10 ಮತಗಳ ಅಂತರದಿಂದ ಸೋತ ಬಳಿಕ ಕುಸಿದು ಬಿದ್ದ ಚುನಾವಣಾ ಅಭ್ಯರ್ಥಿ

10 ಮತಗಳ ಅಂತರದಿಂದ ಸೋತ ಬಳಿಕ ಕುಸಿದು ಬಿದ್ದ ಚುನಾವಣಾ ಅಭ್ಯರ್ಥಿ

ಗುಜರಾತ್​​ನ ನರ್ಮದೆಯ ಚಿತ್ರಾಡ ಗ್ರಾಮ ಪಂಚಾಯತ್​​ನಲ್ಲಿ ಸರಪಂಚ್​ ಸ್ಥಾನಕ್ಕೆ ಸ್ಪರ್ಧಿಸಿದ್ದ ವಾಸುದೇವ್​ ವಾಸವ ಅವರ ಪತ್ನಿ ಅಶ್ಮಿತಾ ಬೆನ್​ ವಾಸವ ಅವರು ಚುನಾವಣೆಯಲ್ಲಿ ಕೇವಲ 10 ಮತಗಳಿಂದ ಸೋಲನ್ನು ಅನುಭವಿಸಿದ ಬಳಿಕ ಮತ ಎಣಿಕೆ ಕೇಂದ್ರದಲ್ಲಿಯೇ ಕುಸಿದು ಬಿದ್ದ ಘಟನೆಯು ವರದಿಯಾಗಿದೆ.

ಅಶ್ಮಿತಾ ಬೆನ್​ ವಾಸವ ಕುಸಿದು ಬೀಳುತ್ತಿದ್ದಂತೆಯೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದ್ದು ಚಿಕಿತೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಜಗಾಡಿಯಾ ತಾಲೂಕಿನ ಜರ್ಸಾದ್​ ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಗ್ರಾಮಪಂಚಾಯತ್​ ಸದಸ್ಯ ಅಭ್ಯರ್ಥಿಯು ಸೋತ ಬಳಿಕ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ . ಪರಾಭವಗೊಂಡ ಅಭ್ಯರ್ಥಿ ರಾಜೇಶ್​ ವಾಸವ ಎಂಬವರನ್ನು ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಇವರ ಸ್ಥಿತಿಯೂ ಸ್ಥಿರವಾಗಿದೆ ಎಂದು ಜಗಾಡಿಯಾ ಚುನಾವಣಾ ಆಯೋಗದ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮತ್ತೊಂದು ಘಟನೆಯಲ್ಲಿ ಜಗಾಡಿಯಾದ ಮತ ಎಣಿಕೆ ಕೇಂದ್ರದಲ್ಲಿ ಹಾವೊಂದು ನುಗ್ಗಿದ ಪರಿಣಾಮ ಕೆಲ ಕಾಲ ಗಂಭೀರ ವಾತಾವರಣ ಸೃಷ್ಟಿಯಾಗಿತ್ತು, ಇದರಿಂದ ಬೆಚ್ಚಿಬಿದ್ದ ಅಧಿಕಾರಿಗಳು ಕೂಡಲೇ ಕೊಠಡಿಯನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸುನೀಲ್​ ಶರ್ಮ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸರಿಯಾಗಿ ನಿದ್ರೆ ಬರುತ್ತಿಲ್ವಾ? ಟ್ರೈ ಮಾಡಿ...

Wed Dec 22 , 2021
‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬುದೊಂದು ಗಾದೆ’. ಆದರೆ ಈ ಪುಣ್ಯವಿರುವ ವ್ಯಕ್ತಿಗಳು ಈ ಜಗತ್ತಿನಲ್ಲಿ ನಗಣ್ಯ. ಎಲ್ಲರೂ ಒತ್ತಡದ ಜೀವನಶೈಲಿ, ಮನೆಯಲ್ಲಿ ಸಂಸಾರದ ತಾಪತ್ರಯ, ಕೆಲಸದಲ್ಲಿ ಒತ್ತಡ, ಹೀಗೆ ನಾನಾ ಸಮಸ್ಯೆಗಳಿಂದ ಸರಿಯಾಗಿ ನಿದ್ದೆ ಬರದೇ ತಮ್ಮ ಆರೋಗ್ಯವೇ ಹಾಳು ಮಾಡಿಕೊಳ್ಳುತ್ತಿದ್ದರೆ! ಒಂದು ವೇಳೆ ನಿಮಗೂ ಆಗಾಗ ನಿದ್ರಾರಾಹಿತ್ಯದ ತೊಂದರೆ ಎದುರಾಗಿದ್ದರೆ ಅಥವಾ ಮಲಗಿದಾಕ್ಷಣ ನಿದ್ದೆ ಬರುತ್ತಿಲ್ಲವಾದರೆ ಕೆಳಗೆ ವಿವರಿಸಿರುವ ಕೆಲವು ಸುಲಭ ವಿಧನಗಳಲ್ಲಿ ನಿಮಗೆ ಸೂಕ್ತವಾದುದನ್ನು ಅನುಸರಿಸಬಹುದು. […]

Advertisement

Wordpress Social Share Plugin powered by Ultimatelysocial