ಗೋವಾ ಪ್ರವಾಸದ ಜೊತೆ ಜೀವನದ ಪಯಣಕ್ಕೂ ಗುಡ್​ಬೈ..

 

ಕಲಬುರಗಿಯ ಕಮಲಾಪುರ ಹೊರವಲಯದಲ್ಲಿ ಖಾಸಗಿ ಬಸ್ ಹಾಗೂ ಗೂಡ್ಸ್ ಲಾರಿ ನಡುವೆ ನಿನ್ನೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಬಸ್ ಹೊತ್ತಿ ಉರಿದ ಪರಿಣಾಮ 7 ಜನರು ಸಜೀವ ದಹನವಾಗಿದ್ದಾರೆ.

ಕಲಬುರಗಿ: ಅವರೆಲ್ಲ ವೀಕೆಂಡ್ ಎಂಜಾಯ್​ ಮಾಡಲು ಹೈದರಾಬಾದ್​ನಿಂದ ಗೋವಾಕ್ಕೆ ತೆರಳಿದ್ದರು.

ಸಮುದ್ರ ದಡದಲ್ಲಿ ಮಜಾ ಮಾಡಿ, ಮರಳಿ ಬರುವಾಗ ವಿವಾಹ ವಾರ್ಷಿಕೋತ್ಸವ ಹಾಗೂ ಎರಡು ಮಕ್ಕಳ ಬರ್ತ್​ಡೇ ಕೂಡ ಆಚರಿಸಿದರು. ಇನ್ನೇನು ಖುಷಿ ಖುಷಿಯಿಂದ ಊರಿನತ್ತ ಹೋರಟವರು ಮಾರ್ಗ ಮಧ್ಯೆ ವಿಧಿಯ ಕ್ರೂರ ಆಟಕ್ಕೆ ಮಸಣ ಸೇರಿದ್ದಾರೆ.

ಕಲಬುರಗಿ ಜಿಲ್ಲೆಯ ಕಮಲಾಪುರ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ಬೆಳ್ಳಂ ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದ ಅಪಘಾತದ ಭೀಕರ ದೃಶ್ಯಗಳು ಕರುಳು ಕಿತ್ತು ಬರುವಂತಿವೆ. ಗೋವಾದಿಂದ ಹೈದರಾಬಾದ್​ಗೆ ಹೊರಟಿದ್ದ ಆರೆಂಜ್ ಟೂರ್ಸ್ ಅಂಡ್​ ಟ್ರಾವೆಲ್ಸ್​ನ ಖಾಸಗಿ ಬಸ್​ ಮತ್ತು ಹುಮನಾಬಾದ್ ಕಡೆಯಿಂದ ಕಲಬುರಗಿಯತ್ತ ಬರುತ್ತಿದ್ದ ಗೂಡ್ಸ್ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಸುಮಾರು 100-150 ಅಡಿ ದೂರದ ವರೆಗೂ ಸಾಗಿರೋ ಬಸ್, ರಸ್ತೆಯಲ್ಲಿದ್ದ ಬ್ರಿಡ್ಜ್‌ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ.

ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಗಳು28 ಜನ ಬಚಾವ್: ಅಪಘಾತ ಸಂಭವಿಸಿದ ನಂತರ ಕಂದಕಕ್ಕೆ ಉರುಳಿದ್ದ ಬಸ್​ಗೆ ಸ್ವಲ್ಪ ಸಮಯದ ನಂತರ ಬೆಂಕಿ ತಗುಲಿ ಹೊತ್ತಿ ಉರಿದಿದೆ. ನೋಡು ನೋಡುತ್ತಿದ್ದಂತೆ ಬಸ್ ಅಸ್ಥಿ ಪಂಜರದಂತಾಗಿದೆ. ಈ ವೇಳೆ ಒಂದು ಕುಟುಂಬದ 21 ಜನರು, ಇನ್ನೊಂದು ಕುಟುಂಬದ 11 ಜನರು, ಚಾಲಕ, ಇಬ್ಬರು ಕ್ಲೀನರ್ ಸೇರಿ 35 ಜನ ಬಸ್‌ನಲ್ಲಿದ್ದರು. ಸುಖ ನಿದ್ರೆಯಲ್ಲಿದ್ದವರಿಗೆ ಸಿಡಿಲು ಅಪ್ಪಳಿಸಿದಂತಾಗಿ ಬಸ್​ನ ಅಡಿಯಿಂದ ತೂರಿಕೊಂಡು ಹೊರಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನೂ ಏಳು ಜನರು ಬಸ್​ನಲ್ಲಿ ಇರುವಾಗಲೇ ಬೆಂಕಿ ತಗುಲಿ ಸಜೀವ ದಹನವಾಗಿದ್ದಾರೆ. ಸಿಕಂದರಾಬಾದ್​ ನಿವಾಸಿಗಳಾದ ಇಂಜಿನಿಯರ್ ಅರ್ಜುನಕುಮಾರ (37), ಅವರ ಪತ್ನಿ ಸರಳಾದೇವಿ(32), ಪುತ್ರ ಬಿವಾನ್ (4), ದೀಕ್ಷಿತ್ (9), ಅನಿತಾ ರಾಜು (40), ಶಿವಕುಮಾರ (35) ಮತ್ತು ಇವರ ಪತ್ನಿ ರವಾಲಿ (30) ಬೆಂಕಿಗಾಹುತಿಯಾದ ದುರ್ದೈವಿಗಳು.

ಕಲಬುರಗಿಯ ಕಮಲಾಪುರ ಹೊರವಲಯದಲ್ಲಿ ಸಂಭವಿಸಿದ ಬಸ್​ ಅಪಘಾತಕೊನೆಯ ವಿವಾಹ ವಾರ್ಷಿಕೋತ್ಸವ ಆಚರಣೆ: ಇಂಜಿನಿಯರ್ ಅರ್ಜುನ್ ಕುಟುಂಬಸ್ಥರು ಮತ್ತು ಕುಟುಂಬ ಸ್ನೇಹಿತರು ಸೇರಿ ವೀಕೆಂಡ್ ಮಸ್ತಿಗಾಗಿ ಮೇ 29 ರಂದು ಗೋವಾಕ್ಕೆ ತೆರಳಿದ್ದರು. ನಾಲ್ಕು ದಿನ ಎಂಜಾಯ್ ಮಾಡಿ ಗುರುವಾರ ಮರಳುವ ಮುನ್ನ ಅರ್ಜುನ್ ದಂಪತಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಂಡಿದ್ದಾರೆ. ಅಲ್ಲದೇ, 4 ವರ್ಷದ ಮಗನ ಬರ್ತ್​ಡೇ ಆಚರಣೆ ಕೂಡ ಮಾಡಿದ್ದಾರೆ. ಘಟನೆಯಿಂದ ಬದುಕುಳಿದ ಗಾಯಾಳುಗಳನ್ನ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವರಿಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿದ್ದರೆ ಕೆಲವರಿಗೆ ಗಂಭೀರ ಗಾಯಗಳಾಗಿವೆ.

ಅಪಘಾತದಲ್ಲಿ ಮೃತ ಪಟ್ಟ ದುರ್ದೈವಿಗಳುಗುರುತು ಸಿಗದಂತೆ ಬೆಂದುಹೋದ ಶವಗಳು: ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹುಮನಾಬಾದ್ ಮತ್ತು ಕಲಬುರಗಿಯ ಅಗ್ನಿಶಾಮಕ ದಳದ 15 ಸಿಬ್ಬಂದಿ ಸುಮಾರು ಎರಡು ಗಂಟೆ ಸತತ ಪ್ರಯತ್ನ ನಡೆಸಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಜ್ವಾಲೆಗೆ ಬಸ್ ಸಂಪೂರ್ಣ ಸುಟ್ಟು ಅಸ್ಥಿಪಂಜರದಂತಾಗಿದೆ. ಸಜೀವ ದಹನವಾಗಿರೋ 7 ಮೃತ ದೇಹಗಳ ಗುರುತು ಸಿಗದಂತಾಗಿವೆ. ಎರಡು ಜೆಸಿಬಿಗಳನ್ನು ಬಳಸಿಕೊಂಡು ಕಂದಕಕ್ಕೆ ಬಿದ್ದಿರೋ ಬಸ್ ಮೇಲೆತ್ತಿ ಮೃತ ದೇಹಗಳನ್ನು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಆರೋಗ್ಯ ಸಿಬ್ಬಂದಿ ಹೊರತೆಗೆದು FSL ಟೀಮ್​ನೊಂದಿಗೆ ಗುರುತು ಪತ್ತೆ ಹೆಚ್ಚುವ ಕೆಲಸ ಮಾಡಿದರು. ಜೊತೆಗೆ ಎಸ್​ಪಿ ಇಶಾ ಪಂತ್, ಅಡಿಷನಲ್ ಎಸ್​ಪಿ ಪ್ರಸನ್ನ ಸೇರಿದಂತೆ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ, ಸಂಪೂರ್ಣ ಕಾರ್ಯಾಚರಣೆ ಮುಗಿಸಿದರು.

ಅದು ಅಪಘಾತ ವಲಯ: ಕಮಲಾಪುರ ಬಳಿಯ ಚಿಂದಿ ಬಸಣ್ಣ ದೇವಸ್ಥಾನದಿಂದ ಅಪಘಾತ ಸಂಭವಿಸಿರೋ ಸ್ಥಳದವರೆಗೂ ಅಪಘಾತ ವಲಯ ಎಂದು ಗುರುತಿಸಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಹಲವಾರು ದುರಂತಗಳು ಸಂಭವಿಸಿ, ಜನ ಪ್ರಾಣ ಕಳೆದುಕೊಂಡಿದ್ದಾರೆ. ಪದೇ ಪದೆ ಅಪಘಾತ ಸಂಭವಿಸುತ್ತಿದ್ದರೂ ಪೊಲೀಸರು, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

ಬಸ್​ನಲ್ಲಿ ತೆಗೆದುಕೊಂಡ ಕೊನೆಯ ಫೋಟೋಕೊನೆಯ ಫೋಟೋಗೆ ಫೋಸ್: ಗೋವಾದಲ್ಲಿ ಮಸ್ತ್​ ಎಂಜಾಯ್ ಮಾಡಿ ತಮ್ಮೂರಿಗೆ ಹೊರಟು ನಿಂತವರಿಗೆ ಮಾರ್ಗಮಧ್ಯೆ ಇಂತಹದೊಂದು ಘೋರ ದುರಂತ ಸಂಭವಿಸಬಹುದು ಎಂದು ಕನಸು ಮನಸ್ಸಿನಲ್ಲೂ ಕಾಣದವರು ಬಸ್​ನಲ್ಲಿ ಕೊನೆಯದಾಗಿ ಫೋಟೋ ತೆಗೆದುಕೊಂಡಿದ್ದರು. ಇನ್ನು ತಮ್ಮವರನ್ನು ಕಳೆದುಕೊಂಡಿರೋ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಹೆಚ್ಚಳದ ಆತಂಕ : 5 ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಬಂದ ಪತ್ರದಲ್ಲೇನಿದೆ ?

Sat Jun 4 , 2022
  ನವದೆಹಲಿ : ಇಷ್ಟು ತಿಂಗಳು ಕೊರೊನಾ ಇಲ್ಲದೆ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಯಾಕಂದ್ರೆ ಕೊರೊನಾ ಎಂಬ ಕಾಣದ ವೈರಸ್ ನಿಂದಾಗಿ ಜನರ ಜೀವನ ನೆಲ ಕಚ್ಚಿದೆ. ಈ ವರ್ಷದಿಂದ ಕೊಂಚ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಮತ್ತೆ ಕೊರೊನಾ ಹೆಚ್ಚಳ ಜನರನ್ನು ಜಿಗುಪ್ಸೆಗೆ ದೂಡಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ಹಾಗೂ ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ಐದು ರಾಜ್ಯಗಳಿಗೆ ಪತ್ರ […]

Advertisement

Wordpress Social Share Plugin powered by Ultimatelysocial