ಅಕ್ಷಯ್ ಕುಮಾರ್ ‘ಸೆಲ್ಫಿ’ ಫಸ್ಟ್ ಡೇ ಕಲೆಕ್ಷನ್; ಇಂಥ ಗಳಿಕೆ ಮಾಡುವ ಬದಲು ನಿವೃತ್ತಿ ತಗೊಂಡ್ರೆ ಒಳ್ಳೆಯದು!

ಳೆದ ವರ್ಷ ಬಾಲಿವುಡ್ ಸಿನಿಮಾಗಳು ಮಾಡಿದ ಕಲೆಕ್ಷನ್ ನೋಡಿ ಹಿಂದಿ ಸ್ಟಾರ್‌ಗಳ ಕೆರಿಯರ್ ಮುಗಿದ ಹಾಗೆ ಎಂದು ಸಿನಿ ರಸಿಕರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಬಿಡುಗಡೆಯಾದ ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಈ ಎಲ್ಲಾ ಟೀಕೆಗಳಿಗೆ ಉತ್ತರವನ್ನು ನೀಡಿತು.

ಮೊದಲ ದಿನ ವಿಶ್ವದಾದ್ಯಂತ 106 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ ಪಠಾಣ್ ಸಾವಿರ ಕೋಟಿ ಕ್ಲಬ್ ಅನ್ನೂ ಸಹ ಸೇರಿತು.

ಕಳೆದ ಜನವರಿ 25ರಂದು ಬಿಡುಗಡೆಗೊಂಡ ಈ ಚಿತ್ರ ಮೂವತ್ತು ದಿನಗಳ ಬಳಿಕವೂ ಸಹ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದ ಮೂಲಕ ಶಾರುಖ್ ಖಾನ್ ಜತೆ ಬಾಲಿವುಡ್ ಸಹ ಕಮ್ ಬ್ಯಾಕ್ ಮಾಡಿತು. ಸಿನಿ ರಸಿಕರು ಬಾಲಿವುಡ್ ಸ್ಟಾರ್ ನಟರ ಚಿತ್ರಗಳನ್ನು ನೋಡ್ತಾರೆ ಎಂಬ ನಂಬಿಕೆ ಬಾಲಿವುಡ್ ಸಿನಿ ಮಂದಿಗೆ ಬಂತು. ಆದರೆ ನಿನ್ನೆ ( ಫೆಬ್ರವರಿ 24 ) ಬಿಡುಗಡೆಗೊಂಡಿರುವ ಅಕ್ಷಯ್ ಕುಮಾರ್ ಹಾಗೂ ಇಮ್ರಾನ್ ಹಷ್ಮಿ ನಟನೆಯ ಸೆಲ್ಫಿ ಚಿತ್ರ ಮತ್ತೆ ಬಾಲಿವುಡ್ ಸಿನಿ ಮಂದಿಯನ್ನು ಶಾಕ್‌ಗೆ ದೂಡಿದೆ.

ಹೌದು, ಈ ಚಿತ್ರ ಬಿಡುಗಡೆಯ ದಿನ ಗಳಿಸಿದ ಹಣದ ಒಟ್ಟು ಮೊತ್ತವನ್ನು ನೋಡಿದ ಸಿನಿ ರಸಿಕರು ಅಕ್ಷರಶಃ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಚಿತ್ರ ಮೊದಲ ದಿನ ವಿಶ್ವದಾದ್ಯಂತ ಕೇವಲ 3.6 ಕೋಟಿ ರೂಪಾಯಿಗಳನ್ನು ಗಳಿಸಿದೆ. ದಕ್ಷಿಣ ಭಾರತದ ಸಾಮಾನ್ಯ ನಟನ ಚಿತ್ರಗಳೂ ಸಹ ಮೊದಲ ದಿನ ಇದಕ್ಕಿಂತ ಹೆಚ್ಚು ಗಳಿಸಲಿದ್ದು, ಸದ್ಯ ಚಿತ್ರ ಇಷ್ಟು ಕಳಪೆ ಕಲೆಕ್ಷನ್ ಮಾಡಿರುವುದು ಹೀನಾಯವಾಗಿ ಟ್ರೋಲ್ ಆಗಲು ಕಾರಣವಾಗಿದೆ.

ಇನ್ನು ಬರೋಬ್ಬರಿ 80 ಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಹೀಗೆ ಮೊದಲ ದಿನವೇ ಕೆಟ್ಟ ಕಲೆಕ್ಷನ್ ಮಾಡಿರುವುದನ್ನು ನೋಡಿದರೆ ಬಜೆಟ್‌ನ ಅರ್ಧದಷ್ಟು ಹಣ ಸಹ ನಿರ್ಮಾಪಕರ ಕೈ ಸೇರುವುದು ಅನುಮಾನವೇ ಸರಿ. ಸೆಲ್ಫಿ ಚಿತ್ರ ಮಲಯಾಳಂನ ಸೂಪರ್ ಹಿಟ್ ಚಿತ್ರ ಡ್ರೈವಿಂಗ್ ಲೈಸೆನ್ಸ್‌ನ ರಿಮೇಕ್. ಖ್ಯಾತ ನಟನೋರ್ವನ ಅಭಿಮಾನಿ ಆರ್‌ಟಿಒ ಆಫೀಸರ್ ಆಗಿರುತ್ತಾನೆ. ಆ ನಟನ ಡ್ರೈವಿಂಗ್ ಲೈಸೆನ್ಸ್ ಕಳೆದು ಹೋದಾಗ ಲೈಸೆನ್ಸ್ ಪಡೆದುಕೊಳ್ಳಲು ಬರುತ್ತಾನೆ. ಆದರೆ ಈ ಸಂದರ್ಭದಲ್ಲಿ ಆ ಸ್ಟಾರ್ ತನ್ನ ಪುಟ್ಟ ಮಗನ ಜತೆ ನಡೆದುಕೊಳ್ಳುವ ರೀತಿಯಿಂದ ಅಭಿಮಾನಿಯಾಗಿದ್ದ ಆರ್‌ಟಿಒ ಅಧಿಕಾರಿ ತಿರುಗಿ ಬೀಳ್ತಾನೆ.

ಹೀಗೆ ಮಾಜಿ ಅಭಿಮಾನಿ ಮತ್ತು ಸ್ಟಾರ್ ನಟನ ನಡುವೆ ಡ್ರೈವಿಂಗ್ ಲೈಸೆನ್ಸ್‌ಗಾಗಿ ನಡೆಯುವ ಕಾಳಗವೇ ಚಿತ್ರದ ಕಥೆ. ಮಲಯಾಳಂನಲ್ಲಿ ಅಚ್ಚುಕಟ್ಟಾಗಿ ಮೂಡಿ ಬಂದಿದ್ದ ಈ ಚಿತ್ರ ಗೆದ್ದಿತ್ತು. ಕೇವಲ 4 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದ ಡ್ರೈವಿಂಗ್ ಲೈಸೆನ್ಸ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 23 ಕೋಟಿ ಗಳಿಸಿತ್ತು. ಮೂಲ ಚಿತ್ರ ಇಷ್ಟು ಚೆನ್ನಾಗಿ ಕಲೆಕ್ಷನ್ ಮಾಡಿದ್ದರೆ, ನಾಲ್ಕು ವರ್ಷಗಳ ಬಳಿಕ ಅದನ್ನು ದೊಡ್ಡ ವೆಚ್ಚದಲ್ಲಿ ರಿಮೇಕ್ ಮಾಡಿದ ಬಾಲಿವುಡ್ ಮಂದಿ ಮಕಾಡೆ ಮಲಗಿದ್ದಾರೆ.

ಇನ್ನು ಬಾಲಿವುಡ್ ನೇಟಿವಿಟಿಗೆ ತಕ್ಕಂತೆ ಚಿತ್ರವನ್ನು ತಯಾರಿಸಲಾಗಿದ್ದು, ಸೀತಾ ರಾಮಮ್ ಖ್ಯಾತಿಯ ಮೃನಾಲ್ ಠಾಕೂರ್ ಹಾಟ್ ಆಗಿ ಸಹ ಕಾಣಿಸಿಕೊಂಡಿದ್ದಾರೆ. ಈ ಅಂಶ ಮೂಲ ಮಲಯಾಳಂ ಚಿತ್ರದಲ್ಲಿ ಇರಲೂ ಇಲ್ಲ. ಈ ಮೂಲಕ ರಿಮೇಕ್ ಚಿತ್ರಗಳನ್ನು ಮಾಡಿದರೆ ಸಿನಿ ರಸಿಕರು ಕೈ ಹಿಡಿಯುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಕಲೆಕ್ಷನ್ ಕುರಿತು ಪ್ರತಿಕ್ರಿಯಿಸಿರುವ ಚಿತ್ರ ಪ್ರೇಮಿಗಳು ಇಂತಹ ಕಳಪೆ ಕಲೆಕ್ಷನ್ ಮಾಡುವ ಬದಲು ಅಕ್ಷಯ್ ಕುಮಾರ್ ಅವರು ನಿವೃತ್ತಿ ತೆಗೆದುಕೊಂಡು ಸುಮ್ಮನಿರುವುದೇ ಒಳಿತು ಎಂದಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೀನಾದ ಕಳಪೆ ವಸ್ತುಗಳಿಂದ ಭಾರತಕ್ಕೆ ಅನ್ಯಾಯ;

Sun Feb 26 , 2023
ಚೀನಾ ಉತ್ಪನ್ನಗಳನ್ನು ಮುಕ್ತವಾಗಿ ಒಳಗೆ ಬಿಟ್ಟೆವು. ನಮ್ಮ ಉತ್ಪನ್ನಗಳಿಗೆ ಚೀನಾ ತಡೆಹಾಕಿತು. ಇದರಿಂದ ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ಅಂತರ ಹೆಚ್ಚಾಗಲು ಕಾರಣವಾಯಿತು ಎಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯುಶ್ ಗೋಯಲ್ ಹೇಳಿದ್ದಾರೆ.ನವದೆಹಲಿ:ಮೂರು ವರ್ಷಗಳ ಹಿಂದೆ ಆರ್​ಸಿಇಪಿ ಎಂಬ ಆರ್ಥಿಕ ಸಹಭಾಗಿತ್ವದ ಒಪ್ಪಂದಕ್ಕೆ ಸಹಿ ಹಾಕದಿರುವ ಭಾರತದ ನಿರ್ಧಾರವನ್ನು ಕೇಂದ್ರ ಸಚಿವ ಪಿಯೂಶ್ ಗೋಯಲ್ ಸಮರ್ಥಿಸಿಕೊಂಡಿದ್ದಾರೆ. ಪಾರದರ್ಶಕವಲ್ಲದ ಆರ್ಥಿಕತೆ ಇರುವ ಮತ್ತು ಯಾವುದೇ ಕಾನೂನು, ಪ್ರಜಾಪ್ರಭುತ್ವ, […]

Advertisement

Wordpress Social Share Plugin powered by Ultimatelysocial