ಕೆವೈಸಿ ಮಾಡದಿದ್ದರೆ ಖಾತೆ ಬಂದ್! ಹೊಸ ವರ್ಷಕ್ಕೆ ಆರ್​ಬಿಐ ಹೊಸ ನಿಯಮ ಗ್ರಾಹಕರು ಅಗತ್ಯ ದಾಖಲೆ ನೀಡುವುದು ಕಡ್ಡಾಯ

ಕೆವೈಸಿ ಮಾಡದಿದ್ದರೆ ಖಾತೆ ಬಂದ್! ಹೊಸ ವರ್ಷಕ್ಕೆ ಆರ್​ಬಿಐ ಹೊಸ ನಿಯಮ ಗ್ರಾಹಕರು ಅಗತ್ಯ ದಾಖಲೆ ನೀಡುವುದು ಕಡ್ಡಾಯ

ಮುಂಬೈ: ಬ್ಯಾಂಕ್ ಖಾತೆಗಳ ಕೆವೈಸಿ (ಗ್ರಾಹಕರ ಅಗತ್ಯ ಮಾಹಿತಿ) ನಿಯಮ ಪಾಲಿಸದ ವ್ಯಕ್ತಿಗಳಿಗೆ ಹೊಸ ವರ್ಷದಲ್ಲಿ ಶಾಕ್ ಕಾದಿದೆ. ಇಂಥವರ ಖಾತೆಯನ್ನು ಬ್ಯಾಂಕ್​ಗಳು ನಿಷ್ಕ್ರಿಯಗೊಳಿಸುವ ಸಾಧ್ಯತೆ. ಆರ್​ಬಿಐ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಈ ನಿಯಮ ಜ.1ರಿಂದಲೇ ಜಾರಿಗೆ ಬರಲಿದೆ.

ದೇಶದಲ್ಲಿ ಲಕ್ಷಾಂತರ ಬ್ಯಾಂಕ್ ಖಾತೆಗಳು ಇನ್ನೂ ಅಗತ್ಯ ಕೆವೈಸಿ ನಿಯಮ ಪಾಲನೆ ಮಾಡಿಲ್ಲ. ವೈಯಕ್ತಿಕ ಖಾತೆಗಳ ಜತೆಗೆ ದೊಡ್ಡ ಹಣಕಾಸು ಸಂಸ್ಥೆಗಳ ಖಾತೆಗಳೂ ಇದರಲ್ಲಿ ಸೇರಿವೆ ಎನ್ನಲಾಗಿದೆ. ಕೆವೈಸಿ ಕಡ್ಡಾಯ ನಿಯಮವನ್ನು ಆರ್​ಬಿಐ ಈ ಹಿಂದೆಯೇ ಜಾರಿ ಮಾಡಿದೆ. ಕೆವೈಸಿ ಆಗದ ಖಾತೆಗಳನ್ನು ಸ್ಥಗಿತ ಮಾಡಲು ಹಲವು ತಿಂಗಳ ಹಿಂದೆಯೇ ಆದೇಶ ಹೊರಡಿಸಿತ್ತು. ಆದರೆ ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಈ ಆದೇಶವನ್ನು ಡಿ. 31ರ ವರೆಗೆ ಮುಂದೂಡಿತ್ತು. ಈಗ ಅವಧಿ ಮುಕ್ತಾಯ ವಾಗುತ್ತಿದ್ದು, ಲಕ್ಷಾಂತರ ಖಾತೆಗಳು ಕ್ರಮ ಎದುರಿಸುವ ಸಾಧ್ಯತೆ ಇದೆ.

ಯಾಕೆ ನಿಯಮ?: ಹಣಕಾಸು ಅಕ್ರಮಗಳನ್ನು ನಿಯಂತ್ರಿಸಲು ಆರ್​ಬಿಐ ಈ ನಿಯಮ ರೂಪಿಸಿದೆ. ಬೇನಾಮಿ, ನಕಲಿ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆ ತಡೆ ಇನ್ನಿತರ ಉದ್ದೇಶಕ್ಕೆ ಖಾತೆದಾರರ ಪೂರ್ಣ ವಿವರ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಖಾತೆದಾರರ ಅಧಿಕೃತ ಗುರುತು, ವಿಳಾಸ, ಪ್ಯಾನ್, ಆಧಾರ್ ಸಂಖ್ಯೆ ಇನ್ನಿತರ ವಿವರವನ್ನು ಬ್ಯಾಂಕ್​ಗಳಿಗೆ ನೀಡಬೇಕಿದೆ.

ಮೋಸದ ಕರೆಗೆ ಎಚ್ಚರ: ಕೆವೈಸಿ ನೆಪದಲ್ಲಿ ಹಣ ಲಪಟಾಯಿಸುವ ಸೈಬರ್ ಕಳ್ಳರ ಬಗ್ಗೆ ಗ್ರಾಹಕರು ಎಚ್ಚರದಿಂದ ಇರಬೇಕು. ದೂರವಾಣಿ ಮೂಲಕವೇ ಪಾಸ್​ವರ್ಡ್, ಎಟಿಎಂ ಪಿನ್, ಸಿವಿವಿ ಸಂಖ್ಯೆಗಳನ್ನು ಪಡೆದು ಖಾತೆಯಿಂದ ಹಣ ದೋಚುವ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಗ್ರಾಹಕರು ಈ ಬಗ್ಗೆ ಜಾಗೃತಿ ಹೊಂದುವುದು ಅಗತ್ಯ.

ಯಾರಿಗೆ ಅಗತ್ಯ?: ಸಾಮಾನ್ಯ ಉಳಿತಾಯ ಖಾತೆಗಳನ್ನು ಹೊಂದಿ ರುವ ವ್ಯಕ್ತಿಗಳು ನಿಯಮ ಪ್ರಕಾರ 10 ವರ್ಷಕ್ಕೆ ಒಮ್ಮೆ ಕೆವೈಸಿ ಅಪ್​ಡೇಟ್ ಮಾಡಿದರೆ ಸಾಕು. ಖಾತೆ ತೆರೆಯುವಾಗಲೇ ಪೂರ್ಣ ಕೆವೈಸಿ ಪ್ರಕ್ರಿಯೆ ಮುಗಿಸಿದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅತ್ಯಧಿಕ ಮೊತ್ತದ ವಹಿವಾಟು ಹೊಂದಿರುವ, ಹೈರಿಸ್ಕ್ ಎಂದು ಪರಿಗಣಿಸಲಾಗುವ ಖಾತೆಗೆ 2 ವರ್ಷಕ್ಕೊಮ್ಮೆ ಕೆವೈಸಿ ದಾಖಲೆ ನೀಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ಜನತೆಗೆ ಮತ್ತೊಂದು ಸಿಹಿಸುದ್ದಿ : 93 ಲಕ್ಷ ಮನೆಗಳಿಗೆ ನಳ ಸಂಪರ್ಕ

Sat Dec 25 , 2021
ಬೆಳಗಾವಿ : ಜಲಜೀವನ ಮಿಶನ್ ಯೋಜನೆ (Jaljeevan Mission Yojana) ಅಡಿ ರಾಜ್ಯದಲ್ಲಿ 2023-24ರೊಳಗೆ 93ಲಕ್ಷ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿದ್ದು,ನಿತ್ಯವೂ 10 ಸಾವಿರ ಮನೆಗಳಿಗೆ ನಳ ಸಂಪರ್ಕ ಒದಗಿಸಲಾಗುತ್ತಿದ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು. ಸದಸ್ಯ ಎನ್.ರವಿಕುಮಾರ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಜಲಜೀವ ಮಿಶನ್ ಯೋಜನೆ ಅಡಿ ಇದುವರೆಗೆ 17.40ಲಕ್ಷ ಮನೆಗಳಿಗೆ ನಳಸಂಪರ್ಕ ಕಲ್ಪಿಸಲಾಗಿದೆ ಎಂದರು. ಜಲಜೀವನ್ […]

Advertisement

Wordpress Social Share Plugin powered by Ultimatelysocial