“ಅಬ್ಬಬ್ಬ” ಹಾಸ್ಯಪ್ರಿಯರಿಗೆ ಭರ್ಜರಿ ರಸದೌತಣ. ಕೆ.ಎಂ.ಚೈತನ್ಯ ನಿರ್ದೇಶನದ ಈ ಚಿತ್ರ ಜುಲೈ ಒಂದರಂದು ತೆರೆಗೆ.

“ಆ ದಿನಗಳು” ಚಿತ್ರದ ಮೂಲಕ ಜನಪ್ರಿಯ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಕೆ.ಎಂ.ಚೈತನ್ಯ ನಿರ್ದೇಶನದ ಸಂಪೂರ್ಣ ಹಾಸ್ಯಮಯ “ಅಬ್ಬಬ್ಬ” ಚಿತ್ರ ಇದೇ ಜುಲೈ 1 ರಂದು ಬಿಡುಗಡೆಯಾಗಲಿದೆ.

ಬೆಂಗಳೂರಿನಲ್ಲಿ ಮೀರಾಮಾರ್ ಎಂಬ ಜಾಹೀರಾತು ನಿರ್ಮಾಣ ಸಂಸ್ಥೆ ನಡೆಸುತ್ತಿರುವ ಆನ್ ಆಗಸ್ಟೇನ್ ಹಾಗೂ ವಿವೇಕ್ ಥಾಮಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.‌ ಆನ್ ಆಗಸ್ಟೇನ್ ಸುಪ್ರಸಿದ್ದ ಮಲಯಾಳಂ ನಟಿ ಕೂಡ. ಸಾಕಷ್ಟು ಮಲೆಯಾಳಂ ಚಿತ್ರಗಳಲ್ಲಿ ಇವರು ನಟಿಸಿದ್ದಾರೆ. ಇವರಿಬ್ಬರ ನಿರ್ಮಾಣದಲ್ಲಿ ಮೂಡಿಬಂದಿರುವ ಮೊದಲ ಚಿತ್ರ “ಅಬ್ಬಬ್ಬ”.

“ಫ್ಯಾಮಿಲಿ ಪ್ಯಾಕ್” ಜೋಡಿ ಲಿಖಿತ್ ಶೆಟ್ಟಿ ಹಾಗೂ ಅಮೃತ ಅಯ್ಯಂಗಾರ್ ಈ ಚಿತ್ರದಲ್ಲೂ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ಅಜಯ್ ರಾಜ್, ತಾಂಡವ್ ರಾಮ್, ಧನರಾಜ್ ಆಚಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬೆಂಗಳೂರು ಹಾಗೂ ತುಮಕೂರಿನಲ್ಲಿ ಚಿತ್ರೀಕರಣ ನಡೆದಿದ್ದು, ಇದೇ ಆರರಂದು ಟ್ರೇಲರ್ ಬಿಡುಗಡೆಯಾಗಲಿದೆ. ಜುಲೈ ಒಂದರಂದು ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ತಿಳಿಸಿದ್ದಾರೆ.

ಮನೋಹರ್ ಜೋಶಿ ಅವರ ಮನಮೋಹಕ ಛಾಯಾಗ್ರಹಣ
ವಿರುವ ಈ ಚಿತ್ರಕ್ಕೆ ದೀಪಕ್ ಅಲೆಕ್ಸಾಂಡರ್ ಅವರ ಸುಮಧುರ ಸಂಗೀತವಿದೆ. ಹರಿದಾಸ್ ಕೆ.ಜಿ.ಎಫ್ ಈ ಚಿತ್ರದ ಸಂಕಲನಕಾರರು. ಕಲಾ ನಿರ್ದೇಶಕರು ವಿಶ್ವಾಸ್ ಕಷ್ಯಪ್.

ಚಿತ್ರದಲ್ಲಿ ನಾಲ್ಕು ಹಾಡುಗಳಿದೆ. ಈಗಾಗಲೇ ಅನೇಕ ಜಾಹೀರಾತುಗಳಿಗೆ ಸಂಗೀತ ಸಂಯೋಜಿಸಿರುವ ದೀಪಕ್ ಅಲೆಕ್ಸಾಂಡರ್ ಅವರಿಗೆ ಇದು ಸಂಗೀತ ನಿರ್ದೇಶಕರಾಗಿ ಚೊಚ್ಚಲ ಚಿತ್ರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್‌ ಪ್ರಕರಣ ಹೆಚ್ಚಳ, ಮತ್ತೆ ಲಾಕ್‌ಡೌನ್‌ ಜಾರಿ : ಸುಳಿವು ಕೊಟ್ಟ ಸಚಿವರು

Thu Jun 2 , 2022
  ಮುಂಬೈ : ಕೋವಿಡ್ -19 ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ ಏರಿಕೆಯಾಗುತ್ತಿದೆ. ಅದ್ರಲ್ಲೂ ರಾಜ್ಯದಲ್ಲಿ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ(Maharashtra ) ಮತ್ತೆ ಲಾಕ್‌ಡೌನ್‌  ಭೀತಿ ಶುರುವಾಗಿದೆ. ಜೊತೆಗೆ ಸಚಿವರೋರ್ವರು ಲಾಕ್‌ಡೌನ್‌ ಜಾರಿಯ ಕುರಿತು ಸುಳಿವು ಕೊಟ್ಟಿದ್ದಾರೆ. ಕೋವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಮೂರು ಅಲೆಗಳಿಂದಲೂ ಮಹಾರಾಷ್ಟ್ರ ತತ್ತರಿಸಿ ಹೋಗಿತ್ತು. ಆದರೆ ಕಳೆದ ಕೆಲ ತಿಂಗಳಿನಿಂದಲೂ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. […]

Advertisement

Wordpress Social Share Plugin powered by Ultimatelysocial