ನೆಲಮಂಗಲದಲ್ಲಿ ಸರಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನ

ನೆಲಮಂಗಲದಲ್ಲಿ ಸರಗಳ್ಳತನ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನ ಬಂದಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.  ತುಮಕೂರು ಮೂಲದ ರಂಗರಾಜು ಸಿ.ಪಿ ಅಲಿಯಾಸ್ ರಾಜು, ತಮಿಳುನಾಡು ರಾಜ್ಯ ಕೃಷ್ಣಗಿರಿ ಮೂಲದ ಶಶಿಕುಮಾರ್ ಅಲಿಯಾಸ್ ಶಶಿ, ಹಾಸನ ಮೂಲದ ಸಂದೀಪ್ ಟಿ.ಎನ್ ಅಲಿಯಾಸ್ ಕಿಟ್ಟಿ ಹಾಗೂ ಹಾಸನ ಮೂಲದ ಗೋಪಾಲ್ ಎ.ಬಿ ಬಂಧಿತ ಆರೋಪಿಗಳಾಗಿದ್ದು ಮೂರು ಜನ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರೆ ಮತ್ತೊಬ್ಬ ಮೆಕಾನಿಕ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಬಂದಿತರು ಬೆಂಗಳೂರು ಉತ್ತರ ತಾಲೂಕಿನ  ದಾಸನಪುರ, ಲಕ್ಷ್ಮಿಪುರ, ಆಲೂರು ಹಾಗೂ ದೊಂಬರಹಳ್ಳಿ ಗ್ರಾಮಗಳಲ್ಲಿ ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡಿದ್ದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಖ ನಾಲ್ಕು ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಬೆನ್ನತ್ತಿದ ಪೊಲೀಸರಿಗೆ  ಆರೋಪಿಗಳು ಸಿಕ್ಕಿಬಿದ್ದಿದ್ದು, ಕೃತ್ಯಕ್ಕೆ ಬಳಸಿದ್ದ ಬ್ಲಾಕ್ ಪಲ್ಸರ್  ಕಳ್ಳತನ ಮಾಡಿದ್ದ ಡಿಯೋ ಬೈಕ್ ಹಾಗೂ 140 ಗ್ರಾಂ ಚಿನ್ನಾಭರಣಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ

Sat Jul 18 , 2020
ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ನೆಲಮಂಗಲದಲ್ಲಿ ಒಟ್ಟು 185 ಗಡಿ ದಾಟಿ ಮುನ್ನುಗ್ಗುತ್ತಿರುವ ಸೋಂಕಿತರ ಸಂಖ್ಯೆ. ಈ ಮದ್ಯೆಯು ಸೋಂಕಿಗೆ ತಲೆಕೆಡಿಸಿಕೊಳ್ಳದೆ ಹುಟ್ಟಹಬ್ಬ ಆಚರಿಸಿಕೊಂಡ ಗ್ರಾಮ ಪಂಚಾಯತಿ ಸದಸ್ಯ. ಲಾಕ್‌ಡೌನ್ ಇದ್ದರೂ ನಿಯಮ ಮೀರಿ ಹುಟ್ಟುಹಬ್ಬ ಆಚರಿಸಿಕೊಂಡ ವಾಜರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಕೆಂಪರಾಜು. ಹುಟ್ಟುಇಹಬ್ಬ ಆಚರಣೆ ವೇಳೆ ಸಾಮಾಜಿಕ ಅಂತರ ಇಲ್ಲ, ಒಬ್ಬರೂ ಸಹ ಮಾಸ್ಕ್ ದರಿಸಿಲ್ಲ. ಜವಬ್ದಾರಿ ಮರೆತು ಹುಟ್ಟು ಹಬ್ಬ ಆಚರಣೆಗೆ ಸ್ಥಳೀಯರ ಕಿಡಿ Please follow […]

Advertisement

Wordpress Social Share Plugin powered by Ultimatelysocial