ರಾಖಿ ಸಾವಂತ್! ಮೂರನೇ ಮದ್ವೆ ಫಿಕ್ಸ್?

ಬಾಲಿವುಡ್‌ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ಮದುವೆಯ ಮೂಲಕ ಮತ್ತೆ ಲೈಮ್ ಲೈಟ್‌ಗೆ ಬಂದಿದ್ದಾರೆ. ನಟಿ ಶೀಘ್ರ ಮತ್ತೊಂದು ಮದುವೆಯಾಗುತ್ತಾರಾ?ರಾಖಿ ಇತ್ತೀಚೆಗೆ ತನ್ನ ಪತಿ ಆದಿಲ್ ಖಾನ್ ದುರಾನಿಯನ್ನು ಜೈಲಿಗೆ ಕಳುಹಿಸಿದ್ದರು.ಪತಿ ವಿರುದ್ಧ ಗಂಭೀರ ಆರೋಪಗಳನ್ನೂ ಮಾಡಿದ್ದರು.ಆದಿಲ್ ಜೊತೆ ರಾಖಿ ಎರಡನೇ ಮದುವೆಯಾಗಿದ್ದಾರೆ. ಇದಕ್ಕೂ ಮೊದಲು ರಾಕೇಶ್ ಎಂಬಾತನನ್ನು ಮದುವೆಯಾಗಿದ್ದರು. ಆದರೆ ಆ ಮದುವೆ ವರ್ಕೌಟ್ ಆಗಲ್ಲ.ರಾಖಿಯ ಎರಡೂ ಮದುವೆ ಮುರಿದು ಬಿದ್ದ ನಂತರ ಇದೀಗ ಮೂರನೇ ಮದುವೆಯ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.ಬ್ರೈಡಲ್ ಲುಕ್ ನಲ್ಲಿರುವ ರಾಖಿ ಫೋಟೋ ಈ ಚರ್ಚೆಗೆ ಕಾರಣವಾಗಿದೆ. ನಟಿ ಕ್ಯೂಟ್ ಆಗಿ ರೆಡಿಯಾಗಿ ಕಾಣಿಸಿಕೊಂಡಿದ್ದಾರೆ.ಕೈಯಲ್ಲಿ ಬಣ್ಣದ ಬಳೆಗಳು, ತಲೆಯ ಮೇಲೆ ಸುಂದರವಾದ ದುಪಟ್ಟಾ ಮತ್ತು ವಧುವಿನ ಉಡುಗೆಯಲ್ಲಿ ರಾಖಿ ಮಾಧ್ಯಮದ ಮುಂದೆ ಕಾಣಿಸಿಕೊಂಡರು.ರಾಖಿಯ ಈ ಗೆಟಪ್ ನೋಡಿದ ಎಲ್ಲರೂ ಈಕೆ ಮತ್ತೆ ಮದುವೆಯಾಗ್ತಾರಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ರಾಖಿ ಈ ಬಗ್ಗೆ ವಿವರಣೆ ನೀಡಿದ್ದಾರೆ.ಇನ್ನು ಸತ್ತರೂ ನಾನು ಮತ್ತೆ ಮದುವೆಯಾಗುವುದಿಲ್ಲ. ಸತ್ತು ಸಮಾಧಿಯಾದರೂ ನಾನು ಮದುವೆಯಾಗಲ್ಲ ಎಂದು ರಾಖಿ ಹೇಳಿದ್ದಾರೆ. ನನ್ನ ಹೊಸ ಹಾಡು ಬರುತ್ತಿದೆ. ಇದರಲ್ಲಿ ನಾನು ವಧುವಿನ ಲುಕ್​ನಲ್ಲಿ ಬರಲಿದ್ದೇನೆ ಎಂದಿದ್ದಾರೆ.ರಾಖಿ ತನ್ನ ಹೊಸ ಹಾಡಿನಲ್ಲಿ ಬರುವ ತನ್ನ ಸಹ-ನಟನನ್ನು ಎಲ್ಲರಿಗೂ ಪರಿಚಯಿಸಿದರು. ಆದರೆ ರಾಖಿ ಬ್ರೈಡಲ್ ಲುಕ್‌ನಲ್ಲಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಅಕ್ಷಯ್ ಕುಮಾರ್ ನಟನೆಯ 'ಸೆಲ್ಫೀ'

Sat Feb 25 , 2023
ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಯಾವ ಭಾಷೆಯ ಚಿತ್ರಗಳನ್ನು ಬೇಕಿದ್ದರೂ ನೋಡಬಹುದು. ಈ ಕಾಲದಲ್ಲೂ ಅಕ್ಷಯ್ ಕುಮಾರ್ ಅವರು ಬಿಟ್ಟೂ ಬಿಡದೆ ರಿಮೇಕ್ ತಂತ್ರದ ಮೊರೆ ಹೋಗುತ್ತಿದ್ದಾರೆ.ನಟ ಅಕ್ಷಯ್ ಕುಮಾರ್ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದ್ದ ಕಾಲ ಒಂದಿತ್ತು.ಆದರೆ, ಈಗ ಕಾಲ ಬಲಾಗಿದೆ. ಅವರು ಹೋದಲ್ಲೆಲ್ಲ ಸೋಲು ಕಾಣುತ್ತಿದ್ದಾರೆ. ಸಾಲು ಸಾಲು ರಿಮೇಕ್ ಮಾಡಿ ಫ್ಲಾಪ್ ಹೊಡಿಸಿಕೊಳ್ಳುತ್ತಿದ್ದಾರೆ. ಅವರ ನಟನೆಯ ‘ಸೆಲ್ಫೀ’ ಚಿತ್ರ ಸೋಲಿನ ರುಚಿ ಕಂಡಿದೆ. ಈ ಸಿನಿಮಾದ […]

Advertisement

Wordpress Social Share Plugin powered by Ultimatelysocial