ಭಾರತೀಯ ಪುರಾತತ್ವ ಸಂಶೋಧನಾ ಪಿತಾಮಹ ಕನ್ನಿಂಗ್‍ಹ್ಯಾಮ್

ಬೆಂಗಳೂರಿನಲ್ಲಿ ಕನ್ನಿಂಗ್ಹ್ಯಾಮ್ ರಸ್ತೆ ಎಂಬುದು ಒಂದು ಪ್ರಸಿದ್ಧ ರಸ್ತೆ. ಈ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ ಹಲವಾರು ವರ್ಷಗಳ ಕಾಲ ಹಾದಿ ಸವೆಸಿದ್ದರೂ ಕನ್ನಿಂಗ್ ಹ್ಯಾಮ್ ಎಂಬುವರು ಯಾರು ಎಂಬ ಬಗ್ಗೆ ನಾನು ಚಿಂತಿಸ ಹೋಗಿರಲಿಲ್ಲ. ನಮ್ಮ ರಸ್ತೆಗಳ ಹೆಸರು ಕೂಡ ನಮಗೆ ‘ಏನೋ ಒಂದು’ ಎಂದು ಮನೆಯವರು ಹೆಸರಿಟ್ಟಿರುವ ಹಾಗೆ ಯಾಂತ್ರಿಕವಾಗಿಬಿಟ್ಟಿರುತ್ತದೆ.ಜನವರಿ 23 ಅಲೆಗ್ಸಾಂಡರ್ ಕನ್ನಿಂಗ್ಹ್ಯಾಮ್ (1814-1893) ಅವರು ಹುಟ್ಟಿದ ದಿನ. ಯಾರು ಈ ಕನ್ನಿಂಗ್ಹ್ಯಾಮ್?ಬ್ರಿಟಿಷರ ಕಾಲದಲ್ಲಿ ಭಾರತಕ್ಕೆ ಬಂದ ವಿದ್ವಾಂಸರು, ಪ್ರತಿಭಾವಂತರು ಅನೇಕರು. ಹೀಗೆ ಬಂದವರಲ್ಲಿ ಕೆಲವರು ಭಾರತಕ್ಕೆ ವಿಶೇಷವಾದ ಕೊಡುಗೆ ನೀಡಿದರು. ಅಲೆಗ್ಸಾಂಡರ್ ಕನ್ನಿಂಗ್ಹ್ಯಾಮ್ ಅಂತಹವರಲ್ಲಿ ಒಬ್ಬರು. ಭಾರತದ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದಾದ ಹರಪ್ಪದ ಕುರುಹುಗಳನ್ನು ಪತ್ತೆ ಮಾಡಿ ಭಾರತೀಯ ಪುರಾತತ್ವ ಶೋಧನೆಗೆ ಹೊಸ ಮಾರ್ಗವನ್ನು ನಿರ್ಮಿಸಿಕೊಟ್ಟ ಮಹಾನ್ ಸಾಧಕರಿವರು. ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಅವರಲ್ಲಿ ಇತಿಹಾಸದ ಬಗ್ಗೆ ಅತೀವ ಆಸಕ್ತಿಯಿತ್ತು. ಹಾಗಾಗಿ ಏಷ್ಯಾಟಿಕ್ ಸೊಸೈಟಿಯ ಕಾರ್ಯದರ್ಶಿಯಾಗಿದ್ದ ಜೇಮ್ಸ್ ಪ್ರಿನ್ಸೆಪ್ ಅವರೊಂದಿಗೆ ಸಕ್ರಿಯವಾಗಿ ಅಧ್ಯಯನದಲ್ಲಿ ತೊಡಗಿದರು. ಅಂದಿನ ವೈಸರಾಯ್ ಅವರೊಂದಿಗೆ ಅವರು ನಡೆಸಿದ ನಿರಂತರ ಚಿಂತನೆಗಳ ಮೇರೆಗೆ, 1862ರಲ್ಲಿ ಭಾರತ ಸರ್ಕಾರದ ಪುರಾತತ್ವ ಸಂಶೋಧನಾ ಇಲಾಖೆಯನ್ನು ಸ್ಥಾಪಿಸಿ ಅದರ ಸರ್ವೇಯರ್ ಆಗಿ ಕಾರ್ಯ ನಿರ್ವಹಿಸಿದರು. ಅವರು ಸುಮಾರು 23 ವರ್ಷಗಳ ಕಾಲ ಪುರಾತತ್ವ ಸಂಶೋಧನೆಯಲ್ಲಿ ಅವಿರತ ದುಡಿದರು. 1871ರ ವರ್ಷದಿಂದ 1885ರ ಅವಧಿಯವರೆಗೆ ಅವರು ಭಾರತೀಯ ಪುರಾತತ್ವ ಸಂಶೋಧನಾ ಇಲಾಖೆಯ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸಿದರು. ಜತೆಗೆ ಅನೇಕ ಆಸಕ್ತ ಸಂಶೋಧಕರಿಗೆ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದರು.ಹೆಚ್ಚಿನ ಸೌಕರ್ಯಗಳಿಲ್ಲದ ಕಾಲದಲ್ಲೇ ಸಂಶೋಧನೆಯಲ್ಲಿ ತೊಡಗಿಕೊಂಡ ಕನ್ನಿಂಗ್ಹ್ಯಾಮ್ ಅಪೂರ್ವವಾದ ಮಾಹಿತಿಯನ್ನು ಸಂಗ್ರಹಿಸಿ ಪ್ರಕಟಿಸಿದರು. ಅವರು ಸ್ವಯಂ ಪುರಾತತ್ವ ಸಂಶೋಧನೆಯ ಹನ್ನೊಂದು ಬೃಹತ್ ಸಂಪುಟಗಳ ಲೇಖಕರಾಗಿ ದುಡಿದರು. 1885ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದ ನಂತರ ಸಹಾ ಬೌದ್ಧ ಸ್ಥಳಗಳ ಉತ್ಕನನ ಮತ್ತು ಪ್ರಾಚೀನ ನಾಣ್ಯಗಳ ಸಂಗ್ರಹದ ಕುರಿತಾಗಿ ಪುಸ್ತಕಗಳನ್ನು ಬರೆದರು.ಕನ್ನಿಂಗ್ಹ್ಯಾಮ್ ಅವರ ಪ್ರಸಿದ್ಧ ಪುಸ್ತಕಗಳಲ್ಲಿ ಬಿಲ್ಸಾ ಟೋಪ್ಸ್, ದಿ ಏನ್ಷಂಟ್ ಜಿಯಾಗ್ರಫಿ ಆಫ್ ಇಂಡಿಯಾ’, ದಿ ಬುಕ್ ಆಫ್ ಇಂಡಿಯನ್ ಎರಾಸ್, ಕಾಯಿನ್ಸ್ ಆಫ್ ಏನ್ಷಂಟ್ ಇಂಡಿಯಾ, ದಿ ಸ್ತೂಪ ಆಫ್ ಭಾರಹತ್ ಮುಂತಾದವು ಅವರು ಭಾರತೀಯ ಪ್ರಾಚ್ಯ ಸಂಶೋಧನೆಯ ಕುರಿತಾಗಿ ನೀಡಿರುವ ಅಮೂಲ್ಯ ಕೊಡುಗೆಗಳೆನಿಸಿವೆ.ಸಂಚಿ, ಸಾರಾನಾಥ, ಮಹಾಬೋಧಿ ದೇಗುಲ ಮುಂತಾದ ಪ್ರಸಿದ್ಧ ಸ್ಥಳಗಳನ್ನೂ ಒಳಗೊಂಡಂತೆ ಕನ್ನಿಂಗ್ಹ್ಯಾಮ್ ಅವರು ಭಾರತದ ಅನೇಕ ಐತಿಹಾಸಿಕ ಸ್ಥಳಗಳ ಉತ್ಕನನದಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಈ ಮಹಾನ್ ಸಾಧಕ ಕನ್ನಿಂಗ್ಹ್ಯಾಮ್ ಅವರು 1893ರ ನವೆಂಬರ್ 28ರಂದು ಲಂಡನ್ನಿನಲ್ಲಿ ನಿಧನರಾದರು. ಅವರ ಅಮೂಲ್ಯವಾದ ಪ್ರಾಚೀನ ಭಾರತೀಯ ನಾಣ್ಯಗಳ ಸಂಗ್ರಹವನ್ನು ಬ್ರಿಟಿಷ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟ್ರರಾಜಕಾರಣದ ಪ್ರವೇಶದ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ....

Sat Feb 19 , 2022
ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನನಗೆ ಆಹ್ವಾನ ನೀಡಿದ್ದರು ಎಂದು ಹೇಳಿದ್ದಾರೆ. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣಕ್ಕೆ ಬನ್ನಿ ಎಂದು ರಾಹುಲ್ ಗಾಂಧಿ ನನಗೆ ಆಹ್ವಾನ ನೀಡಿದ್ದರು. ಕೊಪ್ಪಳ ಮತ್ತು ಮೈಸೂರು ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ನಂತರ ರಾಷ್ಟ್ರ ರಾಜಕಾರಣ ಸಹವಾಸವೇ ಬೇಡ . ಮತ್ತೆ ರಾಷ್ಟ್ರ ರಾಜಕಾರಣಕ್ಕೆ ಬರುವುದಿಲ್ಲ […]

Advertisement

Wordpress Social Share Plugin powered by Ultimatelysocial