SANDALWOOD:ಧನ್ವೀರ್ ನಟನೆಯ ಬೈ ಟು ಲವ್ ಸಿನಿಮಾ;

ಬಜಾರ್ ಮತ್ತು ಬೈ ಟು ಲವ್ ಸಿನಿಮಾದಲ್ಲಿ ನಟಿಸಿರುವ ಧನ್ವೀರ್ ಮೂರನೇ ಚಿತ್ರಕ್ಕಾಗಿ ರೆಡಿಯಾಗಿದ್ದಾರೆ.

ಧನ್ವೀರ್ ನಟನೆಯ ಬೈ ಟು ಲವ್ ಸಿನಿಮಾ ಇನ್ನೂ ರಿಲೀಸ್ ಆಗಬೇಕಾಗಿದೆ. ಆದರೆ ಶಂಕರ್ ರಾಮನ್ ನಿರ್ದೇಶನದ ಮುಂದಿನ ಸಿನಿಮಾಗೆ ಧನ್ವೀರ್ ಕೈ ಜೋಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎಂದು ಬಿಂಬಿಸಲಾಗಿದೆ.

ಶೀಘ್ರದಲ್ಲೇ ಚಿತ್ರ ತಂಡ ಸಿನಿಮಾ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡಲಿದ್ದು, ಆ ವೇಳೆ ಉಳಿದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಮಾಹಿತಿ ನೀಡಲಿದ್ದಾರೆ. ಹರಿ ಸಂತೋಷ್ ನಿರ್ದೇಶನದ ಬೈ ಟು ಲವ್ ಸಿನಿಮಾದಲ್ಲಿ ಧನ್ವೀರ್ ಗೆ ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಸುಪ್ರೀತ್ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಅಜನೀಶ್ ಬಿ ಲೋಕನಾತ್ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ. ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೀರೋ ನೀನಾಸಂ ಸತೀಶ್ ಬಾಳಿಗೆ ಅಮ್ಮನೇ ನಿಜವಾದ ಹೀರೋ!

Fri Jan 7 , 2022
ತೆರೆಯ ಮೇಲೆ ಬಣ್ಣ ಹಚ್ಚಿ ಮಿಂಚುವ ಸಿನಿಮಾ ತಾರೆಯರ ಬದುಕು ತೆರೆಯ ಹಿಂದೆ ಬೇರೆಯ ರೂಪದಲ್ಲಿ ಇರುತ್ತದೆ. ಎಲ್ಲರಿಗೂ ಸಿನಿಮಾ ಪಯಣ ಕೇಕ್ ವಾಕ್ ಆಗಿರುವುದಿಲ್ಲ. ಅಂದರೆ ಈ ಪಯಣ ಸುಲಭ ಆಗಿರುದಿಲ್ಲ. ಆದರೂ ಹಲವರು ಛಲ ಬಿಡದೆ, ಅಂದು ಕೊಂಡಿದ್ದನ್ನು ಸಾಧಿಸಿ ತೆರೆಯ ಮೇಲೆ ಮಿಂಚುತ್ತಾರೆ. ಈ ಸಾಲಿಗೆ ಕನ್ನಡದ ನಟ ನೀನಾಸಂ ಸತೀಶ್ ಕೂಡ ಸೇರಿ ಕೊಳ್ಳುತ್ತಾರೆ. ಸತೀಶ್ ಇಂದು ಕನ್ನಡದ ಬೇಡಿಕೆ ನಟರಲ್ಲಿ ಒಬ್ಬರು. ಆದರೆ […]

Advertisement

Wordpress Social Share Plugin powered by Ultimatelysocial