ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು, ಅಲ್ಲಿಗೆ ಅನುಕೂಲವಾಗಲೆಂದು ನದಿ ಜೋಡಣೆ ಯೋಜನೆ ಘೋಷಣೆ: ಸಿದ್ದರಾಮಯ್ಯ

 

ಬೆಂಗಳೂರು: ನದಿ ಜೋಡಣೆ ಬಗ್ಗೆ ಪೂರ್ವಭಾವಿಯಾಗಿ ಸಂಬಂಧಿಸಿದ ರಾಜ್ಯಗಳೊಂದಿಗೆ ಚರ್ಚಿಸದೇ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ನದಿಜೋಡಣೆ ಸಾಧಕ – ಬಾಧಕಗಳ ಬಗ್ಗೆ ವಿವರವಾದ ಚರ್ಚೆ ನಡೆಯಬೇಕು. ಆಯಾ ರಾಜ್ಯಗಳಿಗೆ ದೊರೆಯುವ ನೀರಿನ ಪಾಲಿನ ಬಗ್ಗೆ ಸ್ಪಷ್ಟತೆ ಇರಬೇಕು. ಮೇಲಾಗಿ ರಾಜ್ಯಗಳ ಪೂರ್ವಭಾವಿ ಒಪ್ಪಿಗೆ ಪಡೆಯಬೇಕು.‌ಇದ್ಯಾವುದು ಮಾಡದಿರುವುದು ಒಕ್ಕೂಟ ವ್ಯವಸ್ಥೆಯನ್ನು ಅಗೌರವಿಸಿದಂತೆ ಎಂದು‌ ಸಿದ್ದರಾಮಯ್ಯ ಪ್ರತಿಪಾದಿಸಿದರು.ಅರ್ಥಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನವರು. ಅಲ್ಲಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಿರಬಹುದು ಎಂದು ಆರೋಪಿಸಿದ ಅವರು ನನಗೆ ಇರುವ ಮಾಹಿತಿ ಪ್ರಕಾರ ತಮಿಳುನಾಡಿಗೆ ಕಾವೇರಿ – ಪೆನ್ನಾರ್ ನದಿಗಳ ಜೋಡಣೆಯಿಂದ ಹೆಚ್ಚು ಲಾಭ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟರು.ಈ ಯೋಜನೆ ಅನುಷ್ಠಾನವಾದರೆ ರಾಜ್ಯಗಳ ನಡುವಿನ ಜಲ ವಿವಾದ ಹೆಚ್ಚಾಗುತ್ತದೆ.‌ಹೆಚ್ಚುಕಡಿಮೆ ಪಾಲಿನ ಬಗ್ಗೆ ಅಸಮಾಧಾನ‌ ಶುರುವಾಗುತ್ತದೆ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ ಕೊಟ್ಟಿರುವುದು ಸೂಕ್ತವಲ್ಲ ಎಂದರು.ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಸಭೆ ಕರೆಯಬೇಕು. ಕರ್ನಾಟಕದಲ್ಲಿಯೇ ಸಭೆಯನ್ನ ಕರೆಯಬೇಕು, ಎಲ್ಲ ಮಾಹಿತಿಯನ್ನ ಜನರ ಮುಂದಿಡಬೇಕು. ಗೋದಾವರಿಯಿಂದ ಎಷ್ಟು,ಕಾವೇರಿಯಿಂದ ಎಷ್ಟು,, ಪೆನ್ನಾರ್ ನಿಂದ ಎಷ್ಟು ನೀರು ಲಭ್ಯವಾಗಲಿದೆ, ಯಾವ್ಯಾವ ರಾಜ್ಯಕ್ಕೆ ಎಷ್ಟು ನೀರು ಸಿಗುತ್ತದೆ. ಇದರ ಬಗ್ಗೆ ಸಂಪೂರ್ಣಮಾಹಿತಿ ಜನರಿಗೆ ತಿಳಿಸಬೇಕು. ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಏಕಮುಖವಾಗಿ ನಡೆದುಕೊಳ್ಳುವುದು ಸರಿಯಲ್ಲ. ಅದು ಸರ್ವಾಧಿಕಾರಿ ಧೋರಣೆಯಾಗಲಿದೆ. ಇದಕ್ಕೆ ನಮ್ಮ ತೀರ್ವ ವಿರೋಧವಿದೆ ಎಂದರು. ಜೋಡಣೆಯಿಂದ 347 ಟಿಎಂಸಿ ನೀರು ಸಿಗುತ್ತೆ ಎಂದಿದ್ದಾರೆ, ದಕ್ಷಿಣ ರಾಜ್ಯಗಳಿಗೆ ನೀರು ಕೊಡಬಹುದೆಂಬ ಅಂದಾಜಿದೆ. ರಾಜಸ್ತಾನ ಬಿಟ್ಟರೆ ಹೆಚ್ಚು ಒಣ ಭೂಮಿ ನಮ್ಮಲ್ಲಿದೆ. ಶೇ.70 ರಷ್ಟು ಹೆಚ್ಚು ಒಣ ಭೂಮಿ ನಮ್ಮದು. ಬೇರೆಡೆ 50% ನೀರಾವರಿ ಮಾಡಲಾಗಿದೆ. ಕರ್ನಾಟಕದಲ್ಲಿ ೩೦% ಮಾತ್ರ ನೀರಾವರಿಯಾಗಿದೆ. ಕಾವೇರಿ ನಮ್ಮ ಕೊಡಗಿನಲ್ಲಿ ಹುಟ್ಟುತ್ತದೆ, ಆದರೆ ಹೆಚ್ಚು ನೀರು ತಮಿಳುನಾಡಿಗೆ ಹೋಗುತ್ತದೆ ಎಂದರು.ನದಿ ಜೋಡಣೆ ವಿಚಾರ ಹೊಸದೇನಲ್ಲ. ಮುರಾರ್ಜಿ ದೇಸಾಯಿಯವರು ಇದನ್ನ ಚಿಂತಿಸಿದ್ದರು. ಗಂಗಾಕಾವೇರಿ ಜೋಡಣೆ ಬಗ್ಗೆ ಚರ್ಚಿಸಿದ್ದರು. ಗಂಗಾ, ಬ್ರಹ್ಮಪುತ್ರಾ, ಕಾವೇರಿ ಜೋಡಿಸಿದರೆ ಉತ್ತಮ. ಆಗ ಎಲ್ಲ ರಾಜ್ಯಗಳಿಗೆ ಅನುಕೂಲವಾಗಲಿದೆ. ದಕ್ಷಿಣ ರಾಜ್ಯಗಳ ನದಿ ಜೋಡಣೆ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.ಮೊದಲು ಉತ್ತರದ ಜೋಡಣೆ ಪ್ರಸ್ತಾಪಿಸಲಿ, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ನದಿ ಜೋಡಣೆ ಮಾಡಿ ಎಂದು ಕೇಳಿದ್ದೇವಾ? ನದಿ ಜೋಡಣೆ ಬಗ್ಗೆ ಸಂಸದರು ಮಾತನಾಡಿದ್ದಾರಾ? ಸಂಸದರು ರಾಜ್ಯದ ಹಿತದ ಪ್ರಸ್ತಾಪ ಮಾಡಿದ್ದಾರಾ?ಇವರು ಸಂಸದರಾಗಿ ಹೋಗಿರುವುದೇಕೆ? ಈ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆಯಬೇಕು. ರಾಜ್ಯ ಸರ್ಕಾರ ಕರೆದು ಚರ್ಚೆ ಮಾಡಬೇಕು. ರಾಜ್ಯಕ್ಕೆ ಲಾಭವೇ,ನಷ್ಟವೇ ಇದರ ಚರ್ಚೆಯಾಗಬೇಕು ಲಾಭ ಆದ್ರೆ ಎಷ್ಟು ನೀರು ಸಿಗಲಿದೆ ಚರ್ಚೆಯಾಗಬೇಕು. ನಷ್ಟವಾದರೆ ಅದರ ಬಗ್ಗೆಯೂ ಮಾಹಿತಿ ಸಿಗಬೇಕು. ಆ ನಂತರ ಇದರ ಬಗ್ಗೆ ನಿರ್ಧಾರವಾಗಲಿ ಚರ್ಚೆಯಾಗದೆ ಒಪ್ಪಿಗೆ ಕೊಡುವುದು ಸರಿಯಲ್ಲ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪ್ರತಿಪಕ್ಷ ಉಪನಾಯಕರಾಗಿ ಯುಟಿ‌ಖಾದರ್ ನೇಮಕದ ಬಗ್ಗೆ ಪ್ರಸ್ತಾಪಿಸಿದರು. ಖಾದರ್ ಅವರಿಗೆ ಪ್ರತಿಪಕ್ಷ ಉಪ ನಾಯಕ ಸ್ಥಾನ ಸಿಕ್ಕಿದೆ..ಬಹಳ ದಿನಗಳಿಂದ ನಾನೇ ನಿಭಾಯಿಸುತ್ತಿದ್ದೆ.ಈಗ ವಿಧಾನಸಭೆಗೆ ಉಪನಾಯಕರಾಗಿದ್ದಾರೆ. ಅವರಿಗೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆ!

Fri Feb 4 , 2022
  ಆಗಷ್ಟೇ ನಡೆಯಲು ಕಲಿಯುವ ಮಕ್ಕಳು ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆಗೆ ಒಳಗಾಗುತ್ತಾರೆ. ಮೈಗೆ ಒಗ್ಗದ ಯಾವುದೋ ಒಂದು ಅಂಶ ಜೀರ್ಣವಾಗದೆ ಸಮಸ್ಯೆ ತಂದೊಡ್ಡುತ್ತದೆ.ಹೊಟ್ಟೆ ಹಾಳಾಗುವುದರಿಂದ ಮಕ್ಕಳಿಗೆ ಕೆಲವೊಮ್ಮೆ ವಾಂತಿ, ಅತಿಸಾರ ಮತ್ತು ಜ್ವರದಂಥ ಲಕ್ಷಣಗಳು ಕಂಡು ಬಂದಾವು.ಮಗು ವಿನಾಕಾರಣ ವಿಪರೀತ ಅಳುತ್ತಿದ್ದರೆ ಆಗ ಮಗುವಿಗೆ ಸಾಕಷ್ಟು ದ್ರವಗಳನ್ನು ಸೇವಿಸಲು ಕೊಡಿ. ನಿರ್ಜಲೀಕರಣದಿಂದ ದೇಹ ಸೊರಗದಿರಲಿ.ಮಗುವಿಗೆ ಹಸಿವಾಗಿದ್ದರೆ ಅದಕ್ಕೆ ಲಘು ಆಹಾರಗಳನ್ನು ನೀಡಿ. […]

Advertisement

Wordpress Social Share Plugin powered by Ultimatelysocial