HEALTH TIPS:ಮನೆ ಮುಂದೆ ಇರಲಿ ಅಲೋವೆರಾ ʼಗಿಡʼ

ಕೆಲವರಿಗೆ ಮನೆಮುಂದೆ ಪುಟ್ಟಪುಟ್ಟ ಪಾಟ್ ಇಟ್ಟು ಗಿಡಗಳನ್ನು ಬೆಳೆಸುವ ಆಸೆ. ಆದರೆ ಈಗಿನ ದಿನಗಳಲ್ಲಿ ಗಿಡಗಳನ್ನು ಪೋಷಿಸಲು ಟೈಮ್ ಸಿಗುವುದಿಲ್ಲ ಅಥವಾ ಮನೆ ಮುಂದೆ ಜಾಗ ಸಮಸ್ಯೆ ಹೀಗೆ ಏನಾದರೂ ಕಾರಣಗಳು ಇರುತ್ತವೆ.

ಆದರೂ ತಮ್ಮ ತಮ್ಮ ಬಿಡುವಿನ ವೇಳೆಯಲ್ಲಿ ಈ ಗಿಡಗಳನ್ನು ಮನೆ ಮುಂದೆ ಬೆಳೆಸಿ ಪೋಷಿಸಿದರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು.

ಯಾವುದು ಆ ಗಿಡಗಳು ಅಂತ ತಿಳಿದುಕೊಳ್ಳೋಣ.

ಅಲೋವೆರಾ

ಇದು ಗಾಳಿಯನ್ನು ಶುದ್ಧ ಮಾಡುವ ಗುಣ ಹೊಂದಿದೆ. ಅಷ್ಟೇ ಅಲ್ಲ, ಸೌಂದರ್ಯ ಸಮಸ್ಯೆಗೆ ಮತ್ತು ಆರೋಗ್ಯ ಸಮಸ್ಯೆಗೆ ಈ ಅಲೋವೆರಾ ಸಹಕಾರಿ.

ಪುದೀನಾ

ಇದು ನೈಸರ್ಗಿಕ ನಂಜು ನಿರೋಧಕ. ಅಡುಗೆಗೆ ಅಷ್ಟೇ ಅಲ್ಲದೆ ಔಷಧಿಯಾಗಿಯೂ ಮತ್ತು ಸೌಂದರ್ಯವರ್ಧಕವಾಗಿಯೂ ಪುದೀನಾ ಬಳಕೆಯಾಗುತ್ತದೆ.

ತುಳಸಿ

ತುಳಸಿಗೆ ಮನೆಯಲ್ಲಿ ಪೂಜ್ಯ ಸ್ಥಾನವಿದೆ. ಮಕ್ಕಳಿದ್ದ ಮನೆಯಲ್ಲಂತೂ ತುಳಸಿ ಗಿಡ ಇರಲೇಬೇಕು. ಬಹುಪಯೋಗಿ ತುಳಸಿ ಆರೋಗ್ಯ ಸಮಸ್ಯೆಗಳಿಗೆ ಅಷ್ಟೇ ಅಲ್ಲದೆ ಸೌಂದರ್ಯ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.

ಲ್ಯಾವೆಂಡರ್

ಈ ಗಿಡದಿಂದ ಒತ್ತಡ ನಿವಾರಣೆ ಆಗುತ್ತದೆ. ಸೌಂದರ್ಯ ವೃದ್ಧಿಸುವುದರಲ್ಲಿ ಇದರ ಪಾತ್ರ ಹೆಚ್ಚು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿರುದ್ಧ ದೂರು.

Sun Jan 30 , 2022
ಬೆಂಗಳೂರು: ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿರುದ್ಧ ಪಕ್ಷದ ಹೈಕಮಾಂಡ್ ಗೆ ದೂರು ನೀಡಲಾಗಿದೆ.ಪದಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ನಡೆಸಲಾಗಿದೆ ಎಂದು ಶ್ರೀನಿವಾಸ್ ವಿರುದ್ಧ ಆರೋಪ ಮಾಡಲಾಗಿದೆ.ಎನ್.ಎಸ್.ಯು.ಐ., ಯುವ ಕಾಂಗ್ರೆಸ್ ಸದಸ್ಯರಿಂದ ದುಡ್ಡು ಪಡೆದಿದ್ದಾರೆ. ಯುವ ಕಾಂಗ್ರೆಸ್ ಇಮೇಜ್ ಡ್ಯಾಮೇಜ್ ಮಾಡಿದ್ದಾರೆ ಎಂದು ಇ -ಮೇಲ್ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೆ ದೂರು ನೀಡಲಾಗಿದೆ.ಪದಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ನಡೆಸಿದ […]

Advertisement

Wordpress Social Share Plugin powered by Ultimatelysocial