ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆ!

 

ಆಗಷ್ಟೇ ನಡೆಯಲು ಕಲಿಯುವ ಮಕ್ಕಳು ಎಲ್ಲವನ್ನೂ ಬಾಯಿಗೆ ಹಾಕಿಕೊಳ್ಳುವ ಅಭ್ಯಾಸದಿಂದ ಪದೇ ಪದೇ ಹೊಟ್ಟೆ ನೋವಿನ ಸಮಸ್ಯೆಗೆ ಒಳಗಾಗುತ್ತಾರೆ. ಮೈಗೆ ಒಗ್ಗದ ಯಾವುದೋ ಒಂದು ಅಂಶ ಜೀರ್ಣವಾಗದೆ ಸಮಸ್ಯೆ ತಂದೊಡ್ಡುತ್ತದೆ.ಹೊಟ್ಟೆ ಹಾಳಾಗುವುದರಿಂದ ಮಕ್ಕಳಿಗೆ ಕೆಲವೊಮ್ಮೆ ವಾಂತಿ, ಅತಿಸಾರ ಮತ್ತು ಜ್ವರದಂಥ ಲಕ್ಷಣಗಳು ಕಂಡು ಬಂದಾವು.ಮಗು ವಿನಾಕಾರಣ ವಿಪರೀತ ಅಳುತ್ತಿದ್ದರೆ ಆಗ ಮಗುವಿಗೆ ಸಾಕಷ್ಟು ದ್ರವಗಳನ್ನು ಸೇವಿಸಲು ಕೊಡಿ. ನಿರ್ಜಲೀಕರಣದಿಂದ ದೇಹ ಸೊರಗದಿರಲಿ.ಮಗುವಿಗೆ ಹಸಿವಾಗಿದ್ದರೆ ಅದಕ್ಕೆ ಲಘು ಆಹಾರಗಳನ್ನು ನೀಡಿ. ಒತ್ತಾಯಿಸಿ ಯಾವುದೇ ಆಹಾರ ಕೊಡದಿರಿ. ಶೌಚಾಲಯಕ್ಕೆ ಹೋಗುವಂತೆ ಪ್ರೋತ್ಸಾಹಿಸಿ. ಇದರಿಂದಲೂ ಹೊಟ್ಟೆ ನೋವು ಕಡಿಮೆಯಾಗುವುದುಂಟು.ಮಗುವಿನ ಹೊಟ್ಟೆಯನ್ನು ನಯವಾಗಿ ಮಸಾಜ್ ಮಾಡಿ. ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡಿ. ಇಷ್ಟದ ಕಾರ್ಟೂನ್ ಪ್ಲೇ ಮಾಡಿ.ತೀವ್ರವಾದ ನೋವು, ಜ್ವರ ಇದ್ದರೆ ವೈದ್ಯರನ್ನು ಸಂಪರ್ಕಿಸಿ. ರಕ್ತಪರೀಕ್ಷೆ, ಮೂತ್ರ ಪರೀಕ್ಷೆ, ಮಲಪರೀಕ್ಷೆ, ಎಕ್ಸ್ ರೇ ಅಥವಾ ಆಲ್ಟ್ರಾಸೌಂಡ್ ಮೂಲಕ ಹೊಟ್ಟೆ ನೋವಿನ ಕಾರಣ ತಿಳಿಯಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವದೆಹಲಿ: ಗುಂಡಿನ ದಾಳಿ ಹಿನ್ನೆಲೆ: ಓವೈಸಿಗೆ 'ಝಡ್‌' ಶ್ರೇಣಿಯ ಭದ್ರತೆ ಒದಗಿಸಿದ ಕೇಂದ್ರ

Fri Feb 4 , 2022
  ನವದೆಹಲಿ: ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ತಕ್ಷಣವೇ ಜಾರಿಗೆ ಬರುವಂತೆ ‘ಝಡ್‌’ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.ಈ ಕುರಿತು ಶುಕ್ರವಾರ ಟ್ವೀಟಿಸಿರುವ ಎಎನ್‌ಐ, ‘ವಿಶ್ವಾಸಾರ್ಹ ಮೂಲಗಳ ಪ್ರಕಾರ, ಭಾರತ ಸರ್ಕಾರವು ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿಯ ಭದ್ರತೆಯನ್ನು ಪರಿಶೀಲಿಸಿದೆ’ ಎಂದು ತಿಳಿಸಿದೆ.ತಕ್ಷಣವೇ ಜಾರಿಗೆ ಬರುವಂತೆ ಅವರಿಗೆ ಸಿಆರ್‌ಪಿಎಫ್‌ನ ಝಡ್‌ ಶ್ರೇಣಿಯ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಿದೆ.ಉತ್ತರ ಪ್ರದೇಶದ ಮೀರತ್‌ನಲ್ಲಿ […]

Advertisement

Wordpress Social Share Plugin powered by Ultimatelysocial