ಹಿಂದಿನೆರಡು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ಗೆ 2012ರ ಐಪಿಎಲ್‌ ದುರದೃಷ್ಟಕರವಾಗಿ ಕಾಡಿತು.

 

ಅದು ಕೂಟದ ಉದ್ಘಾಟನಾ ಪಂದ್ಯದಲ್ಲಿ ಮುಂಬೈಗೆ ಸೋತರೆ, ಫೈನಲ್‌ ಹಣಾಹಣಿಯಲ್ಲಿ ಕೋಲ್ಕತಾ ನೈಟ್‌ರೈಡರ್ ಗೆ ಶರಣಾಯಿತು.

ಕೂಟದ ಆರಂಭಿಕ ಪಂದ್ಯದ ತಾಣ ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’.

ಆತಿಥೇಯ ಚೆನ್ನೈ ಇಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಎದುರಿಸಿತು. ಶೋಚನೀಯ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿ 8 ವಿಕೆಟ್‌ಗಳ ಸೋಲಿಗೆ ತುತ್ತಾಯಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಚೆನ್ನೈ 19.5 ಓವರ್‌ಗಳಲ್ಲಿ ಬರೀ 112ಕ್ಕೆ ಕುಸಿಯಿತು. ಇದರಲ್ಲಿ 12 ಎಕ್ಸ್‌ಟ್ರಾ ರನ್‌ ಆಗಿತ್ತು. ಜವಾಬಿತ್ತ ಮುಂಬೈ 16.5 ಓವರ್‌ಗಳಲ್ಲಿ 2 ವಿಕೆಟಿಗೆ 115 ರನ್‌ ಬಾರಿಸಿ ಧೋನಿ ಪಡೆಯನ್ನು ತವರಿನ ಅಂಗಳದಲ್ಲೇ ಮಣಿಸಿತು.

ಲಸಿತ ಮಾಲಿಂಗ, ಪ್ರಾಗ್ಯಾನ್‌ ಓಜಾ, ಕೈರನ್‌ ಪೊಲಾರ್ಡ್‌ ದಾಳಿಗೆ ಸಿಲುಕಿದ ಚೆನ್ನೈ ಯಾವ ಹಂತದಲ್ಲೂ ಚೇತರಿಕೆಯ ಲಕ್ಷಣ ಕಾಣಲಿಲ್ಲ. ಇವರೆಲ್ಲ ಸೇರಿ ಬಿಗಿಯಾದ ದಾಳಿ ನಡೆಸಿ ಎರಡೆರಡು ವಿಕೆಟ್‌ ಉಡಾಯಿಸಿದರು. ಚೆನ್ನೈ ಸರದಿಯಲ್ಲಿ ಸಿಡಿದದ್ದು 6 ಫೋರ್‌ ಹಾಗೂ ಒಂದು ಸಿಕ್ಸರ್‌ ಮಾತ್ರ. ಕೇವಲ 3 ಬ್ಯಾಟರ್‌ಗಳಿಂದಷ್ಟೇ ಈ ಹೊಡೆತ ದಾಖಲಾಗಿತ್ತು.

ಡು ಪ್ಲೆಸಿಸ್‌ ಮೊದಲ ಓವರ್‌ನಲ್ಲೇ ರನೌಟ್‌ ಆಗುವುದರೊಂದಿಗೆ ಚೆನ್ನೈ ಕುಸಿತ ಮೊದಲ್ಗೊಂಡಿತು. ಇದನ್ನು ತಡೆದು ನಿಲ್ಲಲು ಯಾರಿಂದಲೂ ಸಾಧ್ಯವಾಗಲಿಲ್ಲ. 36 ರನ್‌ ಮಾಡಿದ ಸುರೇಶ್‌ ರೈನಾ ಅವರದೇ ಹೆಚ್ಚಿನ ಗಳಿಕೆ.

ಲೆವಿ ಸ್ಫೋಟಕ ಬ್ಯಾಟಿಂಗ್‌
ಸಣ್ಣ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಮುಂಬೈಗೆ ದಕ್ಷಿಣ ಆಫ್ರಿಕಾದ ರಿಚರ್ಡ್‌ ಲೆವಿ ಸ್ಫೋಟಕ ಆರಂಭವಿತ್ತರು. ತಾನೊಬ್ಬನೇ ಈ ಮೊತ್ತವನ್ನು ಹಿಂದಿಕ್ಕಬಲ್ಲೆ ಎನ್ನುವಂತಿತ್ತು ಅವರ ಬ್ಯಾಟಿಂಗ್‌ ಅಬ್ಬರ. 35 ಎಸೆತ ಎದುರಿಸಿದ ಲೆವಿ ಭರ್ತಿ 50 ರನ್‌ ಬಾರಿಸಿದರು. ಇದು ಈ ಪಂದ್ಯದ ಏಕೈಕ ಅರ್ಧ ಶತಕವಾಗಿತ್ತು. ಸಿಡಿಸಿದ್ದು 6 ಫೋರ್‌, 3 ಸಿಕ್ಸರ್‌.

ಜತೆಗಾರ ಸಚಿನ್‌ ತೆಂಡುಲ್ಕರ್‌ (16) ಗಾಯಾಳಾಗಿ ವಾಪಸಾದರೆ, ರೋಹಿತ್‌ ಶರ್ಮ ಖಾತೆ ತೆರೆಯಲು ವಿಫ‌ಲರಾದರು. ಅಂಬಾಟಿ ರಾಯುಡು ಮತ್ತು ಜೇಮ್ಸ್‌ ಫ್ರ್ಯಾಂಕ್ಲಿನ್‌ ಅಜೇಯರಾಗಿ ಉಳಿದು ಮುಂಬೈಗೆ ಸುಲಭ ಜಯ ತಂದಿತ್ತರು. ರಿಚರ್ಡ್‌ ಲೆವಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಅಂದಿನ ಫೈನಲ್‌ ಕೂಡ ಚೆನ್ನೈಯಲ್ಲೇ ನಡೆಯಿತು.

ಇಲ್ಲಿಯೂ ಧೋನಿ ಪಡೆಗೆ ಗೆಲುವು ಒಲಿಯಲಿಲ್ಲ. ಕೋಲ್ಕತಾ ನೈಟ್‌ರೈಡರ್ 5 ವಿಕೆಟ್‌ಗಳಿಂದ ಗೆದ್ದು ಚೆನ್ನೈಗೆ ಹ್ಯಾಟ್ರಿಕ್‌ ತಪ್ಪಿಸಿ ಮೊದಲ ಸಲ ಐಪಿಎಲ್‌ ಕಿರೀಟ ಏರಿಸಿಕೊಂಡಿತು.

ಸ್ಕೋರ್‌ ಪಟ್ಟಿ
ಚೆನ್ನೈ ಸೂಪರ್‌ ಕಿಂಗ್ಸ್‌
ಫಾ ಡು ಪ್ಲೆಸಿಸ್‌ ರನೌಟ್‌ 3
ಮುರಳಿ ವಿಜಯ್‌ ಸಿ ಹರ್ಭಜನ್‌ ಬಿ ಫ್ರ್ಯಾಂಕ್ಲಿನ್‌ 10
ಸುರೇಶ್‌ ರೈನಾ ಸಿ ಮಾಲಿಂಗ ಬಿ ಓಜಾ 36
ಡ್ವೇನ್‌ ಬ್ರಾವೊ ಸಿ ಪೊಲಾರ್ಡ್‌ ಬಿ ಓಜಾ 19
ಆಲ್ಬಿ ಮಾರ್ಕೆಲ್‌ ಸಿ ಓಜಾ ಬಿ ಪೊಲಾರ್ಡ್‌ 3
ಎಸ್‌. ಬದರೀನಾಥ್‌ ಸಿ ಹರ್ಭಜನ್‌ ಬಿ ಪೊಲಾರ್ಡ್‌ 10
ಎಂ.ಎಸ್‌. ಧೋನಿ ರನೌಟ್‌ 4
ರವೀಂದ್ರ ಜಡೇಜ ಬಿ ಮಾಲಿಂಗ 3
ಆರ್‌. ಅಶ್ವಿ‌ನ್‌ ರನೌಟ್‌ 3
ಶದಾಬ್‌ ಜಕಾತಿ ಔಟಾಗದೆ 6
ಡಗ್‌ ಬೊಲಿಂಜರ್‌ ಸಿ ರೋಹಿತ್‌ ಬಿ ಮಾಲಿಂಗ 3
ಇತರ 12
ಒಟ್ಟು (19.5 ಓವರ್‌ಗಳಲ್ಲಿ ಆಲೌಟ್‌) 112
ವಿಕೆಟ್‌ ಪತನ: 1-4, 2-38, 3-75, 4-80, 5-85, 6-95, 7-99, 8-103, 9-104.
ಬೌಲಿಂಗ್‌:
ಲಸಿತ ಮಾಲಿಂಗ 3.5-0-16-2
ಅಬು ನೆಚಿಮ್‌ 2-0-17-0
ಹರ್ಭಜನ್‌ ಸಿಂಗ್‌ 4-0-24-0
ಜೇಮ್ಸ್‌ ಫ್ರ್ಯಾಂಕ್ಲಿನ್‌ 2-0-18-1
ಪ್ರಗ್ಯಾನ್‌ ಓಜಾ 4-0-17-0
ಕೈರನ್‌ ಪೊಲಾರ್ಡ್‌ 4-0-15-2

ಮುಂಬೈ ಇಂಡಿಯನ್ಸ್‌
ರಿಚರ್ಡ್‌ ಲೆವಿ ಸಿ ಬೊಲಿಂಜರ್‌ ಬಿ ಬ್ರಾವೊ 50
ಸಚಿನ್‌ ತೆಂಡುಲ್ಕರ್‌ ನಿವೃತ್ತಿ 16
ರೋಹಿತ್‌ ಶರ್ಮ ಸಿ ಧೋನಿ ಬಿ ಬೊಲಿಂಜರ್‌ 0
ಅಂಬಾಟಿ ರಾಯುಡು ಔಟಾಗದೆ 18
ಜೇಮ್ಸ್‌ ಫ್ರ್ಯಾಂಕ್ಲಿನ್‌ ಔಟಾಗದೆ 25
ಇತರ 6
ಒಟ್ಟು (16.5 ಓವರ್‌ಗಳಲ್ಲಿ 2 ವಿಕೆಟಿಗೆ) 115
ವಿಕೆಟ್‌ ಪತನ: 1-69, 2-70.
ಬೌಲಿಂಗ್‌:
ಆಲ್ಬಿ ಮಾರ್ಕೆಲ್‌ 4-0-20-0
ಡಗ್‌ ಬೊಲಿಂಜರ್‌ 3.5-0-34-1
ಆರ್‌. ಅಶ್ವಿ‌ನ್‌ 4-0-20-0
ರವೀಂದ್ರ ಜಡೇಜ 1-0-16-0
ಡ್ವೇನ್‌ ಬ್ರಾವೊ 3-0-14-1
ಶದಾಬ್‌ ಜಕಾತಿ 1-0-8-0

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೆಲವೇ ವರ್ಷಗಳಲ್ಲಿ ಖಾಲಿಯಾಗಲಿದೆ ವಿಶ್ವದಲ್ಲಿರೋ ಆಹಾರ,

Sat Apr 30 , 2022
  ನಾವೆಲ್ಲ ದುಡಿಯೋದು ಎರಡು ಹೊತ್ತಿನ ಊಟಕ್ಕಾಗಿ. ಎಷ್ಟೋ ಮಂದಿ ತುತ್ತು ಅನ್ನಕ್ಕಾಗಿಯೇ ಬೆವರು ಮಾತ್ರವಲ್ಲ ರಕ್ತವನ್ನೂ ಸುರಿಸಬೇಕಾಗಿ ಬರುತ್ತದೆ. ಇಡೀ ಕುಟುಂಬದ ಜವಾಬ್ಧಾರಿ ಹೊತ್ತವನು ಊಟಕ್ಕಾಗಿಯೇ ಶ್ರಮಪಡಬೇಕಾಗುತ್ತದೆ. ಆದ್ರೆ ಇಷ್ಟೆಲ್ಲಾ ಕಷ್ಟಪಟ್ಟರೂ ಊಟವೇ ಸಿಗದೇ ಇದ್ದರೆ ಹೇಗಿರಬಹುದು ಹೇಳಿ ? ಇನ್ನು ಕೆಲವೇ ವರ್ಷಗಳಲ್ಲಿ ಅಂಥದ್ದೇ ಸ್ಥಿತಿ ನಿರ್ಮಾಣವಾಗಲಿದೆಯಂತೆ. ಕೆಲವೇ ವರ್ಷಗಳಲ್ಲಿ ಜಗತ್ತಿನಲ್ಲಿರುವ ಆಹಾರ ಪದಾರ್ಥಗಳೆಲ್ಲ ಸಂಪೂರ್ಣ ಖಾಲಿಯಾಗಲಿವೆ ಅನ್ನೋದು ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ. ಆಗ ನೂರು ಇನ್ನೂರು ಹಾಗಿರಲಿ, […]

Advertisement

Wordpress Social Share Plugin powered by Ultimatelysocial