ದೇಶೀ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡು ಓಡಾಡುತ್ತಿದ್ದ ಶಿಕ್ಷಕಿಯನ್ನು ಬಂಧಿಸಿರುವ ಘಟನೆ!

ಲಕ್ನೋ: ದೇಶೀ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡು ಓಡಾಡುತ್ತಿದ್ದ ಶಿಕ್ಷಕಿಯನ್ನು ಬಂಧಿಸಿರುವ ಘಟನೆ ಮಂಗಳವಾರ (ಏಪ್ರಿಲ್ 12) ಉತ್ತರಪ್ರದೇಶದ ಮೈನ್ ಪುರಿಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಶಿಕ್ಷಕಿಯನ್ನು ಫಿರೋಜಾಬಾದ್ ಶಾಲೆಯ ಕರೀಶ್ಮಾ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ.

ಕೆಲಸದ ನಿಮಿತ್ತ ಆಕೆ ಮಂಗಳವಾರ ಮೈನ್ ಪುರಿಗೆ ತೆರಳಿದ್ದಳು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಕೋಟ್ವಾಲಿ ಪ್ರದೇಶದಲ್ಲಿ ಮಹಿಳೆಯೊಬ್ಬಳು ಪಿಸ್ತೂಲ್ ಹಿಡಿದು ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ನಂತರ ಆಕೆಯನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು.

ನೀಲಿ ಬಣ್ಣದ ಜೀನ್ಸ್ ಧರಿಸಿದ್ದ ಯಾದವ್ ಬಳಿ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ವೊಬ್ಬರು ಆಕೆಯ ತಪಾಸಣೆ ನಡೆಸಿದಾಗ 315 ಬೋರ್ ದೇಶೀ ನಿರ್ಮಿತ ಪಿಸ್ತೂಲ್ ಪತ್ತೆಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದಾಗಿ ವರದಿ ವಿವರಿಸಿದೆ.

ಶಿಕ್ಷಕಿಯನ್ನು ಬಂಧಿಸಿದ್ದು, ಭಾರತೀಯ ದಂಡ ಸಂಹಿತೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಕೆ ಪಿಸ್ತೂಲ್ ಇಟ್ಟುಕೊಂಡು ತಿರುಗಾಡುತ್ತಿದ್ದ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆ ಮನೆಯ ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿದ್ದರು.!

Wed Apr 13 , 2022
ಶಿವಮೊಗ್ಗ: ಆ ಮನೆಯ ಕುಟುಂಬ ಸದಸ್ಯರೊಬ್ಬರು ಮೃತಪಟ್ಟಿದ್ದರು. ನೋವಿನಲ್ಲೇ ಕುಟುಂಬಸ್ಥರು ಮೃತನ ಅಂತ್ಯಕ್ರಿಯೆ ನೆರವೇರಿಸಿದ್ದರು. ಸಾವಿನ ಮನೆಯಲ್ಲಿ ದುಃಖ ಮಡುಗಟ್ಟಿತ್ತು. ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇತಂಹ ಸಂಕಷ್ಟ ಸನ್ನಿವೇಶದಲ್ಲಿ ಜ್ಯೋತಿಷಿ ಹೇಳಿದ ಆ ಮಾತನ್ನು ಪಾಲಿಸಿದ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾವಿನ ಮನೆಯಲ್ಲಿ ಒಂದು ದಿನ ಯಾರೂ ಇರಬಾರದು. ಇಲ್ಲವಾದರೆ ಒಳ್ಳೆಯದಾಗಲ್ಲ…’ ಎಂಬ ಜ್ಯೋತಿಷಿ ಮಾತು ನಂಬಿದ ಕುಟುಂಬ ಅವರ ಸಲಹೆ ಪಾಲಿಸಲು ಆ ರಾತ್ರಿ ಲಾಡ್ಜ್‌ನಲ್ಲಿ […]

Advertisement

Wordpress Social Share Plugin powered by Ultimatelysocial