ರಾಜ್ ‍ಕಪೂರ್ ಬಾಲಿವುಡ್ ಜಗತ್ತಿನ ಅಪ್ರತಿಮ ಪ್ರತಿಭಾವಂತ ಕನಸುಗಾರ.

ರಾಜ್ ಕಪೂರ್ 1924ರ ಡಿಸೆಂಬರ್ 14ರಂದು ಜನಿಸಿದರು. ಈತ ತನ್ನ ಬಾಲ್ಯದ ದಿನಗಳಲ್ಲಿ ತಂದೆ ಪೃಥ್ವಿರಾಜ್ ಕಪೂರ್‌ಗೆ “ನಿನ್ನನ್ನು, ನನ್ನ ತಂದೆ ಎಂದು ಈ ಜಗತ್ತು ಗುರುತಿಸುತ್ತದೆಯೇ ವಿನಃ ನನ್ನನ್ನು ಈ ಜಗತ್ತು ನಿನ್ನ ಮಗ ಎಂದು ಗುರುತಿಸುವುದಿಲ್ಲ” ಎಂದು ಹೇಳುತ್ತಿದ್ದರಂತೆ.
ರಾಜ್ ಕಪೂರ್ ಪೃಥ್ವಿ ಥಿಯೇಟರಿನಲ್ಲಿ ಮೊದಲು ಬಾಲ ಕಲಾವಿದನಾಗಿ (ದಿವಾರ್) ನಂತರ ಯುವ ಕಲಾವಿದನಾಗಿ (ಪಠಾಣ್) ಚಿತ್ರದಲ್ಲಿ ನಟಿಸುತ್ತಿದ್ದ ಸಮಯದಲ್ಲಿ ವಸ್ತ್ರ ವಿನ್ಯಾಸದಿಂದ ಹಿಡಿದು ಸಿನಿಮಾ ಸೆಟ್ ಮತ್ತು ಸಂಗೀತ ಸಂಯೋಜನೆವರೆಗೆ ಆಸಕ್ತಿಯಿಂದ ದುಡಿಯುತ್ತಿದ್ದ. ಪೃಥ್ವಿ ರಾಜ್ ಕಪೂರ್, ದುರ್ಗಾ ಖೋಟೆ ಮತ್ತು ಕೆ. ಸಿ. ದೇವ್ ತಾರಾಗಣದ ಇಂಕ್ವಿಲಾಬ್ ಚಿತ್ರದಲ್ಲಿ ಅಭಿನಯಿಸಿದಾಗ ಆತನಿಗಿನ್ನೂ 11 ವರ್ಷ.
ಅಭಿನಯಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸದ ರಾಜ್ ಕಪೂರ್ ನಿರ್ದೇಶಕ ಕೇದಾರ್ ಶರ್ಮಾ ಅವರ ಅಡಿಯಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಅದೇ ಕೇದಾರ್ ಶರ್ಮಾ ನಿರ್ದೇಶನದ ‘ನೀಲ್ ಕಮಲ್’ ಚಿತ್ರದಲ್ಲಿ ನಾಯಕ ನಟನಾಗಿ, ಅಂದಿನ ಬಾಲಿವುಡ್ ಜಗತ್ತಿನ ಸ್ನಿಗ್ಧ ಸುಂದರಿ ಮಧುಬಾಲಾಳೊಂದಿಗೆ ಅಭಿನಯಿಸುವ ಅವಕಾಶ ಒದಗಿಬಂತು. ಇದೇ ಚಿತ್ರದಲ್ಲಿ ಬೇಗಂ ಫರಾ ಕೂಡ ಅಭಿನಯಿಸಿದ್ದರು.
ರಾಜ್ ಕಪೂರ್ ಕೇವಲ ನಟ ನಿರ್ದೇಶಕ ಮಾತ್ರವಲ್ಲ, ಗಳಿಸಿದ ಹಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಚತುರ ವ್ಯಾಪಾರಿ ಮನೋಭಾವದ ವ್ಯಕ್ತಿ ಕೂಡಾ ಆಗಿದ್ದರು. ಕೇದಾರ್ ಶರ್ಮಾರಲ್ಲಿ ಸಹಾಯಕ ನಿರ್ದೇಶಕನಾಗಿದ್ದುಕೊಂಡೇ ಗೌರಿ, ವಾಲ್ಮೀಕಿ ಚಿತ್ರಗಳಲ್ಲಿ ನಟಿಸಿದ್ದರು. ವಿ. ಶಾಂತಾರಾಮ್ ಅವರ ಚಿತ್ರವೊಂದರಲ್ಲಿ ಅಭಿನಯಿಸಿದ್ದಕ್ಕೆ ಕೈತುಂಬ ಹಣವನ್ನು ಪಡೆದರು. ಅದೇ ಹಣದಿಂದ ಚೆಂಬೂರ್‌ನಲ್ಲಿ ಜಾಗ ಖರೀದಿಸಿದರು. ಮುಂದೆ ಅದೇ ಜಾಗದಲ್ಲಿ ಆರ್.ಕೆ. ಸ್ಟುಡಿಯೊ ತಲೆ ಎತ್ತಿ ನಿಂತಿತು.
ಇಂದಿಗೂ ರಾಜ್ ಕಪೂರ್ ಚಿತ್ರಗಳ ಹಾಡುಗಳು ಮನಸ್ಸಿನ ಮೂಲೆಯಲ್ಲಿ ಒತ್ತಾಗಿ ಕುಳಿತಿವೆ. ರಾಜ್ ಹಾಡುಗಳಲ್ಲಿ ಜೀವಸೆಲೆ ಇದೆ. ಅಂದಿನ ಕಲ್ಕತ್ತಾದಲ್ಲಿ ತಮ್ಮ ತಂದೆಯವರ ನ್ಯೂ ಥಿಯೇಟರ್‌ನಲ್ಲಿ ಇದ್ದ ಸಮಯದಲ್ಲಿ ಈತನ ಸಂಗೀತದತ್ತ ಬೆಳೆದ ಒಲವು ಯಾವ ಪರಿ ಇತ್ತು ಎಂದರೆ ಬಂಗಾಲಿ ಗಾಯಕ ಬೊರಾಲ್ ಅವರಲ್ಲಿ ಸಂಗೀತದ ಅಕ್ಷರಾಭ್ಯಾಸ ಪ್ರಾರಂಭ ಮಾಡಿದರು. ಅಂದಿನ ಸಂಗೀತ ಲೋಕದ ದಿಗ್ಗಜರಾದ ಆರ್ ಸಿ. ಬೊರಾಲ್, ಪಂಕಜ್ ಮಲ್ಲಿಕ್, ಕೆ. ಎಲ್ ಸೆಹಗಲ್ ಅವರೊಂದಿಗೆ ತಪ್ಪದೇ ಸಮಯ ಕಳೆಯುತ್ತಿದ್ದರು. ಎಸ್. ಡಿ. ಬರ್ಮನ್ ಮತ್ತು ರಾಜ್ ಕಪೂರ್ ಜೊತೆಯಾಗಿ ನಿರ್ಮಿಸಿದ ಕೆಲವು ಚಿತ್ರಗಳಲ್ಲಿ ಹಾಡುವ ಮೂಲಕ ಹಾಡುಗಾರನ ಲೋಕಕ್ಕೆ ಸೇರ್ಪಡೆಗೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಧ್ರುವ ಸರ್ಜಾ ‘ಮಾರ್ಟಿನ್‌’ ಸಿನಿಮಾದ ಒಂದು ಫೈಟ್‌ಗೆ 3 ಸಾಹಸ ನಿರ್ದೇಶಕರು

Mon Dec 26 , 2022
ಧ್ರುವ ಸರ್ಜಾ ನಾಯಕರಾಗಿರುವ ‘ಮಾರ್ಟಿನ್‌’ ಸಿನಿಮಾ  ಚಿತ್ರೀಕರಣಕ್ಕೂ ಮುನ್ನವೇ ತನ್ನ ಅದ್ಧೂರಿ ಬಜೆಟ್‌ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಇತ್ತೀಚೆಗಷ್ಟೇ ಕಂಪ್ಲೀಟ್‌ ಆಗಿದ್ದು ಒಂದೇ ಫೈಟ್‌ಗೆ ಭಾರತೀಯ ಚಿತ್ರರಂಗದ ಖ್ಯಾತ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ.ಹೌದು, ಮಾರ್ಟಿನ್‌ ಚಿತ್ರದ ಕ್ಲೈಮ್ಯಾಕ್ಸ್‌ನ ಆ್ಯಕ್ಷನ್‌ ದೃಶ್ಯಗಳಿಗೆ ರಾಮ್‌-ಲಕ್ಷ್ಮಣ್‌ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು […]

Advertisement

Wordpress Social Share Plugin powered by Ultimatelysocial