ತಿರುಪ್ಪಾವೈ 27 | Thiruppavai 27 |

 
ನೀನೀವ ಪಾಣೆ ಮೊಸರು ಹಾಲೋಗರ ಮಧುವನ್ನು ಸೇವಿಸುವೆವು.
ಕೂಡಾರೈವೆಲ್ಲುಂ ಶೀರ್‌ಗೋವಿಂದಾ ಉನ್ತನ್ನೈ
ಪ್ಪಾಡಿಪರೈಗೊಂಡು ಯಾಂ ಪೆರುಶಮ್ಮಾನಂ
ನಾಡು ಪುಹಳುಂ ಪರಿಶಿನಾಲ್ ನನ್ರಾಹ ಶೂಡಹಮೇ ತೋಳ್ವಳೈಯೇ ತೋಡೇ ಶೆವಿಪ್ಪೂವೇ
ಪಾಡಗಮೇ ಯೆನ್ರನಯ ಪಲ್ಕಲನುಂ ಯಾಂ ಅಣಿವೋಂ
ಆಡೈಯುಡುಪ್ಪೋಂ ಅದನ್ವಿನ್ನೇ ಪಾರ್ಚೋರ
ಮೂಡ ನೆಯ್ ಪೆಯ್ದ್ ಮುಳಂಗೈವಳಿವಾರ
ಕ್ಕೂಡಿಯಿರಂದು ಕುಳಿರ್ರ್ನ್ದೇಲೋರೆಂಬಾವಾಯ್
ಭಾವಾನುವಾದ – 27
ಇರಲಿ ನಿನ್ನೊಲವಿನಾಸರೆ ನಮಗೆ ನೀನನಾಥ ಬಂಧು ಧರಣೀಧರನೆ
ಗೋವಿಂದಾ
ನೀನೊಲಿದ ನಂತರವೇ ಧರಿಸುವೆವು ನಾವ್ ಸಕಲಾಭರಣದುಡಿಗೆ
ತೊಡುಗೆಗಳನು
ಸಂತಸದಿ ಭುಜಿಸುವೆವು ನೀನಿತ್ತ ಪಾಲ್ಬೆಣ್ಣೆ ಮೊಸರು ಹಾಲೋಗರವ
ಯದುಶೈಲಪತೇ
ಮಾರ್ಗಶಿರ ನೋಂಪಿಯನಾಚರಿಸಿ ಬಂದಿಹರೆಲ್ಲ ಆಳ್ವಾರರುಗಳು
ಪಾಡಿಹರು ನಾಲಾಯಿರ ಪ್ರಬಂಧ ಮಾಲೆಗಳನತಿಶಯದಿ ಭಕುತಿಯಲಿ ಸ್ವೀಕರಿಸು ಪಾಲೈಣ್ಣೆ ಮೇಣ್ ಮೊಸರು ಹಾಲೋಗರವ ಪ್ರೇಮದಲಿ
ವಿದುರನಾ ಕುಲದೈವ ಹೇಮಪುರಿ ನಿಲಯ ಕೊಳಲ ಗೋಪಾಲ ಫಲಿಸಲಿಂತೆಲ್ಲರನುಪಮ ನೋಂಪಿ ತುಂಬುತೆಲ್ಲಡೆ ಮಂಗಳದ ಮುಂಬೆಳಕು
ಭಾವಾರ್ಥ – 27
ಹೇ ಜಗನ್ನಾಥ ನಿನ್ನನ್ನೇ ಆಶ್ರಯಿಸಿ ಬಂದಿರುವ ದೀನಾರ್ಥಿಗಳು ನಾವು, ನೀನು ದೀನಜನಬಂಧು ಎಂಬ ಹೆಸರನ್ನು ಪಡೆದಿರುವವನು. ಸನಾತನ, ಸಕಲಾಗಮಸಾರ, ಹತ್ತಾರು ಅವತಾರಗಳನ್ನು ಭಕ್ತರಕ್ಷಣೆಗಾಗಿ, ಧರ್ಮಸ್ಥಾಪನೆಗಾಗಿ ಎತ್ತಿ ಬಂದವನು.
ನೋಡು, ಎಲ್ಲ ಆಳ್ವಾರರುಗಳೂ ದ್ವಾದಶ ತಿರುನಾಮ ಶೋಭಿತರಾಗಿ ನಾಲ್ಕುಸಾವಿರ ಪ್ರಬಂಧಗಳಿಂದ ನಿನ್ನನ್ನು ಸ್ತುತಿಸುತ್ತಾ ನಲಿಯುತ್ತಿದ್ದಾರೆ. ಅವರು ಧರಿಸಿರುವ ತಿರುನಾಮಗಳಿಂದ ಮೂಡಿ ಬರುತ್ತಿರುವ ಸುವಾಸನೆಯು ಮನಸ್ಸಿಗೆ ಆಹ್ಲಾದವನ್ನುಂಟುಮಾಡುತ್ತಿದೆ. ಇವರುಗಳ ಆನಂದಕ್ಕೆ ಎಣೆಯೇ ಇಲ್ಲವೇನೋ?
ಮಾಧವ ನಿನಗಾಗಿ ಹಾಲು ಬೆಣ್ಣೆ, ಮೊಸರು ತುಪ್ಪ ಹಾಲೋಗರ ಸಹಿತ ತಂದಿದ್ದೇವೆ. ಎಲ್ಲವನ್ನೂ ಸ್ವೀಕರಿಸು. ಉದ್ದವನು ಸದಾಕಾಲ ನಿನಗಾಗಿ ತಹತಹಿಸುವಂತೆ ಇಂದು ನಾವೂ ಸಹ ನಿನಗಾಗಿ ತಹತಹಿಸುತ್ತಿದ್ದೇವೆ ನಿನ್ನ ಒಡನಾಟಕ್ಕಾಗಿ.
ನೀನು ನಮಗೊಲಿದು ದರ್ಶನವಿತ್ತ ನಂತರವೇ ನಾವು ಸಕಲಾಭರಣಭೂಷಿತರಾಗಿ ಉಡುಗೆತೊಡುಗೆಗಳಿಂದಲಂಕೃತರಾಗಿ ನಲಿಯುವೆವು. ನೀನೀವ ಪಾಣೆ ಮೊಸರು ಹಾಲೋಗರ ಮಧುವನ್ನು ಸೇವಿಸುವೆವು. ಈ ಸುದಿನಕ್ಕಾಗಿಯೇ ನಾವು ಈ ಮಾರ್ಗಶಿರ ವ್ರತವನ್ನು ಆಚರಿಸಿ ಬಂದಿದ್ದೇವೆ. ಕರುಣಿಸು, ನಿನ್ನ ದರ್ಶನಭಾಗ್ಯವನ್ನು ಕರುಣಿಸು. ನಿನ್ನ ಪದತಲದಲ್ಲಿ ನಮಗೆ ಆಶ್ರಯವನ್ನು ಕರುಣಿಸು.
‘ಬಾ ಕೃಷ್ಣ, ಕಾರುಣ್ಯ ಸಿಂಧುವೆ, ಬಂದೆಮ್ಮನ್ನು ಉದ್ಧರಿಸು.
ಇದರಿಂದ ನಮ್ಮವ್ರತವೂ ಈಡೇರಿ ಸಮಸ್ತಲೋಕಕ್ಕೆ ಮಂಗಳವಾಗಲಿ.

ಕೃಪೆ: ದಾಸಗೋಪಾಲ ಕಾವ್ಯನಾಮದ ಅರ್ಚಕ ವೇಣುಗೋಪಾಲ್ ಬಿ. ಎಸ್ ಅವರ ಶ್ರೀಗೋದಾದೇವಿ ಅನುಗ್ರಹಿಸಿದ ತಿರುಪ್ಪಾವೈ ಗೀತಮಾಲೆಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿದಾನಂದಮೂರ್ತಿ ಸಂಸ್ಮರಣೆ

Wed Mar 9 , 2022
  ನಮ್ಮ ಚಿದಾನಂದಮೂರ್ತಿಗಳು ಸಂಸ್ಮರಣಾ ದಿನವಿದು. ಎಂಬತ್ತರ ದಶಕದಲ್ಲಿ ಅಲ್ಲಿ ಇಲ್ಲಿ ಓಡಾಡಿದರೆ, ಕನ್ನಡ, ಸಂಸ್ಕೃತಿ ಮತ್ತು ಚಳುವಳಿ ಅಂತ ಹೋದರೆ, ಏನೋ ಕೋಡಿರುತ್ತೆ ಅಂತ ಭ್ರಮಿಸಿದ್ದೆ. ಮಾತಾಡುವುದು ಕನ್ನಡ ಅನ್ನೋದು ಬಿಟ್ಟು ಏನೂ ಗೊತ್ತಿಲ್ಲದ ಮಂಕುಬಡಿದಿದ್ದ ಅಪ್ರಾಪ್ತ ತಾರುಣ್ಯ ನನ್ನದು. ಒಂದಷ್ಟು ಗೆಳೆಯರು ನಡೀ ಅಂದರೆ ಅವರ ಹಿಂದೆ ಹೊರಟುಬಿಡುತ್ತಿದ್ದೆ. ಮೊದಲ ಸಲ ಹೋದಾಗ ಸೆಂಟ್ರಲ್ ಕಾಲೇಜು ಬಳಿ ನಿಂತಿದ್ದ ಮೂರುನಾಲ್ಕು ಜನರಲ್ಲಿ ಒಬ್ಬರ ಬಳಿ ಗೆಳೆಯ ರಾಮಚಂದ್ರ, […]

Advertisement

Wordpress Social Share Plugin powered by Ultimatelysocial