POLITICS:ರಾಜಕೀಯಕ್ಕೆ ಧುಮುಕಲಿದ್ದಾರೆ,ನಿರ್ದೇಶಕ ಎಸ್ ನಾರಾಯಣ್​

ಎಸ್. ನಾರಾಯಣ್ ಕನ್ನಡ ಚಿತ್ರರಂಗದ, ನಿರ್ದೇಶಕ, ನಿರ್ಮಾಪಕ, ನಟ ಹಾಗೂ ಚಿತ್ರ ಸಾಹಿತಿ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಚಿತ್ರರಂಗದಲ್ಲಿ ಗಣನೀಯ ಸಾಧನೆ ಮಾಡಿದವರು ನಿರ್ದೇಶಕ, ನಟ, ನಿರ್ಮಾಪಕ, ಚಿತ್ರಸಾಹಿತಿ ಹೀಗೆ ಬಹುಮುಖೀ ಪ್ರತಿಭೆ ಎಸ್.

ಡಾ. ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ `ಶಬ್ದವೇದಿ`, ವಿಷ್ಣುವರ್ಧನ್ ಅಭಿನಯದ `ವೀರಪ್ಪನಾಯಕ`, ಹೊಸತನದದಿಂದ ಭಾರೀ ಯಶಸ್ಸುಗಳಿಸಿದ `ಚೈತ್ರದ ಪ್ರೇಮಾಂಜಲಿ`, ‘ಚಂದ್ರ ಚಕೋರಿ’ ಮೊದಲಾದ ಚಿತ್ರಗಳ ಮೂಲಕ ಚಿತ್ರರಂಗಕ್ಕೊಂದು ಹೊಸ ಆಯಾಮ ಸೃಷ್ಟಿಸಿದ ಖ್ಯಾತಿ ನಾರಾಯಣ್‌ ಅವರದು.

ಇದೀಗ ಹೊಸ ವಿಷಯ ಏನಪ್ಪಾ ಅಂದರೆ ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ರಾಜಕೀಯಕ್ಕೆ ಎಂಟ್ರಿಯಾಗುತ್ತಿದ್ದಾರೆ. ಹೌದು, ಎಸ್​. ನಾರಾಯಣ್​ ಕಾಂಗ್ರೆಸ್​ ಪಕ್ಷ ಸೇರಲು ಮುಂದಾಗುತ್ತಿದ್ದಾರೆ.ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಮಾಹಿತಿ ನೀಡಿದ್ದಾರೆ.

`ನಮ್ಮ ಪಕ್ಷದ ಸಿದ್ಧಾಂತ, ಆದರ್ಶಗಳಿಂದ ಪ್ರೇರಿತರಾದ. ನಟ, ನಿರ್ದೇಶಕ ಶ್ರೀ ಎಸ್. ನಾರಾಯಣ್ ಅವರು ಇಂದು ನನ್ನನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಅಭಿಲಾಷೆ ವ್ಯಕ್ತಪಡಿಸಿದರು. ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಿದೆ’ ಎಂದ ಡಿ.ಕೆ.ಶಿವಕುಮಾರ್​ ನಾರಾಯಣ್​ ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

1981ರ ವರ್ಷದಲ್ಲಿ ನಟನಾಗಬೇಕು ಎಂದುಕೊಂಡು ಬೆಂಗಳೂರಿಗೆ ಬಂದ ನಾರಾಯಣ್, ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ನಿರ್ದೇಶಕ, ನಿರ್ಮಾಪಕ, ನಟನಾಗಿ ಜನರನ್ನು ರಂಜಿಸಿದ್ದಾರೆ.ಇದೀಗ ರಾಜಕೀಯಕ್ಕೆ ಧುಮುಕಲು ನಿರ್ಧರಿಸಿದ್ದಾರೆ.

ಇವರು ಕೇವಲ ಸಿನಿಮಾಗಳಲ್ಲಿ ಮಾತ್ರ ನಟಿಸದೆ ಟಿವಿ ಕಿರುತೆರೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸುಮತಿ, ಭಾಗೀರತಿ, ಅಂಬಿಕಾ, ದುರ್ಗ, ಪಾರ್ವತಿ, ಚಂದ್ರಿಕಾ, ಸೂರ್ಯವಂಶ, ವೈಶಾಲಿ, ಮುಂತಾದ ಧಾರವಾಹಿಗಳಲ್ಲಿ ನಟಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

HEALTH TIPS:ಮನೆ ಮುಂದೆ ಇರಲಿ ಅಲೋವೆರಾ ʼಗಿಡʼ

Sun Jan 30 , 2022
ಕೆಲವರಿಗೆ ಮನೆಮುಂದೆ ಪುಟ್ಟಪುಟ್ಟ ಪಾಟ್ ಇಟ್ಟು ಗಿಡಗಳನ್ನು ಬೆಳೆಸುವ ಆಸೆ. ಆದರೆ ಈಗಿನ ದಿನಗಳಲ್ಲಿ ಗಿಡಗಳನ್ನು ಪೋಷಿಸಲು ಟೈಮ್ ಸಿಗುವುದಿಲ್ಲ ಅಥವಾ ಮನೆ ಮುಂದೆ ಜಾಗ ಸಮಸ್ಯೆ ಹೀಗೆ ಏನಾದರೂ ಕಾರಣಗಳು ಇರುತ್ತವೆ. ಆದರೂ ತಮ್ಮ ತಮ್ಮ ಬಿಡುವಿನ ವೇಳೆಯಲ್ಲಿ ಈ ಗಿಡಗಳನ್ನು ಮನೆ ಮುಂದೆ ಬೆಳೆಸಿ ಪೋಷಿಸಿದರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಯಾವುದು ಆ ಗಿಡಗಳು ಅಂತ ತಿಳಿದುಕೊಳ್ಳೋಣ. ಅಲೋವೆರಾ ಇದು ಗಾಳಿಯನ್ನು ಶುದ್ಧ ಮಾಡುವ ಗುಣ ಹೊಂದಿದೆ. […]

Advertisement

Wordpress Social Share Plugin powered by Ultimatelysocial