ಭದ್ರಾವತಿಯಲ್ಲಿ ಒಂದೇ ಕುಟುಂಬದ 9 ಜನ ಘರ್ ವಾಪಸಿ: ಕ್ರಿಶ್ಚಿಯನ್ ತೊರೆದು ಮರಳಿ ಹಿಂದು ಧರ್ಮ ಸೇರ್ಪಡೆ

ಭದ್ರಾವತಿಯಲ್ಲಿ ಒಂದೇ ಕುಟುಂಬದ 9 ಜನ ಘರ್ ವಾಪಸಿ: ಕ್ರಿಶ್ಚಿಯನ್ ತೊರೆದು ಮರಳಿ ಹಿಂದು ಧರ್ಮ ಸೇರ್ಪಡೆ

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಒಂದೇ ಕುಟುಂಬದ ಒಂಭತ್ತು ಜನರು ಕ್ರಿಶ್ಚಿಯನ್ ಧರ್ಮವನ್ನು ತೊರೆದು ತಮ್ಮ ಮೂಲ‌ ಹಿಂದು ಧರ್ಮಕ್ಕೆ ಮರಳಿದ್ದಾರೆ.

ಭದ್ರಾವತಿ ತಾಲೂಕಿನ ಅಂತರಗಂಗೆ ಗ್ರಾಮದ ನಿವಾಸಿ ಜಯಶೀಲನ್‌ ಕುಟುಂಬದ 9 ಸದಸ್ಯರು ಹಿಂದು ಧರ್ಮಕ್ಕೆ ಮರಳಿದ್ದಾರೆ.

ವಿಶ್ವ ಹಿಂದೂ ಪರಿಷತ್‌, ಭಜರಂಗದಳ ನೇತೃತ್ವದಲ್ಲಿ ಜನ್ನಾಪುರದ ಶ್ರೀರಾಮ ಭಜನಾ ಮಂದಿರದಲ್ಲಿ ಅರ್ಚಕ ಕೃಷ್ಣಮೂರ್ತಿ ಸೋಮಯಾಜಿ ಹಾಗೂ ಅರಕೆರೆ ವಿರಕ್ತ ಮಠದ ಕರಿಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಹಿಂದು ಧರ್ಮಕ್ಕೆ ಮರಳಿ ಸೇರ್ಪಪಡೆಗೊಂಡರು.

ಮೂಲತಃ ಹಿಂದೂ ಧರ್ಮದವರಾದ ಜಯಶೀಲನ್‌ ಅವರು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿದ್ದರು. ಇದೀಗ ಸ್ವಪ್ರೇರಣೆಯಿಂದ ಇಡೀ ಕುಟುಂಬ ಮಾತೃಧರ್ಮಕ್ಕೆ ಮರಳಿದೆ. ಹಿಂದೂ ಧರ್ಮದ ಪ್ರಮುಖರು ಹಿಂದು ಧರ್ಮಕ್ಕೆ ಮರಳಿದ ಕುಟುಂಬ ಸದಸ್ಯರನ್ನು ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಾಯಕತ್ವ ಬದಲಾವಣೆ ಗುಸುಗುಸು: ಬಿರುಕು- ಭಿನ್ನಮತಕ್ಕೆ ಬ್ರೇಕ್ ಹಾಕಲು ನಡ್ಡಾ ಎಂಟ್ರಿ; ಪಕ್ಷ ತೊರೆಯುುವವರಿಗೆ ತಕ್ಕ ಶಾಸ್ತಿ!

Mon Dec 27 , 2021
  ಬೆಂಗಳೂರು: ಬುಧವಾರ ಹುಬ್ಬಳ್ಳಿಯಲ್ಲಿ ನಡೆಯುವ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭಾಗವಹಿಸಲಿದ್ದಾರೆ. ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ಮೂಲಕ ರಾಜ್ಯದಲ್ಲಿ ಸದ್ಯ ಚರ್ಚೆಯಾಗುತ್ತಿರುವ ನಾಯಕತ್ವ ಬದಲಾವಣೆ ವಿಷಯಕ್ಕೆ ಸಬಂಧಿಸಿದಂತೆ ಸ್ಪಷ್ಟ ಸಂದೇಶ ನೀಡಲಿದ್ದಾರೆ. ಡಿಸೆಂಬರ್ 28 ಮತ್ತು 29 ರಂದು ನಡೆಯುವ ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತ್ರ ಭಾಗವಹಿಸುವುದಾಗಿ ತಿಳಿದು ಬಂದಿತ್ತು. ಆದರೆ ನಾಯಕತ್ವ ಬದಲಾವಣೆ ಗುಸುಗುಸು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ […]

Advertisement

Wordpress Social Share Plugin powered by Ultimatelysocial