ಶ್ರೀಲಂಕಾ ಹುಡುಗಿ ಜೊತೆ ತಮಿಳು ನಟ ಸಿಂಭು ಕಲ್ಯಾಣ.

ಮಿಳಿನ ಖ್ಯಾತ ನಟ ಸಿಲಂಬರಸನ್ ಅಲಿಯಾಸ್ ಸಿಂಭು ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಸಿಂಭು ಶ್ರೀಲಂಕಾದಈಗಾಗಲೇ ಸಿಂಭು ಅವರ ಕಿರಿಯ ಸಹೋದರಿ ಮತ್ತು ಸಹೋದರನಿಗೆ ಮದುವೆ ಆಗಿದೆ. ಆದರೂ, ಕೂಡ ಸಿಂಭು ಮದುವೆ ಬಗ್ಗೆ ಯೋಚಿಸಿರಲಿಲ್ಲ. ಈ ಕುರಿತು ಯಾರೇ ಪ್ರಶ್ನೆ ಮಾಡಿದರೂ, ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು. ಆದಷ್ಟು ಮದುವೆ ಕುರಿತಾಗಿ ಚರ್ಚೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಇದೀಗ ಮದುವೆ ಆಗಲು ಸಿಂಬು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.42 ವರ್ಷ ವಯಸ್ಸಿನ ಸಿಂಭು, ತಮಿಳು ಕುಟುಂಬದ ಶ್ರೀಲಂಕಾ ಉದ್ಯಮಿಯ ಮಗಳ ಜೊತೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಆ ಹುಡುಗಿ ವೃತ್ತಿಯಲ್ಲಿ ವೈದ್ಯೆ ಎಂದು ಹೇಳಲಾಗುತ್ತಿದೆ.ಶ್ರೀಮಂತ ಉದ್ಯಮಿಯೊಬ್ಬರ ಮಗಳನ್ನು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಎರಡೂ ಕುಟುಂಬಗಳ ಮಾತುಕತೆ ಕೂಡ ಮುಗಿದಿದೆ ಎನ್ನಲಾಗುತ್ತಿದೆ.ಸಿಂಭು ಮದುವೆಯಾಗಲು ಹಲವರು ತುದಿಗಾಲಲ್ಲಿ ನಿಂತಿದ್ದರು. ಆದರೆ, ಅಷ್ಟು ಸುಲಭಕ್ಕೆ ಸಿಂಭು ಒಪ್ಪುತ್ತಿರಲಿಲ್ಲ. ಅದಕ್ಕೆ ಅನೇಕ ಕಾರಣಗಳನ್ನು ಹೇಳಲಾಗುತ್ತಿದೆ. ತಮ್ಮ ಜೊತೆ ನಟಿಸಿದ್ದ ಹೆಸರಾಂತ ನಾಯಕಿಯನ್ನು ಅವರು ಪ್ರೀತಿಸುತ್ತಿದ್ದರಂತೆ. ಆದರೆ, ಆಕೆಯನ್ನು ಪಡೆಯಲಾಗಲಿಲ್ಲ ಎನ್ನುವ ನೋವು ಅವರಲ್ಲಿ ಉಳಿದಿತ್ತು ಎಂದು ಹೇಳಲಾಗುತ್ತಿದೆ. ಅಲ್ಲದೇ, ನಯನತಾರಾ, ತ್ರಿಶಾ ಸೇರಿದಂತೆ ಹಲವು ನಾಯಕಿಯರ ಹೆಸರು ಕೂಡ ಸಿಂಭು ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಹೀಗಾಗಿ ಅವರು ವಿವಾಹದಿಂದ ದೂರ ಉಳಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಖಿ ಸಾವಂತ್! ಮೂರನೇ ಮದ್ವೆ ಫಿಕ್ಸ್?

Sat Feb 25 , 2023
ಬಾಲಿವುಡ್‌ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯ ಮೂಲಕ ಮತ್ತೆ ಲೈಮ್ ಲೈಟ್‌ಗೆ ಬಂದಿದ್ದಾರೆ. ನಟಿ ಶೀಘ್ರ ಮತ್ತೊಂದು ಮದುವೆಯಾಗುತ್ತಾರಾ?ರಾಖಿ ಇತ್ತೀಚೆಗೆ ತನ್ನ ಪತಿ ಆದಿಲ್ ಖಾನ್ ದುರಾನಿಯನ್ನು ಜೈಲಿಗೆ ಕಳುಹಿಸಿದ್ದರು.ಪತಿ ವಿರುದ್ಧ ಗಂಭೀರ ಆರೋಪಗಳನ್ನೂ ಮಾಡಿದ್ದರು.ಆದಿಲ್ ಜೊತೆ ರಾಖಿ ಎರಡನೇ ಮದುವೆಯಾಗಿದ್ದಾರೆ. ಇದಕ್ಕೂ ಮೊದಲು ರಾಕೇಶ್ ಎಂಬಾತನನ್ನು ಮದುವೆಯಾಗಿದ್ದರು. ಆದರೆ ಆ ಮದುವೆ ವರ್ಕೌಟ್ ಆಗಲ್ಲ.ರಾಖಿಯ ಎರಡೂ ಮದುವೆ ಮುರಿದು ಬಿದ್ದ ನಂತರ ಇದೀಗ ಮೂರನೇ ಮದುವೆಯ ಸಿದ್ಧತೆಯಲ್ಲಿದ್ದಾರೆ […]

Advertisement

Wordpress Social Share Plugin powered by Ultimatelysocial