತು.ತೀವ್ರ ಪೈಪೋಟಿ ನಡೆದ ಪಂದ್ಯದಲ್ಲಿ ಆರನೇ ನಿಮಿಷದಲ್ಲೇ ಬಿಎಫ್‌ಸಿಗೆ ಮುನ್ನಡೆ ಸಿಕ್ಕಿತು. ರೋಶನ್ ನೊರೆಮ್‌ ಅವರು ಎಡಭಾಗದಿಂದ ನೀಡಿದ ಪಾಸ್‌ನಲ್ಲಿ ಚೆಂಡನ್ನು ಗುರಿ ಸೇರಿಸಿದ ಶಿವಶಕ್ತಿ ತವರಿನ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.33ನೇ ನಿಮಿಷದಲ್ಲಿ ಐಕರ್ ಗೌರೊಕ್ಸೆನಾ ಅವರು, ನೋಹ್‌ ವೈಲ್‌ ಸದೊಯಿ ನೆರವಿನಲ್ಲಿ ಹೆಡರ್‌ ಮೂಲಕ ಗೋಲು ಗಳಿಸಿ ಗೋವಾ ತಂಡ ಸಮಬಲ ಸಾಧಿಸುವಂತೆ ಮಾಡಿದರು. ಬಳಿಕ ಉಭಯ ತಂಡಗಳು ತೀವ್ರ ಪೈಪೋಟಿ ನಡೆಸಿದರೂ ಮೊದಲಾರ್ಧದ ಮುಕ್ತಾಯದವರೆಗೆ ಯಶಸ್ಸು ಸಿಗಲಿಲ್ಲ.76ನೇ ನಿಮಿಷದಲ್ಲಿ ಶಿವಶಕ್ತಿ ಮತ್ತೊಮ್ಮೆ ಮೋಡಿ ಮಾಡಿದರು. ರೋಶನ್, ಸುರೇಶ್ ವಾಂಗ್‌ಜಮ್‌ ಅವರು ಸೃಷ್ಟಿಸಿದ ಅವಕಾಶದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಇದು ‘ಆಫ್‌ಸೈಡ್‌’ ಆಗಿದೆ ಎಂದು ಗೋವಾ ಆಟಗಾರರು ಮಾಡಿದ ಆಕ್ಷೇಪವನ್ನು ರೆಫರಿಗಳು ತಿರಸ್ಕರಿಸಿದರು.81ನೇ ನಿಮಿಷದಲ್ಲಿ ಪ್ಯಾಬ್ಲೊ ಪೆರೆಜ್‌ ಅವರು ಬೆಂಗಳೂರು ತಂಡದ ಮೂರನೇ ಗೋಲು ದಾಖಲಿಸಿದರು. ಬಿಎಫ್‌ಸಿಗೆ ಟೂರ್ನಿಯಲ್ಲಿ ಇದು ಸತತ ಎಂಟನೇ ಜಯವಾಗಿದೆ.ಆರು ಹಳದಿ ಕಾರ್ಡ್‌: ಪಂದ್ಯದಲ್ಲಿ ಬಿಎಫ್‌ಸಿಯ ಪ್ರಬೀರ್ ದಾಸ್‌, ಜಯೇಶ್ ರಾಣೆ, ಸುನಿಲ್ ಚೆಟ್ರಿ, ಗೋವಾದ ಎಡು ಬೇಡಿಯಾ, ಮೊಹಮ್ಮದ್ ಫೆರಸ್‌, ಬ್ರೆಂಡನ್ ಫರ್ನಾಂಡಿಸ್‌ ಹಳದಿ ಕಾರ್ಡ್‌ ದರ್ಶನ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚನೆ ಕೇಸ್.

Tue Feb 28 , 2023
  ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚನೆ ಕೇಸ್ ಗಳು ಜಾಸ್ತಿ ಆಗ್ತಾ ಇರೋದು ಯಾಕೆ ಗೊತ್ತಾ ವಂಚಕರನ್ನು ಹಿಡಿಯೋಕೆ ಪೊಲೀಸರಿಗೆ ಕಷ್ಟ ಆಗ್ತಾ ಇರೋದು ಏನಕ್ಕೆ  ಆ ಎರಡು ಚಾಲೆಂಜ್ ಗಳನ್ನು ಪೊಲೀಸರು ಯಾಕೆ ಎದುರಿಸೋಕೆ ಕಷ್ಟ ಆಗ್ತಿದೆ ಒಬ್ಬೊಬ್ಬ ಸೈಬರ್ ವಂಚಕನ ಬಳಿ ಇದೆಯಂತೆ 100-200 ಸಿಮ್ ಗಳು ಒಂದು ವಂಚನೆ ಸಕ್ಸಸ್ ಆಗಿದ್ದೇ ಒಂದು ಸಿಮ್ ಕಾರ್ಡ್ ಬಿಸಾಡ್ತಾರಂತೆ ಇಂತಹ ನಯವಂಚಕರಿಗೆ ಸಿಮ್ ಕಾರ್ಡ್ ಗಳು ಬರ್ತಾ […]

Advertisement

Wordpress Social Share Plugin powered by Ultimatelysocial