ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚನೆ ಕೇಸ್.

 

ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚನೆ ಕೇಸ್ ಗಳು ಜಾಸ್ತಿ ಆಗ್ತಾ ಇರೋದು ಯಾಕೆ ಗೊತ್ತಾ ವಂಚಕರನ್ನು ಹಿಡಿಯೋಕೆ ಪೊಲೀಸರಿಗೆ ಕಷ್ಟ ಆಗ್ತಾ ಇರೋದು ಏನಕ್ಕೆ  ಆ ಎರಡು ಚಾಲೆಂಜ್ ಗಳನ್ನು ಪೊಲೀಸರು ಯಾಕೆ ಎದುರಿಸೋಕೆ ಕಷ್ಟ ಆಗ್ತಿದೆ ಒಬ್ಬೊಬ್ಬ ಸೈಬರ್ ವಂಚಕನ ಬಳಿ ಇದೆಯಂತೆ 100-200 ಸಿಮ್ ಗಳು ಒಂದು ವಂಚನೆ ಸಕ್ಸಸ್ ಆಗಿದ್ದೇ ಒಂದು ಸಿಮ್ ಕಾರ್ಡ್ ಬಿಸಾಡ್ತಾರಂತೆ ಇಂತಹ ನಯವಂಚಕರಿಗೆ ಸಿಮ್ ಕಾರ್ಡ್ ಗಳು ಬರ್ತಾ ಇರೋದು ರಾಜಸ್ತಾನದ ಭರತ್ ಪುರ್ ನಿಂದ ಒಬ್ಬೊಬ್ಬರಿಗೆ ಕೊರಿಯರ್ ಮೂಲಕ 100-200 ಸಿಮ್ ಗಳು ಬರ್ತಾ ಇದೆಯಂತೆ ಹಾಗಾದ್ರೆ ಈ ಸಿಮ್ ಕಾರ್ಡ್ ಗಳ ಮಾಫಿಯಾ ಹೇಗೆಲ್ಲಾ ನಡೀಯುತ್ತೆ ಗೊತ್ತಾ ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಜಾರ್ಖಂಡ್, ರಾಜಸ್ತಾನ ಹಾಗೂ ದೆಹಲಿಯ ಹೆಸರಿನಲ್ಲಿ ಇರ್ತಿರೋ ಸಿಮ್ ಕಾರ್ಡ್ ಗಳು ವಂಚನೆ ಆದ ಬಳಿಕ ಸಿಮ್ ಕಾರ್ಡ್ ಹಿಡಿದು ಹೋದ್ರೆ ಅಮಾಯಕರು ಸಿಕ್ತಾ ಇದ್ದಾರೆ ಅದು ಎಂತವರು ಅಂದ್ರೆ ಒಂದು ಹೊತ್ತಗೂ ಊಟಕ್ಕೆ ಗತಿ ಇಲ್ಲದೋರು ಸಿಕ್ತಾರೆ ಹೇಗೆ ಅವರ ಹೆಸರಿನ‌ ಸಿಮ್ ಕಾರ್ಡ್ ವಂಚಕರಿಗೆ ಸಿಗುತ್ತೆ ಅಂತ ಮಾಹಿತಿ ಕಲೆಹಾಕಿದ ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಆಧಾರ್ ಕಾರ್ಡ್, ವೋಟರ್ ಐಡಿ ರಿನೀವಲ್ ಹೆಸರಲ್ಲಿ ಮನೆ ಮನೆಗೂ ಹೋಗೋ ಸೈಬರ್ ವಂಚಕರು ಒಂದು ಮಿಷನ್ ತಗೊಂಡು ಹೋಗಿ ಅದ್ರಲ್ಲಿ ಅವರ ಫಿಂಗರ್ ಪ್ರಿಂಟ್ ಕಲೆಕ್ಟ್ ಮಾಡ್ತಾರೆ ನಂತ್ರ ಅದೇ ಫಿಂಗರ್ ಬಳಸಿ ಅವರಿಗೆ ಗೊತ್ತಾಗದ ಹಾಗೆ 10-15 ಸಿಮ್ ಖರೀದಿ ಮಾಡ್ತಾರೆ ಒಂದ್ ವೇಳೆ ಪೊಲೀಸರು ಅಡ್ರಸ್ ಟ್ರೇಸ್ ಮಾಡಿದ್ರೂ ಸಿಗದ ಹಾಗೆ ಸೈಬರ್ ವಂಚಕರ ಫ್ಲ್ಯಾನ್ ಇದಿಷ್ಟೇ ಅಲ್ಲದೆ ಇದೇ ತರ ಹತ್ತಾರು ನಕಲಿ ದಾಖಲೆ ನೀಡಿ ಬ್ಯಾಂಕ್ ಅಕೌಂಟ್ ಗಳು ಸಹ ಓಪನ್ ಒಂದು ಕೇಸ್ ಆಗಿದ್ದೇ ನಂಬರ್ ಹಾಗೂ ಅಡ್ರಸ್ ಜಾಡು ಹಿಡಿದು ಹೋಗ್ತಿರೋ ಪೊಲೀಸರು ಅಲ್ಲಿ ಹೋದ್ರೂ ಬರಿಗೈಲಿ ವಾಪಸ್ ಆಗ್ತಾ ಇದ್ದಾರೆ, ಯಾವುದೇ ವಂಚಕರು ಸಿಗ್ತಿಲ್ಲ ಹೀಗಾಗಿ ನಕಲಿ ಸಿಮ್ ಕಾರ್ಡ್ ಹಾಗೂ ನಕಲಿ ಅಕೌಂಟ್ ಎರಡು ನಮಗೆ ಚ್ಯಾಲೆಂಜಿಂಗ್ ಅಂತಿರೋ ಪೊಲೀಸರು ಇದೇ ಕಾರಣಕ್ಕೆ ಶೇ 60-70 ರಷ್ಟು ಸೈಬರ್ ಕೇಸ್ ಪತ್ತೆ ಮಾಡಲು ಆಗ್ತಿಲ್ಲ ಅಂತಿರೋ ಪೊಲೀಸರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಿ20 ಸಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಜೊತೆ ಬಿಲ್ ಗೇಟ್ಸ್,

Tue Feb 28 , 2023
ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ20 ಸಭೆಯ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಮಾರ್ಚ್ 1ರಂದು ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಪಾಲ್ಗೊಳ್ಳುತ್ತಿದ್ದಾರೆ.ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಈ ಬಾರಿಯ ಜಿ20 ಶೃಂಗಸಭೆಯನಿಮಿತ್ತ ನವದೆಹಲಿಯಲ್ಲಿ ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಕಾರ್ಯಕ್ರಮ ಮಾರ್ಚ್ 1, ಬುಧವಾರ ನಡೆಯಲಿದೆ. ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ಈ ಕಾರ್ಯಕ್ರಮದಲ್ಲಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ […]

Advertisement

Wordpress Social Share Plugin powered by Ultimatelysocial