ಧ್ರುವ ಸರ್ಜಾ ‘ಮಾರ್ಟಿನ್‌’ ಸಿನಿಮಾದ ಒಂದು ಫೈಟ್‌ಗೆ 3 ಸಾಹಸ ನಿರ್ದೇಶಕರು

ಧ್ರುವ ಸರ್ಜಾ ನಾಯಕರಾಗಿರುವ ‘ಮಾರ್ಟಿನ್‌’ ಸಿನಿಮಾ  ಚಿತ್ರೀಕರಣಕ್ಕೂ ಮುನ್ನವೇ ತನ್ನ ಅದ್ಧೂರಿ ಬಜೆಟ್‌ ಮತ್ತು ಮೇಕಿಂಗ್‌ನಿಂದಾಗಿ ಸದ್ದು ಮಾಡುತ್ತಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಇತ್ತೀಚೆಗಷ್ಟೇ ಕಂಪ್ಲೀಟ್‌ ಆಗಿದ್ದು ಒಂದೇ ಫೈಟ್‌ಗೆ ಭಾರತೀಯ ಚಿತ್ರರಂಗದ ಖ್ಯಾತ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿದ್ದಾರೆ.ಹೌದು, ಮಾರ್ಟಿನ್‌ ಚಿತ್ರದ ಕ್ಲೈಮ್ಯಾಕ್ಸ್‌ನ ಆ್ಯಕ್ಷನ್‌ ದೃಶ್ಯಗಳಿಗೆ ರಾಮ್‌-ಲಕ್ಷ್ಮಣ್‌ ಮತ್ತು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಒಂದು ಸಿನಿಮಾದ ಕ್ಲೈಮ್ಯಾಕ್ಸ್‌ಗಾಗಿ ಮೂರು ಸಾಹಸ ನಿರ್ದೇಶಕರು ಕೆಲಸ ಮಾಡಿರುವುದು ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದೆ.ಈ ಬಗ್ಗೆ ಲವಲವಿಕೆ ಜತೆ ಮಾತನಾಡಿದ ನಿರ್ದೇಶಕ ಎ ಪಿ ಅರ್ಜುನ್‌ ‘ನಮ್ಮ ಸಿನಿಮಾಗೆ ಚಿತ್ರೀಕರಣ ಮಾಡಿರುವ ಕ್ಲೈಮ್ಯಾಕ್ಸ್‌ ಬಹಳ ವಿಭಿನ್ನ. ಸಿನಿಮಾವೊಂದರ ಕ್ಲೈಮ್ಯಾಕ್ಸ್‌ಗಾಗಿ 52 ದಿನಗಳ ಚಿತ್ರೀಕರಣ ಮಾಡಿರುವುದು ಬಹುಶಃ ನಾವೇ ಮೊದಲಿರಬೇಕು. ಅಷ್ಟು ದೊಡ್ಡ ಆ್ಯಕ್ಷನ್‌ ಸನ್ನಿವೇಶಗಳು ಇದರಲ್ಲಿವೆ. ಮೂರು ಮಾಸ್ಟರ್‌ಗಳು ಯಾಕೆ ಈ ಕ್ಲೈಮ್ಯಾಕ್ಸ್‌ಗೆ ಕೆಲಸ ಮಾಡಿದರು ಎಂಬುದಕ್ಕೆ ಚಿತ್ರವನ್ನು ನೋಡಬೇಕು’ಎಂದು ಹೇಳಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಬೀದರ್ ಜಿಲ್ಲೆಯ ಔರಾದ ತಾಲೂಕಿನಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಭ್ರಷ್ಟಾಚಾರ ಮುಕ್ತ ಕರ್ನಾಟಕ ಎನ್ನುವ ಘೋಷವಾಕ್ಯದೊಂದಿಗೆ..

Mon Dec 26 , 2022
ಏಳು ಕೋಟಿ ಕನ್ನಡಿಗರ ಉದ್ಧಾರಕ್ಕಾಗಿ ನೂರು ಕೋಟಿ ದೇಣಿಗೆ ಸಂಗ್ರಹ ಮಹಾಭಿಕ್ಷಾ ಯಾತ್ರೆ ಆರಂಭಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು… ಇದರ ಮುಂದಿನ ಉದ್ದೇಶ ಪ್ರಮಾಣಿಕ ರಾಜಕೀಯ ಸೈನ್ಯಕಟ್ಟುವುದು ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಗೆದ್ದು ಸ್ವಚ್ಛ ಭ್ರಷ್ಟಾಚಾರ ಮುಕ್ತ ಮತ್ತು ಜನಪರ ಆಡಳಿತ ನೀಡಿ ಕನ್ನಡ ನಾಡನ್ನು ಸಮೃದ್ಧಿ ಗೊಳಿಸುವ ನಿಟ್ಟಿನಲ್ಲಿ ನಮ್ಮ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ತಮ್ಮ ಅಭೂತಪೂರ್ವ ಬೆಂಬಲ ನೀಡಬೇಕೆಂದು ಮಹಾಭಿಕ್ಷೆ ಯಾತ್ರೆಯ ಮೂಲಕ […]

Advertisement

Wordpress Social Share Plugin powered by Ultimatelysocial