ಮೊಟ್ಟೆ, ಬಾಳೆ ಹಣ್ಣಿನಲ್ಲಿ ‘ಶಾಲಾ ಮಕ್ಕಳಿಗೆ’ ಯಾವುದು ಇಷ್ಟ ಗೊತ್ತಾ?

ಮೊಟ್ಟೆ, ಬಾಳೆ ಹಣ್ಣಿನಲ್ಲಿ 'ಶಾಲಾ ಮಕ್ಕಳಿಗೆ' ಯಾವುದು ಇಷ್ಟ ಗೊತ್ತಾ? ಸರ್ವೆಯಲ್ಲಿ ತಿಳಿದು ಬಂತು ಅಚ್ಚರಿ ಫಲಿತಾಂಶ

ಕೊಪ್ಪಳ: ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ಸಂಬಂಧಪಟ್ಟಂತೆ ಕೆಲವು ವಿರೋಧ ವ್ಯಕ್ತಪಡಿಸುತ್ತಿದ್ದು, ಇನ್ನೂ ಕೆಲವು ಮಂದಿ ಪರವಾಗಿ ಮಾತನಾಡುತ್ತಿದ್ದಾರೆ.
ಇನ್ನೂ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ಹಲವು ಮಂದಿ ಸ್ವಾಮೀಜಿಗಳು ಸರ್ಕಾರದ ವಿರುದ್ದ ಕಿಡಿಕಾರುತ್ತಿದ್ದು, ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇವೆಲ್ಲದರ ನಡುವೆ ಮಕ್ಕಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಅವರ ದೈಹಿಕ ಮಾನಸಿಕ ಆರೋಗ್ಯಕ್ಕೆ ಮೊಟ್ಟೆ ಅವಕಶ್ಯಕವಾಗಿದ್ದು, ಮೊಟ್ಟೆ ತಿನ್ನುವ ಮಕ್ಕಳು, ಬೇಡವಾದವರು ಬಾಳೆ ಹಣ್ಣು ತಿನ್ನಲ್ಲಿ, ಮಕ್ಕಳ ಆಹಾರದ ಹಕ್ಕನ್ನು ಕಸಿದುಕೊಳ್ಳುವ ಅವಶ್ಯಕತೆ ಇಲ್ಲ ಅಂಥ ಹಲವು ಮಂದಿ ಮಕ್ಕಳಿಗೆ ಮೊಟ್ಟೆ ನೀಡುವುದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಕೊಪ್ಪಳ ಜಿಲ್ಲೆಯಲ್ಲಿ ದಾಸೋಹದ ಅಧಿಕಾರಿಗಳು ನಡೆಸಿದ ಸರ್ವೆಯಲ್ಲಿ ಶೇ 93 ಮಂದಿ ಮಕ್ಕಳು ಮೊಟ್ಟೆ ತಿನ್ನುವುದಕ್ಕೆ ಒಲವು ವ್ಯಕ್ತಪಡಿಸಿದ್ದು, ಇದೇ ವೇಳೇ ಕೇವಲ ಶೇ 6.2 ಮಂದಿ ಮಕ್ಕಳು ಬಾಳೆ ಹಣ್ಣು ತಿನ್ನುವುದಕ್ಕೆ ಒಲವು ವ್ಯಕ್ತಪಡಿಸಿದ್ದಾರಂತೆ. ಮಕ್ಕಳಿಗೆ ಮೊಟ್ಟೆ ನೀಡದಂತೆ ನಡೆದ ಪ್ರತಿಭಟನೆ ಹಿನ್ನಲೆಯಲ್ಲಿ ಅಧಿಕಾರಿಗಳು ಈ ಸರ್ವೆ ನಡೆಸಿದ್ದು, ಈಗ ಮೊಟ್ಟೆಯನ್ನು ಮಕ್ಕಳಿಗೆ ನೀಡದಂತೆ ಪ್ರತಿಭಟನೆ ನಡೆಸಿದ್ದವರು, ಏನು ಹೇಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ ಹಾಲಿಗೆ ಶುಂಠಿ ಬೆರೆಸಿ ಕುಡಿದರೆ ಸಿಗುತ್ತೆ ಇಷ್ಟೆಲ್ಲಾ ಲಾಭ

Wed Dec 22 , 2021
ಚಳಿಗಾಲದಲ್ಲಿ ನಾವು ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಈ ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಇದರಿಂದ ಶೀತ, ಕಫ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ನೀವು ಚಳಿಗಾಲದಲ್ಲಿ ಆರೋಗ್ಯವಾಗಿರಲು ಶುಂಠಿ ಹಾಲು ತಯಾರಿಸಿ ಕುಡಿಯಿರಿ. ಇದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಶುಂಠಿಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಆಹಾರದಲ್ಲಿ, ಚಹಾ, ಹಾಲಿನಲ್ಲಿ ಮಿಕ್ಸ್ ಮಾಡಿ ಸೇವಿಸಬಹುದು. ಆದರೆ ಶುಂಠಿಯನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿದರೆ ತುಂಬಾ ಒಳ್ಳೆಯದು. […]

Advertisement

Wordpress Social Share Plugin powered by Ultimatelysocial