ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ನೆಲನೆಲ್ಲಿಯ ಶಕ್ತಿ!

ಸಾಮಾನ್ಯವಾಗಿ ನೆಲ್ಲಿ ಬಗ್ಗೆ ಎಲ್ಲರಿಗೂ ಗೊತ್ತಿರುತ್ತೆ. ಆದ್ರೆ ನೆಲನೆಲ್ಲಿ ಬಗ್ಗೆ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಕೆಲವರಿಗೆ ಗೊತ್ತಿದ್ದರೂ ಅದನ್ನು ನೋಡಿರೋದಿಲ್ಲ. ಬಹುತೇಕರಿಗೆ ಅದರ ಔಷಧೀಯ ಗುಣಗಳ ಪರಿಚಯವೂ ಇರೋದಿಲ್ಲ. ನೆಲ್ಲಿಯ ಎಲೆಗಳನ್ನೇ ಹೋಲುವುದರ ಜೊತೆಗೆ, ನೆಲ್ಲಿ ಕಾಯಿಯನ್ನು ಹೋಲುವ, ಸಾಸಿವೆ ಗಾತ್ರದ ಕಾಳುಗಳು ಎಲೆಯ ಹಿಂಬದಿಗೆ ಅಂಟಿ ಕೊಂಡಿರುತ್ತವೆ.
ಹಾಗಾಗಿ, ಈ ಗಿಡ (Plant) ಕ್ಕೆ ನೆಲ ನೆಲ್ಲಿ ಎಂಬ ಹೆಸರು. ಹಸಿರು-ಕೆಂಪು ಮಿಶ್ರಿತ ಕಾಂಡದ ಈ ಗಿಡವು ಸಂಸ್ಕೃತ (Sanskrit) ದಲ್ಲಿ ಭೂಮ್ಯಾಮಲಕ, ಹಿಂದಿಯಲ್ಲಿ ಭೂ ಆಮ್ಲ (Bhu Amla) ಎಂದು ಕರೆಸಿಕೊಳ್ಳುತ್ತದೆ. ಕೇವಲ ಹೆಸರಷ್ಟೇ ಅಲ್ಲ, ಗುಣದಲ್ಲಿಯೂ ಇದು ಬೆಟ್ಟದ ನೆಲ್ಲಿಯನ್ನು ಹೋಲುತ್ತದೆ. ಗದ್ದೆ, ತೋಟಗಳಲ್ಲಿ ಬೆಳೆಯುವ ಈ ನೆಲನೆಲ್ಲಿ ನೋಡಲು ಪುಟ್ಟದಾಗಿದ್ದು, ಬೆಟ್ಟದಷ್ಟು ಪ್ರಯೋಜನ ಹೊಂದಿದೆ. ಈ ಸಸ್ಯದ ಆಯುರ್ವೇದ (Ayurveda) ಗುಣಗಳು ಹೀಗಿವೆ.
ಜ್ವರವನ್ನು ಕಡಿಮೆ ಮಾಡುತ್ತದೆ
ನೆಲನೆಲ್ಲಿಯ ಕಷಾಯ ಮಾಡುವಾಗ, ನೀರನ್ನು ಬಿಸಿಗಿರಿಸಿ, ನೆಲನೆಲ್ಲಿಯ ಎಲೆ, ಕೊಂಬೆ, ಕಾಯಿ, ಎಲ್ಲವನ್ನು ಕತ್ತರಿಸಿ ಹಾಕಬೇಕು, ನಂತರ ಅದಕ್ಕೆ ಅರ್ಧ ಇಂಚು ಶುಂಠಿಯನ್ನು ಜಜ್ಜಿ, ಮಾಡುತ್ತಿರುವ ಕಷಾಯಕ್ಕೆ ಹಾಕಬೇಕು, ನಂತರ ಕಾಲು ಚಮಚ ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ, ಮಂದ ಉರಿಯಲ್ಲಿ ಕುದಿಸಬೇಕು. ಇಳಿಸುವಾಗ ಚಿಟಿಕೆ ಅರಿಶಿನ, ಸ್ವಲ್ಪ ಸೈ0ಧವ ಲವಣ ಹಾಕಿ, ಒಂದು ನಿಮಿಷ ಬಿಟ್ಟು ಇಳಿಸಿ, ಸೋಸಿದರೆ, ಕಷಾಯ ಸಿದ್ದವಾಗುತ್ತದೆ. ಇದನ್ನು, 10-15 mಟ ನಷ್ಟನ್ನು ಘಂಟೆಗೊಮ್ಮೆ ಕುಡಿಯುತ್ತ ಬಂದರೆ ಇದು ಎಲ್ಲ ರೀತಿಯ ಜ್ವರಕ್ಕೂ ರಾಮಬಾಣವಾಗಿದೆ.ಚರ್ಮ ರೋಗ ನಿವಾರಣೆ
ಚರ್ಮ ರೋಗ ನಿವಾರಣೆಗಾಗಿ ನೆಲನೆಲ್ಲಿಯ ಎಲೆಯನ್ನು ಉಪ್ಪಿನೊಂದಿಗೆ ಅರೆದು, ಚರ್ಮಕ್ಕೆ ಲೇಪಿಸುವುದರಿಂದ ಚರ್ಮ ರೋಗ ಕಡಿಮೆಯಾಗುತ್ತದೆ.
ನೆಲನೆಲ್ಲಿಯು ರೋಗ ನಿರೋಧಕ ಶಕ್ತಿ ಹೆಚ್ಚಳ
ನೆಲನೆಲ್ಲಿಯು ಕಿಡ್ನಿಯ ಕಲ್ಲು ಕರಗಿಸಲು ಸಹಕಾರಿಯಾಗಿದೆ. ಕಿಡ್ನಿಯ ಕಲ್ಲು ಕರಗಿಸುವಲ್ಲಿ ನೆಲನೆಲ್ಲಿಯ ಪಾತ್ರ ಮಹತ್ವದ್ದು, ಆದ್ದರಿಂದ ಇದನ್ನು ಸ್ಟೋನ್ ಬ್ರೇಕರ್ ಎಂದು ಕೂಡ ಕರೆಯುತ್ತಾರೆ. ನೆಲನೆಲ್ಲಿಯ ಜ್ಯೂಸ್ ಮಾಡಿ ಸೇವಿಸುವುದರಿಂದ ಕಿಡ್ನಿಯ ಕಲ್ಲು ನಿಧಾನವಾಗಿ ಕರಗುತ್ತಾ ಬರುತ್ತದೆ.
ಲಿವರ್ ನ ಕಾರ್ಯಕ್ಷಮತೆ ಹೆಚ್ಚಿಸಿ ಹಸಿವು ಚೆನ್ನಾಗಿ ಆಗುತ್ತದೆ
ತಾಜಾ ಗಿಡ ಸಿಗದೇ ಹೋದರೆ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುವ ಒಣಗಿದ ಗಿಡದ ತುಂಡುಗಳನ್ನು ತಂದು 10 ಗ್ರಾಂನಷ್ಟು ಪುಡಿಯನ್ನು 150 ಮಿಲೀ ನೀರಿಗೆ ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಸಿ 40 ಮಿಲೀಗೆ ಇಳಿಸಿ ಸೋಸಿ ಕುಡಿಯಬೇಕು. ಅದರ ನುಣ್ಣನೆಯ ಪುಡಿಯನ್ನು ಬಳಸುವುದಾದರೆ ದಿನಕ್ಕೆ 3ರಿಂದ 6 ಗ್ರಾಂ ಪುಡಿಯನ್ನು ಬಿಸಿನೀರಿಗೆ ಹಾಕಿ ಕುಡಿಯಬಹುದು. ಇದಕ್ಕಿಂತಲೂ ತಾಜಾ ರಸ ಅಥವಾ ಕಷಾಯ ಬಳಸುವುದು ಸೂಕ್ತ. ಇದರಿಂದ ಲಿವರ್ ನ ಕಾರ್ಯಕ್ಷಮತೆ ಹೆಚ್ಚಿ ಹಸಿವು ಚೆನ್ನಾಗಿ ಆಗುತ್ತದೆ.
ಚಿಕ್ಕ ಮಕ್ಕಳಿಗೂ ಕಡಿಮೆ ಪ್ರಮಾಣದಲ್ಲಿ ಕೊಡಬಹುದು
ಚಿಕ್ಕ ಮಕ್ಕಳಿಗೂ ಕಡಿಮೆ ಪ್ರಮಾಣದಲ್ಲಿ ಕೊಡಬಹುದು. ಇದರಿಂದ ಮಕ್ಕಳಿಗೆ ಪದೇ ಪದೇ ಕಾಡುವ ನೆಗಡಿ, ಜ್ವರ, ಕೆಮ್ಮುಗಳು ಹತೋಟಿಗೆ ಬರುತ್ತವೆ. ಜೊತೆಗೆ ಬಾಯಿ ರುಚಿ ಹೆಚ್ಚಿ ಮಕ್ಕಳ ಆಹಾರ ಸೇವನೆಯ ಪ್ರಮಾಣ ಹೆಚ್ಚಾಗುತ್ತದೆ.
ನಿತ್ಯ ಕುಡಿಯುವ ಹರ್ಬಲ್ ಟೀಗಳಲ್ಲೂ ಇದನ್ನು ಬಳಸಬಹುದು
ನಿತ್ಯ ಕುಡಿಯುವ ಹರ್ಬಲ್ ಟೀಗಳಲ್ಲೂ ಇದನ್ನು ಬಳಸಬಹುದು. ಹೀಗೆ ಬಳಸುವುದರಿಂದ ಮೇಲೆ ಹೇಳಿದ ಸಮಸ್ಯೆಗಳು ಕಡಿಮೆಯಾಗುವುದೊಂದೇ ಅಲ್ಲ ಅವು ಇಲ್ಲದಿದ್ದರೆ ಬರದಂತೆಯೂ ತಡೆಯುತ್ತದೆ. ಮನೆಮುಂದೆ ಅಥವಾ ಟೆರೇಸ್ ನಲ್ಲಿ ಸ್ವಲ್ಪ ಜಾಗದಲ್ಲಿ ಬೆಳೆಸಿಕೊಂಡರೆ ವರ್ಷಪೂರ್ತಿ ಬಳಸಬಹುದು.
ಗಾಯ ವಾಸಿ ಮಾಡುವ ಗುಣವನ್ನು ಹೊಂದಿದೆ
ನೆಲನೆಲ್ಲಿಯು ಗಾಯ ವಾಸಿ ಮಾಡುವ ಗುಣವನ್ನು ಹೊಂದಿದೆ. ನೆಲನೆಲ್ಲಿಯ ಗಿಡವನ್ನು ಬೇರು ಸಮೇತವಾಗಿ, ಜಜ್ಜಿ, ಗಾಯಕ್ಕೆ ಲೇಪಿಸುವುದರಿಂದ, ಗಾಯವು ಬೇಗ ವಾಸಿಯಾಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಮದುವೆ ಖುಷಿಯಲ್ಲಿದ್ದ ತುಮಕೂರು ಪ್ರೇಮಿಗಳ ಬಾಳಲ್ಲಿ ಜವರಾಯನ ಅಟ್ಟಹಾಸ: ಅಲ್ಲಿ ಅಪಘಾತ, ಇಲ್ಲಿ ಆತ್ಮಹತ್ಯೆ!

Mon May 16 , 2022
ತುಮಕೂರು: ಅಪಘಾತದಲ್ಲಿ ಮೃತಪಟ್ಟ ಪ್ರಿಯತಮ ಸಾವನ್ನು ಅರಗಿಸಿಕೊಳ್ಳಲಾಗದೇ ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ತುಮಕೂರಿ ಅರೆಹಳ್ಳಿಯಲ್ಲಿ ನಡೆದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇವರಿಬ್ಬರ ಮದುವೆಯಾಗುವುದರಲ್ಲಿತ್ತು. ಎರಡು ವರ್ಷಗಳಿಂದ ಪ್ರೀತಿಸಿ ಮದುವೆಗೆ ಮನೆಯವರನ್ನೂ ಒಪ್ಪಿಸಿದ್ದ ಜೋಡಿ ಬಾಳಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಮೇ 11ರಂದು ಹುಡುಗ ಮೃತಪಟ್ಟಿದ್ದು 14ರಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಧನುಷ್ (23), ಸುಷ್ಮಾ (22) ಮೃತ ದುರ್ದೈವಿಗಳು.. ಮೇ 11ರಂದು ನೆಲಮಂಗಲ ಕುಲಾನಹಳ್ಳಿ ಬಳಿ ನಡೆದ ಅಪಘಾತದಲ್ಲಿ […]

Advertisement

Wordpress Social Share Plugin powered by Ultimatelysocial