ಚಳಿಗಾಲದಲ್ಲಿ ಹಾಲಿಗೆ ಶುಂಠಿ ಬೆರೆಸಿ ಕುಡಿದರೆ ಸಿಗುತ್ತೆ ಇಷ್ಟೆಲ್ಲಾ ಲಾಭ

ಚಳಿಗಾಲದಲ್ಲಿ ಹಾಲಿಗೆ ಶುಂಠಿ ಬೆರೆಸಿ ಕುಡಿದರೆ ಸಿಗುತ್ತೆ ಇಷ್ಟೆಲ್ಲಾ ಲಾಭ

ಚಳಿಗಾಲದಲ್ಲಿ ನಾವು ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತೇವೆ. ಈ ಸಮಯದಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಇದರಿಂದ ಶೀತ, ಕಫ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ನೀವು ಚಳಿಗಾಲದಲ್ಲಿ ಆರೋಗ್ಯವಾಗಿರಲು ಶುಂಠಿ ಹಾಲು ತಯಾರಿಸಿ ಕುಡಿಯಿರಿ.

ಇದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ.

ಶುಂಠಿಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಆಹಾರದಲ್ಲಿ, ಚಹಾ, ಹಾಲಿನಲ್ಲಿ ಮಿಕ್ಸ್ ಮಾಡಿ ಸೇವಿಸಬಹುದು. ಆದರೆ ಶುಂಠಿಯನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿದರೆ ತುಂಬಾ ಒಳ್ಳೆಯದು. ಇದರಿಂದ ದೇಹಕ್ಕೆ ಅನೇಕ ಪ್ರಯೋಜನಗಳು ಸಿಗುತ್ತದೆ. ಶುಂಠಿ ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಹಾಗಾಗಿ ಇದನ್ನು ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದು.

ಶುಂಠಿಯಲ್ಲಿ ಆಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಇದು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿಮ್ಮ ಹೊಟ್ಟೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ ಶುಂಠಿ ಹಾಲನ್ನು ಕುಡಿಯಿರಿ. ಹಾಗೇ ಮಲಬದ್ಧತೆ, ಹೊಟ್ಟೆ ನೋವು , ಆಯಸಿಡಿಟಿ ಮುಂತಾದ ಹೊಟ್ಟೆಯ ಸಮಸ್ಯೆಗಳಿದ್ದರೆ ಶುಂಠಿ ಹಾಲು ಅದನ್ನು ನಿವಾರಿಸುತ್ತದೆ. ಯಾಕೆಂದರೆ ಶುಂಠಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಹಾಗೇ ಶುಂಠಿ ಹಾಲು ತಲೆನೋವನ್ನು ಕೂಡ ನಿವಾರಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾವಣಗೆರೆ: ಟ್ರಾನ್ಸ್​ಫಾರ್ಮರ್​ಗೆ ಡಿಕ್ಕಿಯಾಗಿ ಅಡಕೆ ತೋಟಕ್ಕೆ ಬಿದ್ದ ಬಸ್

Wed Dec 22 , 2021
ಖಾಸಗಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ 20 ಜನರಿಗೆ ಗಾಯ ಆಗಿದ್ದು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಾವಣಗೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.ದಾವಣಗೆರೆ: ಟ್ರಾನ್ಸ್​ಫಾರ್ಮರ್​ಗೆ ಡಿಕ್ಕಿಯಾಗಿ ಅಡಕೆ ತೋಟಕ್ಕೆ ಬಸ್​ ಬಿದ್ದ ದುರ್ಘಟನೆ ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದ ಬಳಿ ನಡೆದಿದೆ. ಎದುರಿಗೆ ಬಂದ ಬೈಕ್​ಗೆ ದಾರಿ ಬಿಡಲು ಹೋಗಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ವಿದ್ಯುತ್ ಪೂರೈಕೆ ಇಲ್ಲದ ಕಾರಣ ಭಾರಿ ದುರಂತ ತಪ್ಪಿದೆ. […]

Advertisement

Wordpress Social Share Plugin powered by Ultimatelysocial