ಯಾರು ಐನ್ ಸ್ಟೈನ್ ಮೆಚ್ಚಿದ ಹಾಸ್ಯಬ್ರಹ್ಮ?

ವಿಜ್ಞಾನಿಯ ಕುಚಿಕು ವಿದೂಷಕ 

ಕೆಲವರ ಮುಖ ಎಷ್ಟು ಜನಪ್ರೀಯ ಅಂದ್ರೆ ಅವರ ಒಂದು ಸಣ್ಣ ಲುಕ್ ಅಥವಾ ಒಂದು ಸಣ್ಣ ಫೋಟೋ ನೋಡಿದರೆ ಸಾಕು, ಪುಟ್ಟ ಮಗು ಕೂಡ ಗಮನಿಸಿ ಗುರುತಿಸಿ ಇದು ಇವರೇ ಅಂತಾ ನಿಖರವಾಗಿ ಹೇಳುಬಿಡುತ್ತೆ, ಅಂತಹ ಸಾಲಿಗೆ ಸೇರುವ ವಿಶ್ವ ಪ್ರಸಿದ್ಧ ಎರಡು ಜೀವಗಳೆಂದೆರೆ ಒಬ್ಬರು ಮಹಾನ್ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್. ಮತ್ತೊಬ್ಬರು ವಿಶ್ವ ವಿಖ್ಯಾತ ವಿದೂಷಕ ಚಾರ್ಲಿ ಚಾಪ್ಲಿನ್..!

ಐನ್ಸ್ಟೈನ್ ಎನ್ನುವ ಪದ ಬುದ್ಧಿವಂತಿಕೆ ಅಥವಾ ಜೀನಿಯಸ್ ಎನ್ನುವುದಕ್ಕೆ ಪರ್ಯಾಯ ಅಂತಾ ಇಡೀ ಜಗತ್ತೆ ಒಪ್ಪಿಕೊಂಡಿದೆ. ಅದರಂತೆ ಹಾಸ್ಯಕ್ಕೆ, ನಗುವಿಗೆ ಪರ್ಯಾಯ ಎಂದರೆ ಅದು ಚಾರ್ಲಿ ಚಾಪ್ಲಿನ್ ಒಬ್ಬರೆ ಎನ್ನುವುದು ಅಷ್ಟೇ ಸತ್ಯ. ಒಂದು ಹೆಸರು ವಿಜ್ಞಾನದ ವಿಶ್ವಕೋಶವಾದರೆ ಮತ್ತೊಂದು ಹೆಸರು ಹಾಸ್ಯದ ವಿಶ್ವವಿದ್ಯಾಲಯ.

ಸಾಪೇಕ್ಷನಾ ಸಿದ್ಧಾಂತದ ಮೂಲಕ ಐನ್ಸ್ಟೈನ್ ಜಗತ್ ವಿಖ್ಯಾತರಾಗಿದ್ದರು. ಒಟ್ಟಾರೆ ತಮ್ಮ ಜೀವಿತಾವಧಿಯಲ್ಲಿ ಐನ್ಸ್ಟೈನ್ 300ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನ ಮತ್ತು ಇತರ 150 ಕ್ಕೂ ಹೆಚ್ಚು ಪ್ರಬಂಧಗಳನ್ನು ಬರೆದಿದ್ದಾರೆ. ಅಲ್ಬರ್ಟ್ ಐನ್ ಸ್ಟೈನ್ ಅವರ ಜೀವನಗಾಥೆ ಖಂಡಿತವಾಗಿಯೂ ಒಂದು ಕುತೂಹಲಕಾರಿಯಾದ ವಿಷಯ. ಈ ಸಾಧನೆಗೆ ಕಾರಣ ಅಲ್ಬರ್ಟ್ ಅವರಲ್ಲಿ ಅಡಗಿದ್ದ ಕುತೂಹಲ ಮತ್ತು ಪ್ರತಿಯೊಂದು ವಿಷಯವನ್ನು ಪ್ರಯೋಗಕ್ಕೆ ಒಳಪಡಿಸುವ ಸ್ವಭಾವ. ಐನ್ಸ್ಟೈನ್ ಅವರ ಜೀವನ ಕೇವಲ ವಿಜ್ಞಾನ ಪ್ರಪಂಚಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರ ಜೀವನವೇ ಒಂದು ವಿಶ್ವಕೋಶ ಎಂದು ಹೇಳಬಹುದು. ನಿಮ್ಮ ಕೈಯನ್ನು ಬಿಸಿಯಾದ ಸ್ಟೋವ್ ಮೇಲಿಡಿ, ಒಂದು ನಿಮಿಷ ಕೂಡ ಒಂದು ಗಂಟೆಯಂತೆ ಭಾಸವಾಗುತ್ತದೆ. ಅದೇ ಸುಂದರವಾದ ಹುಡುಗಿಯ ಪಕ್ಕದಲ್ಲಿ ಕುಳಿತುಕೊಳ್ಳಿ, ಒಂದು ಗಂಟೆ ಕೂಡ ಒಂದು ನಿಮಿಷದಂತೆ ತೋರುತ್ತದೆ. ಇದೇ ಸಾಪೇಕ್ಷನಾ ಸಿದ್ಧಾಂತ ಎಂದು ತಮ್ಮ ಸಿದ್ಧಾಂತವನ್ನು ಸುಲಭವಾಗಿ ಅರ್ಥವಾಗುವಂತೆ ಹೇಳಿದ್ದರು ಆಲ್ಬರ್ಟ್ ಐನ್ ಸ್ಟೈನ್. ಅವರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಪ್ರಪಂಚ ಎಂದಿಗೂ ಮರೆಯಲಾಗದು.

ಇಂತಹ ಮಹಾನ್ ವಿಜ್ಞಾನಿ ಐನ್ ಸ್ಟೈನ್ ರನ್ನು ಕಾಣಲು ಅವರೊಂದಿಗೆ ಗುರುತಿಸಿಕೊಳ್ಳಲು ಸಾಕಷ್ಟು ಸಿರಿವಂತರು, ಸೆಲೆಬ್ರಿಟಿಗಳು ತುದಿಗಾಲಲ್ಲಿ ನಿಂತಿರುತ್ತಿದ್ದರು, ಇಂತಹ ವ್ಯಕ್ತಿತ್ವದ ಈ ಸಾಧಕನಿಗೆ ಮಾತ್ರ ಓರ್ವ ವ್ಯಕ್ತಿಯನ್ನು ಭೇಟಿ ಮಾಡುವ ಆಸೆಯಿತ್ತು. ಐನ್ ಸ್ಟೈನ್ ಭೇಟಿ ಮಾಡಲು ಹಾತೊರೆಯುತ್ತಿದ್ದ ಆ ವ್ಯಕ್ತಿ ಬೇರೆ ಯಾರು ಆಗಿರಲಿಲ್ಲ ಹಾಸ್ಯಲೋಕದ ಚಕ್ರವರ್ತಿ ಚಾರ್ಲಿ ಚಾಪ್ಲಿನ್ ಆಗಿದ್ದರು..!

ಪುಟ್ಟಮಕ್ಕಳಿಂದ ಹಿಡಿದು ಮುದುಕರವರೆಗೂ ಚಾಪ್ಲಿನ್ ರನ್ನು ಇಷ್ಟಪಡದವರು ಇಲ್ಲವೇ ಇಲ್ಲ ಎನ್ನಬಹುದು. ಸಮಾಜದ ನ್ಯೂನ್ಯತೆಗಳನ್ನು, ಬಣ್ಣದ ಮುಖವಾಡಗಳನ್ನು ತಮ್ಮ ಚಿತ್ರ ಮತ್ತು ಹಾಸ್ಯಾಭಿನಯದ ಮೂಲಕ ಬೆತ್ತಲೆಗೊಳಿಸುತ್ತಿದ್ದ ಈ ಅಪರೂಪದಲ್ಲಿಯೇ ಅಪರೂಪದ ನಟನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.

ಚಾಪ್ಲಿನ್ ಕಲಾ ಪಯಣ ಕಪ್ಪು-ಬಿಳುಪಿನ ಮೂಕಿ ಚಿತ್ರಗಳಿಂದ ಟಾಕಿ ಸಿನಿಮಾಗಳವರೆಗೂ ಸಾಗಿತ್ತು. ಸಾಗರದಾಚೆಗೂ ಈ ಹಾಸ್ಯ ಚಕ್ರವರ್ತಿಯ ಸಾಮ್ರಾಜ್ಯ ವಿಸ್ತಾರಗೊಂಡಿತ್ತು. ಈ ಬಹುಮುಖ ಪ್ರತಿಭೆ ಹಾಸ್ಯ ನಟನಾಗಿ ಮತ್ತು ನಿರ್ದೇಶಕನಾಗಿ ನಿರ್ಮಿಸಿದ್ದೆಲ್ಲವೂ ಇತಿಹಾಸ.ಚಾರ್ಲಿ ಸಂಗೀತ ನಿರ್ದೇಶನವನ್ನೂ ಮಾಡಿದ್ದರು ಎನ್ನುವುದು ಬಹಳಷ್ಟು ಜನಕ್ಕೆ ತಿಳಿದಿಲ್ಲ. ನಿಜ ಬದುಕಿನಲ್ಲಿ ಸಾವಿರಾರು ನೋವುಗಳನ್ನು ಅನುಭವಿಸುತ್ತಿದ್ದರೂ ತೆರೆಯ ಮೇಲೆ ಸದಾ ನಗುವಿನ ಮಳೆಯನ್ನೇ ಹರಿಸುತ್ತಿದ್ದ ಮಹಾನ್ ಕಲಾವಿದ ಈ ಚಾರ್ಲಿ ಚಾಪ್ಲಿನ್. ಇಂತಹ ಕಲಾವಿದನನ್ನು ಐನ್ ಸ್ಟೈನ್ ಇಷ್ಟಪಡದೆ ಇರಲು ಸಾಧ್ಯವೆ .?

ಐನ್ ಸ್ಟೈನ್ ನಂತಹ ಮಹಾ ಮೇಧಾವಿ ಕೂಡ ಹಾಸ್ಯ ಪ್ರವೃತ್ತಿಯ ವ್ಯಕ್ತಿಯಾಗಿದ್ದರು. ಹಾಗಾಗಿ ಅವರು ಚಾರ್ಲಿ ಚಾಪ್ಲಿನ್ ರನ್ನು ಭೇಟಿಯಾಗ ಬಯಸಿದ್ದರಲ್ಲಿ ಅಚ್ಚರಿಯೇನಿರಲಿಲ್ಲ. ಐನ್ ಸ್ಟೈನ್ ಅವರ ಈ ಆಸೆಯನ್ನು ಅರಿತ ಹಾಲಿವುಡ್ ಯುನಿವರ್ಸಲ್ ಸ್ಟೂಡಿಯೋ ಮಾಲೀಕ ಈ ದಿಗ್ಗಜರ ಸಮಾಗಮಕ್ಕೆ ಸೇತುವೆಯಾಗಿ ನಿಂತರು. 1931ರಲ್ಲಿ ಸಿಟಿ ಲೈಟ್ಸ್ ಚಿತ್ರದ ಪ್ರೀಮಿಯರ್ ನಲ್ಲಿ ಈ ಇಬ್ಬರು ಮೊದಲ ಬಾರಿಗೆ ಭೇಟಿಯಾದರು. ಅಲ್ಲಿಂದ ಆರಂಭವಾದ ಇವರಿಬ್ಬರ ಸ್ನೇಹ ಪಯಣ ಕಡೆಯವರೆಗೂ ಸಾಗೀತು.

ಸಂದರ್ಶನ ಒಂದರಲ್ಲಿ ಚಾರ್ಲಿ ಚಾಪ್ಲಿನ್ ಕುರಿತು ಮಾತನಾಡಿದ್ದ ಐನ್ ಸ್ಟೈನ್ ‘ನೀವು ಒಂದು ಮಾತನ್ನೂ ಆಡದೇ ಇದ್ದರೂ ಜಗತ್ತು ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತೆ. ನಿಮ್ಮನ್ನು ಮೆಚ್ಚಿಕೊಳ್ಳುತ್ತದೆ. ನಿಮ್ಮಲ್ಲಿ ಅಡಗಿರುವ ಪ್ರತಿಭೆ ಅಗಾಧವಾದದ್ದು’ ಎಂದರಂತೆ. ಐನ್ ಸ್ಟೈನ್ ಅವರ ಈ ಪ್ರಶಂಸೆಯ ಮಾತುಗಳನ್ನು ಕೇಳಿದ ಚಾರ್ಲಿ ಚಾಪ್ಲಿನ್ ‘ನಿಮ್ಮ ಕೀರ್ತಿ ಅದಕ್ಕಿಂತಲೂ ವಿಶಾಲವಾದದ್ದು ಯಾಕೆಂದರೆ ನಿಮ್ಮ ಒಂದು ಮಾತನ್ನೂ ಅರ್ಥಮಾಡಿಕೊಳ್ಳಲಾಗದವರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ’ ಎಂದು ಹಾಸ್ಯ ಚಟಾಕಿ ಹಾರಿಸಿದ್ದರಂತೆ.ಹೀಗೆ ಈ ದಿಗ್ಗಜರ ಸ್ನೇಹ ಅವರಿರುವವರೆಗೂ ಸಾಗಿತ್ತು. ನಮ್ಮ ಸುತ್ತ-ಮುತ್ತ ಇರುವ ಸೆಲೆಬ್ರಿಟಿಗಳು ಎನಿಸಿಕೊಂಡ ಜನರು ಇಂತಹ ಅಪ್ರತಿಮ ಅಪರೂಪದ ವ್ಯಕ್ತಿಗಳಿಂದ ಕಲಿಯುವುದು ಬಹಳಷ್ಟಿದೆ. ನಾನೇ ದೊಡ್ಡ ಸಾಧಕ ಎಂದುಕೊಂಡವರು ಇಂತಹ ಜಗತ ಪ್ರಸಿದ್ಧ ಸಾಧಕರ ಮುಂದೇ ತಾವು ಏನು ಅಲ್ಲ ಎನ್ನುವುದನ್ನು ಅರಿಯಬೇಕು.

Please follow and like us:

Leave a Reply

Your email address will not be published. Required fields are marked *

Next Post

ರಾಯಲ್ಸ್ ಟಕ್ಕರ್:ಪಂಜಾಬ್ ಪಂಚರ್

Sat Oct 31 , 2020
ಸತತ ಐದು ಗೆಲುವಿನೊಂದಿಗೆ ಪ್ಲೇ ಆಫ್ ಆಸೆ ಜೀವಂತವಾಗಿರಿಸಿಕೊಂಡಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿನ್ನೆ ಶಾಕ್ ಎದುರಾಯಿತು. ರಾಜಸ್ಥಾನ ರಾಯಲ್ಸ್ ವಿರುದ್ಧ ಕಠಿಣ ಸವಾಲು ಪೇರಿಸಿದರೂ ಪಂಜಾಬ್ ಪರಭಾಗೊಂಡಿತು.ಸ್ಮಿತ್,ಸಂಜು,ಸ್ಟೋಕ್ಸ್ ಸ್ಫೋಟಕ ಆಟದ ಎದುರು ಪಂಜಾಬ್ ಗೆಲುವಿನ ಕನಸು ಭಗ್ನಗೊಂಡಿತು. ಅಬುಧಾಬಿಯ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ನಡೆದ 13 ನೇ ಆವೃತಿಯ ಐಪಿಎಲ್ನ 50ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾದವು. ಉಭಯ ತಂಡಗಳಿಗೂ […]

Advertisement

Wordpress Social Share Plugin powered by Ultimatelysocial