ಸರಿಯಾಗಿ ನಿದ್ರೆ ಬರುತ್ತಿಲ್ವಾ? ಟ್ರೈ ಮಾಡಿ…

‘ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬುದೊಂದು ಗಾದೆ’.
ಆದರೆ ಈ ಪುಣ್ಯವಿರುವ ವ್ಯಕ್ತಿಗಳು ಈ ಜಗತ್ತಿನಲ್ಲಿ ನಗಣ್ಯ.

ಎಲ್ಲರೂ ಒತ್ತಡದ ಜೀವನಶೈಲಿ, ಮನೆಯಲ್ಲಿ ಸಂಸಾರದ ತಾಪತ್ರಯ, ಕೆಲಸದಲ್ಲಿ ಒತ್ತಡ, ಹೀಗೆ ನಾನಾ ಸಮಸ್ಯೆಗಳಿಂದ ಸರಿಯಾಗಿ ನಿದ್ದೆ ಬರದೇ ತಮ್ಮ ಆರೋಗ್ಯವೇ ಹಾಳು ಮಾಡಿಕೊಳ್ಳುತ್ತಿದ್ದರೆ!
ಒಂದು ವೇಳೆ ನಿಮಗೂ ಆಗಾಗ ನಿದ್ರಾರಾಹಿತ್ಯದ ತೊಂದರೆ ಎದುರಾಗಿದ್ದರೆ ಅಥವಾ ಮಲಗಿದಾಕ್ಷಣ ನಿದ್ದೆ ಬರುತ್ತಿಲ್ಲವಾದರೆ ಕೆಳಗೆ ವಿವರಿಸಿರುವ ಕೆಲವು ಸುಲಭ ವಿಧನಗಳಲ್ಲಿ ನಿಮಗೆ ಸೂಕ್ತವಾದುದನ್ನು ಅನುಸರಿಸಬಹುದು.

ಜೇನು ಬೆರೆಸಿದ ಹಾಲು
ಹಾಲಿನಲ್ಲಿರುವ ಟ್ರಿಫ್ಟೋಫ್ಯಾನ್ ಎಂಬ ಪೋಷಕಾಂಶವನ್ನು ದೇಹ ಹೀರಿಕೊಳ್ಳುವಂತಾಗಲು ಜೇನು ನೆರವು ನೀಡುತ್ತದೆ. ತನ್ಮೂಲಕ ಮೆದುಳಿಗೆ ಮುದನೀಡುವ ರಸದೂತದ ಮಟ್ಟವನ್ನು ಹೆಚ್ಚಿಸಲು ಹಾಗೂ ಸುಖನಿದ್ದೆ ಪಡೆಯಲು ನೆರವಾಗುತ್ತದೆ.
ಬಾಳೆಹಣ್ಣು ತಿಂದು ಮಲಗಿ

ಬಾಳೆಹಣ್ಣಿನಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮೊದಲಾದ ಖನಿಜಗಳಿದ್ದು ಉತ್ತಮ ನಿದ್ದೆಗೆ ಸಹಕಾರಿಯಾಗಿವೆ. ಹಾಲು ಇಲ್ಲದಿದ್ದರೆ ಕೊಂಚ ಜೇನಿನೊಂದಿಗೂ ಸೇವಿಸಬಹುದು.
ಗಿಡ ಮೂಲಿಕೆಗಳ ಟೀ

ರಾತ್ರಿ ಮಲಗುವ ಮುನ್ನ ಹಾಲು ಬೆರೆಸಿದ ಟೀ ಕುಡಿದರೆ ನಿದ್ದೆ ಬರುವುದಿಲ್ಲ. ಬದಲಿಗೆ ನಿಮ್ಮ ಆಯ್ಕೆಯ ಗಿಡಮೂಲಿಕೆಗಳನ್ನು ಕುದಿಸಿ ತಯಾರಿಸಿದ ಟೀ ಕುಡಿಯುವ ಮೂಲಕ ದೇಹವನ್ನು ನಿರಾಳಗೊಳಿಸಿ ಸುಲಭನಿದ್ದೆ ಪಡೆಯಲು ಸಾಧ್ಯವಾಗುತ್ತದೆ.
ಪ್ರತಿ ರಾತ್ರಿ ಅರಿಶಿನ ಮಿಶ್ರಿತ ಹಾಲು ಕುಡಿಯುವ ಅಭ್ಯಾಸದಿಂದ ನಿದ್ರೆಯಲ್ಲಿ ಆಗಾಗ ಎಚ್ಚರಗೊಳ್ಳುವುದು ತಪ್ಪುತ್ತದೆ.

ರಾತ್ರಿಯ ಸಮಯದಲ್ಲಿ ಆಗಾಗ ಮೂತ್ರ ವಿಸರ್ಜನೆ ಮಾಡಲು ಬಾತ್ ರೂಮ್ ಕಡೆಗೆ ಮುಖ ಮಾಡುವುದರಿಂದ ನಿದ್ರೆಗೆ ಸಾಕಷ್ಟು ಭಂಗವಾಗುತ್ತದೆ. ಈ ಅಭ್ಯಾಸವನ್ನು ಹಾಲಿಗೆ ಅರಿಶಿನ ಮಿಶ್ರಣ ಮಾಡಿ ಕುಡಿಯುವುದರಿಂದ ತಪ್ಪಿಸಬಹುದು.
ಧ್ಯಾನ

ಧ್ಯಾನದಿಂದ ನಿದ್ರಾವಧಿ ಹೆಚ್ಚಾಗುವುದರ ಜೊತೆಗೆ ನಿದ್ರೆಯ ಗುಣಮಟ್ಟ ಕೂಡ ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಆಗಾಗ ಎಚ್ಚರಗೊಳ್ಳುವುದು ತಪ್ಪುತ್ತದೆ. ಅದು ಅಲ್ಲದೆ ಧ್ಯಾನ ಮಾಡುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಎಂದಿಗೂ ಉಂಟಾಗುವುದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊಟ್ಟೆ, ಬಾಳೆ ಹಣ್ಣಿನಲ್ಲಿ 'ಶಾಲಾ ಮಕ್ಕಳಿಗೆ' ಯಾವುದು ಇಷ್ಟ ಗೊತ್ತಾ?

Wed Dec 22 , 2021
ಕೊಪ್ಪಳ: ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ಸಂಬಂಧಪಟ್ಟಂತೆ ಕೆಲವು ವಿರೋಧ ವ್ಯಕ್ತಪಡಿಸುತ್ತಿದ್ದು, ಇನ್ನೂ ಕೆಲವು ಮಂದಿ ಪರವಾಗಿ ಮಾತನಾಡುತ್ತಿದ್ದಾರೆ. ಇನ್ನೂ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ಹಲವು ಮಂದಿ ಸ್ವಾಮೀಜಿಗಳು ಸರ್ಕಾರದ ವಿರುದ್ದ ಕಿಡಿಕಾರುತ್ತಿದ್ದು, ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲದರ ನಡುವೆ ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಅವರ ದೈಹಿಕ ಮಾನಸಿಕ ಆರೋಗ್ಯಕ್ಕೆ ಮೊಟ್ಟೆ ಅವಕಶ್ಯಕವಾಗಿದ್ದು, ಮೊಟ್ಟೆ ತಿನ್ನುವ ಮಕ್ಕಳು, ಬೇಡವಾದವರು ಬಾಳೆ ಹಣ್ಣು ತಿನ್ನಲ್ಲಿ, ಮಕ್ಕಳ ಆಹಾರದ […]

Advertisement

Wordpress Social Share Plugin powered by Ultimatelysocial