ಯುವತಿಯನ್ನು ಯುವಕನೊಬ್ಬ ಅಡ್ಡಗಟ್ಟಿ ಮೊಬೈಲ್​ ಫೋನ್​ ಕಸಿದುಕೊಂಡು!

ಶಿವಮೊಗ್ಗ: ಆನ್​ಲೈನ್​ ಕ್ಲಾಸ್​ಗೆಂದು ನೆಟ್ವರ್ಕ್ ಹುಡುಕುತ್ತ ಗುಡ್ಡ ಪ್ರದೇಶದತ್ತ ಹೋಗುತ್ತಿದ್ದ ಯುವತಿಯನ್ನು ಯುವಕನೊಬ್ಬ ಅಡ್ಡಗಟ್ಟಿ ಮೊಬೈಲ್​ ಫೋನ್​ ಕಸಿದುಕೊಂಡು ಕಿರುಕುಳ ಕೊಟ್ಟ ಪ್ರಕರಣ ನಡೆದಿದೆ. ಊರಿನವರಿಗೆ ವಿಷಯ ತಿಳಿಯುತ್ತಿದ್ದಂತೆ ಮೊಬೈಲ್​ಫೋನ್​ ಹಾಗೂ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಾರಲಗೋಡು ಸಮೀಪ ಈ ಘಟನೆ ನಡೆದಿದೆ. ಆನ್​​ಲೈನ್​ ಕ್ಲಾಸ್​​ಗಾಗಿ ಯುವತಿಯೊಬ್ಬಳು ಮನೆಯಿಂದ ಅನತಿ ದೂರದ ಎತ್ತರದ ಪ್ರದೇಶಕ್ಕೆ ಹೋಗುತ್ತಿದ್ದಾಗ ಯುವಕನೊಬ್ಬ ದಾರಿಯಲ್ಲಿ ಅಡ್ಡ ಹಾಕಿ ಕಿರುಕುಳ ನೀಡಿದ್ದಾನೆ.ಈ ಬಗ್ಗೆ ವಿಷಯ ತಿಳಿದು ಸ್ಥಳೀಯರು ಧಾವಿಸುತ್ತಿದ್ದಂತೆ ಮೊಬೈಲ್​ಫೋನ್​ ಹಾಗೂ ಬೈಕ್ ಬಿಟ್ಟು ಯುವಕ ಪರಾರಿಯಾಗಿದ್ದಾನೆ. ಕಿರುಕುಳ ಕೊಟ್ಟವ ಸಾಗರ ತಾಲೂಕಿನ ಅರಳಗೋಡು ಗ್ರಾಮದ ಯುವಕ ಎನ್ನಲಾಗಿದೆ. ಕಿರುಕುಳ ಕೊಟ್ಟವನಿಗಾಗಿ ಈಗ ಸ್ಥಳೀಯರು ಹುಡುಕಾಟ ಆರಂಭಿಸಿದ್ದಾರೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟ್ಯಾಂಪರ್ ಪ್ರೂಫ್ ಭದ್ರತಾ ವೈಶಿಷ್ಟ್ಯಗಳೊಂದಿಗೆ ಇ-ಪಾಸ್‌ಪೋರ್ಟ್ ಪ್ರಯಾಣವನ್ನು ಸುಗಮಗೊಳಿಸುತ್ತದೆ, ನಕಲಿಯನ್ನು ಪರಿಶೀಲಿಸುತ್ತದೆ

Fri Feb 4 , 2022
  ಎಂಬೆಡೆಡ್ ಚಿಪ್‌ಗಳನ್ನು ಹೊಂದಿರುವ ಇ-ಪಾಸ್‌ಪೋರ್ಟ್‌ಗಳನ್ನು 2022-2023 ರಲ್ಲಿ ದೇಶದಲ್ಲಿ ಹೊರತರಲಾಗುವುದು. ಇ-ಪಾಸ್‌ಪೋರ್ಟ್‌ಗಳು ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಚಿಪ್‌ನಂತಹ ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಇ-ಪಾಸ್‌ಪೋರ್ಟ್‌ಗಳನ್ನು ಸರ್ಕಾರವು ಈ ವರ್ಷ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಪಾಸ್‌ಪೋರ್ಟ್ ಬುಕ್‌ಲೆಟ್‌ನಲ್ಲಿ ಅಳವಡಿಸಲಾಗಿರುವ ಚಿಪ್‌ನಲ್ಲಿ ಡಿಜಿಟಲ್ ಆಗಿ ಸಂಗ್ರಹಿಸಲಾಗುವುದು ಎಂದು ವಿ ಮುರಳೀಧರನ್ ತಿಳಿಸಿದ್ದಾರೆ. […]

Advertisement

Wordpress Social Share Plugin powered by Ultimatelysocial