ದೊರೈ,ಅಣ್ಣಾವ್ರು,ವರದಪ್ಪ, ಉದಯಶಂಕರ್ ಕಳಕೊಂಡು ಒಂಟಿಯಾಗಿದ್ದ ಭಗವಾನ್!

ಭಾರತೀಯ ಚಿತ್ರರಂಗದಲ್ಲಿ ಈ ಮಟ್ಟಿಗೆ ಯಶಸ್ಸು ಕಂಡ ನಿರ್ದೇಶಕ ಜೋಡಿಗಳು ಮತ್ತೊಬ್ಬರು ಇಲ್ಲ ಅಂತ ಅನಿಸುತ್ತೆ. ದೊರೈ ಮತ್ತು ಭಗವಾನ್ ಇಬ್ಬರೂ ಒಬ್ಬರೇ ಎಂದು ಭಾವಿಸಿದ್ದ ಅದೆಷ್ಟೋ ಮಂದಿ ಇದ್ದರು. ದೊರೈ ನಿಧನದ ಬಳಿಕವಷ್ಟೇ ಹಲವರಿಗೆ ಇವರು ಒಬ್ಬರಲ್ಲ ಇಬ್ಬರು ಅನ್ನೋ ಸತ್ಯ ತಿಳಿದಿತ್ತು.

ಆ ಮಟ್ಟಿಗೆ ಯಶಸ್ಸು ಕಂಡ ಜೋಡಿ ಇದು.

ದೊರೈ ಕಾಲವಾಗಿ ಹಲವು ವರ್ಷಗಳೇ ಆಗಿವೆ. ಈಗ ಭಗವಾನ್ ಕೂಡ ಅವರ ಹಾದಿಯನ್ನೇ ಹಿಡಿದು ಹೊರಟು ಹೋಗಿದ್ದಾರೆ. ಆದರೆ, ಹಿರಿಯ ಜೀವ ಭಗವಾನ್‌ ಕನ್ನಡ ಚಿತ್ರರಂಗದಲ್ಲಿ ನಾಲ್ಕು ಮಂದಿ ಸ್ನೇಹಿತರನ್ನು ಕಳೆದುಕೊಂಡು ಒಂಟಿಯಾಗಿದ್ದರು.

ಜೀವದ ಗೆಳೆಯ ದೊರೈ ಕಾಲವಾದ ಬಳಿಕವಂತೂ ಭಗವಾನ್ ಸಿನಿಮಾದಿಂದ ನಿಧಾನವಾಗಿ ದೂರವಾಗ ತೊಡಗಿದ್ದರು. ಆ ಬಳಿಕ ಉದಯ್ ಶಂಕರ್, ಡಾ.ರಾಜ್‌ಕುಮಾರ್, ಅವರ ಸಹೋದರ ವರದಪ್ಪ ಅಗಲಿದ ಬಳಿಕ ಅವರ ಬಹುಕಾಲದ ಸ್ನೇಹದ ಕೊಂಡೆಯೆಲ್ಲ ಕಳಚಿ ಬಿದ್ದಂತಾಗಿತ್ತು. ಅದರಲ್ಲೂ ದೊರೈ ಹಾಗೂ ಭಗವಾನ್ ನಡುವಿನ ಒಡನಾಟವೇ ಬೇರೆ. ದೊರೈ ಅಗಲಿದ ಬಳಿಕವೂ ಅವರ ಸ್ನೇಹದ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದರು.

ದೊರೈ-ಭಗವಾನ್‌ರದ್ದು ಹಸಿವು ಬೆಸೆದ ಸ್ನೇಹ

ಕನ್ನಡ ಚಿತ್ರರಂಗದಲ್ಲಿ ಅಂದು ಎಲ್ಲರಿಗೂ ಕಷ್ಟಕಾಲ. ಆ ಕಷ್ಟಕಾಲದಲ್ಲಿ ಎರಡು ದಿನ ಭಗವಾನ್ ಊಟವಿಲ್ಲದೆ ಕಳೆದಿದ್ದರು. ಆ ವೇಳೆ ಹೊಟೇಲ್ ಮುಂದೆ ನಿಂತು ಯಾರಾದರೂ ಕನ್ನಡಿಗರು ಬರುತ್ತಾರಾ? ಅವರ ಬಳಿ ಒಂದರೆಡು ರೂಪಾಯಿ ಸಾಲ ತೆಗೆದುಕೊಂಡು ಇವತ್ತಿನ ಹಸಿವು ತೀರಿಸಿಕೊಳ್ಳೋಣ ಅಂತಿದ್ದರು. ಆಗಲೇ ಬಿಳಿ ಶರ್ಟ್ ಹಾಗೂ ಪ್ಯಾಂಟ್ ಹಾಕೊಂಡು ಬರುತ್ತಿದ್ದ ದೊರೈ ಕಂಡು, ಸಾಲ ಕೇಳಿದ್ದರು. ಆಗ ಭಗವಾನ್‌ಗೆ ದೊರೈ ಪರಿಚಯವಿತ್ತೇ ಹೊರತು, ಆತ್ಮೀಯತೆ ಬೆಳೆದಿರಲಿಲ್ಲ. “ದೊರೈ ಒಂದು ರೂಪಾಯಿ ಇದ್ರೆ ಸಾಲ ಕೊಡಿ. ನಾಳೆ ನಮ್ಮ ಪ್ರಡ್ಯೂಸರ್ ಬಂದು ದುಡ್ಡು ಕೊಟ್ಟ ಕೂಡಲೇ ಕೊಟ್ಟು ಬಿಡುತ್ತೇನೆ” ಎಂದು ಭಗವಾನ್ ಸಾಲ ಕೇಳಿದ್ದರು. ಆಗ ದೊರೈ ಜೇಬಿನಲ್ಲಿದ್ದ ಎಂಟಾಣೆ ತೆಗೆದು ಭಗವಾನ್‌ಗೆ ಕೊಟ್ಟಿದ್ದರು.

ದೊರೈ ಕೂಡ ಸಾಲ ಮಾಡಿದ್ರು

ಹೊಟೇಲ್ ಬಳಿ ಭಗವಾನ್ ನಿರ್ದೇಶಕ ದೊರೈ ಬಳಿ ಸಾಲವೇನೋ ಕೇಳಿದ್ದರು. ಆದರೆ, ಅವರ ಬಳಿ ಇದ್ದ ಎಂಟಾಣೆಯನ್ನೂ ಹೊರಟು ಹೋಗಿದ್ದರು. ಆ ಬಳಿಕ ಭಗವಾನ್ ಹಿಂತಿರುಗಿ ಆಫೀಸ್‌ನಲ್ಲಿ ಕೆಲಸ ಶುರು ಮಾಡಿದ್ದರು. ಆಗ ದಿಢೀರನೇ ಜಿವಿ ಅಯ್ಯರ್ ಬಂದು, “ನೀನು ಮಾಡಿರೋ ಕೆಲಸ ನನಗೆ ಗೊತ್ತು. ದೊರೈ ಹತ್ತಿರ ಸಾಲ ತೆಗೆದುಕೊಂಡಿದ್ದೀಯಂತೆ. ಅವನೇ ನನ್ನ ಬಳಿ ಬಂದು ಸಾಲ ತೆಗೆದುಕೊಂಡು ನಾಲ್ಕು ಇಡ್ಲಿ ತಿಂದು ಬರುತ್ತೇನೆ ಎಂದು ಹೋಗಿದ್ದ” ಎಂದಿದ್ದರು. ಆಗಲೇ ದೊರೈ ವ್ಯಕ್ತಿತ್ವ ಭಗವಾನ್ ಅವರಿಗೆ ಗೊತ್ತಾಗಿತ್ತು. ಅಂದಿನಿಂದ ಸ್ನೇಹಿತರಾಗಿದ್ದವರು ಜಂಟಿಯಾಗಿ ನಿರ್ದೇಶಿಸಿದ್ದ ಕೊನೆಯ 49 ಸಿನಿಮಾಗಳವರೆಗೂ ಅದೇ ಸ್ನೇಹವಿತ್ತು. ಅವರ ಕೊನೆ ದಿನದವರೆಗೂ ಭಗವಾನ್ ಅಂತ ಯಾರಾದೂ ಕರೆದರೆ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ದೊರೈ ಭಗವಾನ್ ಅಂತ ಕರೆದರೆ ಅವರ ಕಿವಿಗಳು ನೆಟ್ಟಗಾಗುತ್ತಿದ್ದವು.

‘ನಾಲ್ಕು ರತ್ನಗಳನ್ನು ಕಳೆದುಕೊಂಡಿದ್ದೇನೆ’ “ದೊರೈ ಅವರ ಈಗಿಲ್ಲ. ಆದ್ದರಿಂದಾಗಿ ನಾನು ಒಂಟಿಯಾಗಿದ್ದೀನಿ. ಸ್ನೇಹದಲ್ಲಿ ನಾನು ನಿರ್ಭಾಗ್ಯನಾಗಿದ್ದೀನಿ. ಯಾಕಂದ್ರೆ ನಾನು 4 ರತ್ನಗಳನ್ನು ಕಳೆದುಕೊಂಡಿದ್ದೀನಿ. ರಾಜ್‌ಕುಮಾರ್, ಅವರ ತಮ್ಮ ವರದಪ್ಪ, ಉದಯ್ ಶಂಕರ್ ಹಾಗೂ ದೊರೈ. ಈ ನಾಲ್ಕೂ ಜನನೂ ನನ್ನ ಜೀವನದ ಅವಿಭಾಜ್ಯ ಅಂಗ. ಅವರನ್ನು ಕಳೆದುಕೊಂಡು ಒಂಟಿಯಾಗಿದ್ದೇನೆ.ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಾವುಕರಾಗಿದ್ದರು.ಅಣ್ಣಾವ್ರಿಗೆ 36 ಸಿನಿಮಾ ನಿರ್ದೇಶನ  ಡಾ.ರಾಜ್‌ ಕುಮಾರ್ ಅಂದರೆ ದೊರೈ-ಭಗವಾನ್‌ಗೆ ಅಚ್ಚುಮೆಚ್ಚು. ಅವರಂತಹ ಕಲಾವಿದನೇ ಇಲ್ಲ ಎನ್ನುತ್ತಿದ್ದರು. ರಾಜ್‌ಕುಮಾರ್ ಅವರು ನಿರ್ದೇಶಕರ ನಟ ಎನ್ನುತ್ತಿದ್ದರು. ಅಣ್ಣಾವ್ರಿಗಾಗಿ ನಿರ್ದೇಶಿಸಿದ ಸುಮಾರು 36 ಸಿನಿಮಾಗಳಲ್ಲಿ ಬಾಂಡ್, ಪ್ರೇಮಿ, ಮಾಸ್ ಹೀರೊ ಅಷ್ಟೇ ಅಲ್ಲದೆ ತ್ಯಾಗಿಯಾಗಿಯೂ ತೆರೆಮೇಲೆ ತಂದಿದ್ದರು. ಆ ಎಲ್ಲಾ ಸಿನಿಮಾಗಳೂ ಅಣ್ಣಾವ್ರನ್ನು ಸೂಪರ್‌ಸ್ಟಾರ್ ಪಟ್ಟಕ್ಕೆ ತೆಗೆದುಕೊಂಡು ಹೋಗಿತ್ತು. ಆದರೆ, ಸಿನಿಮಾ ಹೊರತಾಗಿಯೂ ಭಗವಾನ್ ಗೆಳೆಯ ದೊರೈ ಜೊತೆ ರಾಜ್‌ಕುಮಾರ್, ಉದಯ್ ಶಂಕರ್ ಹಾಗೂ ವರದಪ್ಪ ಅವರೊಂದಿಗೆ ಸ್ನೇಹಿತರಾಗಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಮೇಘನಾ ರಾಜ್ ಮತ್ತೆ ಸಿನಿಮಾ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ.

Mon Feb 20 , 2023
ನಟಿ ಮೇಘನಾ ರಾಜ್ ಮತ್ತೆ ಸಿನಿಮಾ ರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ನಿಮ್ಮೊಂದಿಗೆ ವರ್ಷದ ಕನಸು ಹಂಚಿಕೊಳ್ಳಲಿದ್ದೇನೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದರು ಮೇಘನಾ ರಾಜ್ ನಿನ್ನೆ ಆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಅವರ ಕನಸಿಗೆ ಇಡೀ ಚಿತ್ರೋದ್ಯಮವೇ ಬೆಂಬಲವಾಗಿ ನಿಂತಿದೆ. ನೂರಕ್ಕೂ ಅಧಿಕ ನಟ ನಟಿಯರಿಂದ ಏಕಕಾಲಕ್ಕೆ ಮೇಘನಾ ರಾಜ್ ನಟನೆಯ “ತತ್ಸಮ ತದ್ಭವ” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ನಟಿ ಮೇಘನಾ ರಾಜ್ ಸರ್ಜಾ ಬಹಳ ದಿನಗಳ […]

Advertisement

Wordpress Social Share Plugin powered by Ultimatelysocial