ಪ್ರಿಯಕರನಿಗಾಗಿ ಮನೆಯಲ್ಲಿದ್ದ 1 ಕೆಜಿ ಚಿನ್ನ ಕದ್ದ ಯುವತಿ:

 

ಪ್ರಿಯಕರನಿಗಾಗಿ ತಾಯಿಯ 1 ಕೆಜಿ ಚಿನ್ನಾಭರಣ ಕದ್ದ ಪುತ್ರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನಕ್ಕೆ ಕುಮ್ಮಕ್ಕು ನೀಡಿದ ಪ್ರಿಯಕರ ಕೂಡ ಜೈಲು ಸೇರಿದ್ದಾನೆ.

ಬೆಂಗಳೂರು: ಪ್ರಿಯಕರನಿಗಾಗಿ ಮನೆಯಲ್ಲಿದ್ದ ತಾಯಿಯ ಚಿನ್ನಾಭರಣವನ್ನು ಕಳ್ಳತನ ಮಾಡುತ್ತಿದ್ದ ಯುವತಿ ಹಾಗೂ ಆಕೆಯ‌ ಪ್ರಿಯತಮನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ‌.

ಜಕ್ಕೂರು ಲೇಔಟ್ ನಿವಾಸಿ ರತ್ನಮ್ಮ ಎಂಬುವವರು ಮಗಳ ವಿರುದ್ಧ ನೀಡಿದ ದೂರಿನ ಮೇರೆಗೆ ದೀಪ್ತಿ ಹಾಗೂ ಮದನ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಜಕ್ಕೂರು ಲೇಔಟ್​ನಲ್ಲಿ ರತ್ನಮ್ಮ ಹಾಗೂ ಪುತ್ರಿ ದೀಪ್ತಿ ವಾಸವಾಗಿದ್ದರು. ರತ್ನಮ್ಮ‌ ಟೈಲರ್ ಕೆಲಸ ಮಾಡುತ್ತಿದ್ದರೆ, ಪುತ್ರಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದಳು. ದೀಪ್ತಿಗೆ ಡಿವೋರ್ಸ್ ಆಗಿತ್ತು.‌ ಈ ನಡುವೆ ಡ್ರೈವಿಂಗ್ ಕಲಿಯಲು ಮದನ್ ನಡೆಸುತ್ತಿದ್ದ ಡೈವಿಂಗ್ ಸ್ಕೂಲ್​​ಗೆ ಸೇರಿಕೊಂಡಿದ್ದಳು.‌ ಇಲ್ಲಿ ಶುರುವಾದ ಸ್ನೇಹ ಪ್ರೀತಿಗೆ ತಿರುಗಿದೆ. ಮದನ್​​ಗೆ ಮದುವೆಯಾಗಿ ಇಬ್ಬರೂ ಮಕ್ಕಳಿದ್ದರೂ ದೀಪ್ತಿ ಪ್ರೀತಿಗೆ ಸೈ ಅಂದಿದ್ದ. ಮದನ್ ಪ್ರೀತಿಗೆ ಶರಣಾಗಿದ್ದ ದೀಪ್ತಿ, ಪ್ರಿಯಕರನ ಅಣತಿಯಂತೆ ಮನೆಯಲ್ಲಿದ್ದ ಚಿನ್ನಾಭರಣ ಕದ್ದಿದ್ದಾಳೆ. ಹಂತ-ಹಂತವಾಗಿ ಸುಮಾರು ಒಂದು ಕೆ.ಜಿ.ಚಿನ್ನ ಕಳ್ಳತನ ಮಾಡಿ ಕೊಟ್ಟಿದ್ದಾಳೆ. ತಾಯಿಗೆ ಅನುಮಾನ ಬಾರದಿರಲು ಕದ್ದ ಜಾಗದಲ್ಲಿ ನಕಲಿ ಚಿನ್ನಾಭರಣ ಇಟ್ಟಿದ್ದಾಳೆ.‌

ಕೆಲ ದಿನಗಳ ಹಿಂದೆ ಮದುವೆ ಸಲುವಾಗಿ ಒಡವೆ ಧರಿಸಿಕೊಳ್ಳಲು ಬೀರುವಿನಲ್ಲಿ ನೋಡಿದಾಗ ಚಿನ್ನಾಭರಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ಮಗಳನ್ನು ಪ್ರಶ್ನಿಸಿದಾಗ ಗೊತ್ತಿಲ್ಲದಂತೆ ನಟಿಸಿದ್ದಾಳೆ.‌ ಇದರಿಂದ ಅನುಮಾನಗೊಂಡು ಆಗಾಗ ಮನೆಗೆ ಬರುತ್ತಿದ್ದ ಮದನ್‌ ಹಾಗೂ ಮಗಳ ವಿರುದ್ಧ ತಾಯಿ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಚಿನ್ನಾಭರಣ ಕದ್ದಿರುವುದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಕದ್ದ ಚಿನ್ನವನ್ನು ಮುತ್ತೂಟ್ ಗೋಲ್ಡ್ ಲೋನ್ ಹಾಗೂ ಮಣಪ್ಪುರಂ ಗೋಲ್ಡ್​ನಲ್ಲಿ ಅಡಮಾನ ಇಟ್ಟಿದ್ದು, ಅದರಿಂದ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪ್ಪಾಜಿ ಕ್ಯಾಂಟೀನ್‍ನಲ್ಲಿ ಕೇವಲ 1 ರೂ.ಗೆ ಊಟ, ತಿಂಡಿ!

Tue May 17 , 2022
ಬೆಂಗಳೂರು, ಮೇ 17- ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ನಾಳೆ ನಮ್ಮ ಅಪ್ಪಾಜಿ ಕ್ಯಾಂಟೀನ್‍ನಲ್ಲಿ ಒಂದು ರೂ.ಗೆ ಊಟ, ತಿಂಡಿ ವಿತರಣೆ ಮಾಡುವುದಾಗಿ ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಹನುಮಂತನಗರದಲ್ಲಿರುವ ಅಪ್ಪಾಜಿ ಕ್ಯಾಂಟೀನ್‍ನಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ನೀಡಲಾಗುತ್ತಿದೆ. ದೇವೇಗೌಡರ 90ನೇ ವರ್ಷದ ಜನ್ಮದಿನದ ಅಂಗವಾಗಿ ಒಂದು ರೂ.ಗೆ ಊಟ, ತಿಂಡಿ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾರ್ವಜನಿಕರು […]

Advertisement

Wordpress Social Share Plugin powered by Ultimatelysocial