ಯುದ್ಧ ನಿಲ್ಲಿಸುವಂತೆ ನಾವು ‘ರಷ್ಯಾ ಅಧ್ಯಕ್ಷ ಪುಟಿನ್’ ಕೇಳಬಹುದೇ.? – ಅರ್ಜಿದಾರರಿಗೆ ‘ಸುಪ್ರೀಂ ಕೋರ್ಟ್’ ಪ್ರಶ್ನೆ

ನವದೆಹಲಿ: ರಷ್ಯಾ ಹಾಗೂ ಉಕ್ರೇನ್ ನ ನಡುವೆ ನಡೆಯುತ್ತಿರುವಂತ ಯುದ್ಧದಲ್ಲಿ ಅನೇಕ ಭಾರತೀಯರು ಸಿಲುಕಿದ್ದಾರೆ. ಈ ಸಂಬಂಧ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿದ್ದಂತ ಅರ್ಜಿಯ ವಿಚಾರಣೆ ನಡೆಸಿದಂತ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠವು, ಸರ್ಕಾರ ಭಾರತೀಯರನ್ನು ಸ್ಥಳಾಂತರಿಸುವಂತ ಕಾರ್ಯಾಚರಣೆ ನಡೆಸುತ್ತಿದೆ.

ಕೋರ್ಟ್ ಏನು ಮಾಡಬೇಕು.? ನಾವೇನು ರಷ್ಯಾ ದಾಳಿಯನ್ನು ನಿಲ್ಲಿಸುವಂತೆ ರಷ್ಯಾ ಅಧ್ಯಕ್ಷ ಪುಟೀನ್ ಅವರಿಗೆ ನಿರ್ದೇಶನ ನೀಡಬೇಕೇ ಎಂದು ಅರ್ಜಿದಾರರಿಗೆ ಪ್ರಶ್ನಿಸಿತು.

ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರ ಏನು ಮಾಡುತ್ತಿದ್ದಾರೆ ಎಂದು ಹೇಳುವ ಕೆಲವು ವೀಡಿಯೊಗಳನ್ನು ನಾನು ನೋಡಿದೆ. ನಾವು ಅವರ ಬಗ್ಗೆ ಸಹಾನುಭೂತಿ ಹೊಂದಿದ್ದೇವೆ ಎಂದು ಸಿಜೆಐ ಹೇಳಿದರು.

ಈ ವೇಳೆ ಅರ್ಜಿದಾರರ ಪರ ವಕೀಲರು ಉಕ್ರೇನ್ ನಲ್ಲಿರುವಂತ ಭಾರತೀಯರಲ್ಲಿ, ಅವರ ಪೋಷಕರಲ್ಲಿ ಭಯ ಹೆಚ್ಚಾಗುತ್ತಿದೆ. ಆತಂಕ ಮನೆ ಮಾಡಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದಾಗ, ಸಿಐಜೆಯವರು ಸರ್ಕಾರ ಈಗಾಗಲೇ ಸ್ಥಳಾಂತರ ಕಾರ್ಯಾಚರಣೆ ಮಾಡುತ್ತಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನು ನಾವು ಎಜೆಯನ್ನು ಕೇಳುತ್ತೇವೆ ಎಂದರು.

ನಂತರ ಸುಪ್ರೀಂ ಕೋರ್ಟ್ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ ಅವರನ್ನು ಸರ್ಕಾರೊಂದಿಗೆ ಮಾತನಾಡಿ, ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಸೂಚಿಸಿತು. ದಯವಿಟ್ಟು ನಿಮಗೆ ಸಾಧ್ಯವಾದಷ್ಟು ಸಹಾಯ ಮಾ ಎಂದು ಸಿಜೆಐ ಎಜೆಗೆ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಇಇ ಮುಖ್ಯ ಜೊತೆಗಿನ ಘರ್ಷಣೆಯ ನಂತರ ಕರ್ನಾಟಕ II ಪಿಯು ಪರೀಕ್ಷೆಗಳನ್ನು ಮುಂದೂಡಲಾಗುವುದು!

Thu Mar 3 , 2022
ಕರ್ನಾಟಕ ಪದವಿ ಪೂರ್ವ ಬೋರ್ಡ್ ಅಥವಾ 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ದಿನಾಂಕಗಳನ್ನು ಮತ್ತೊಮ್ಮೆ ಬದಲಾಯಿಸಲು ನಿರ್ಧರಿಸಲಾಗಿದೆ. ಈಗ, ಪರೀಕ್ಷೆಗಳು ಏಪ್ರಿಲ್ 22 ರಿಂದ ಪ್ರಾರಂಭವಾಗಿ ಮೇ 5 ರಂದು ಮುಕ್ತಾಯಗೊಳ್ಳುವ ಸಾಧ್ಯತೆಯಿದೆ, ಮೊದಲು ಪರೀಕ್ಷೆಗಳನ್ನು ಏಪ್ರಿಲ್ 16 ರಿಂದ ಮೇ 6 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಕರ್ನಾಟಕ ಮಂಡಳಿಯು ಕರಡು ವೇಳಾಪಟ್ಟಿಯನ್ನು ಪ್ರಕಟಿಸಿದೆ ಮತ್ತು ಪರೀಕ್ಷೆಗಳು ಏಪ್ರಿಲ್ 22 ರಂದು ಪ್ರಾರಂಭವಾಗುತ್ತವೆ. ಮಾರ್ಚ್ 5 ರೊಳಗೆ ಕರಡು […]

Advertisement

Wordpress Social Share Plugin powered by Ultimatelysocial