‘ಡಾರ್ಲಿಂಗ್’ ಕೃಷ್ಣ&ಮಿಲನಾ ಜೋಡಿಯ ಮತ್ತೊಂದು ಸಿನಿಮಾ

‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಜೋಡಿ ಈವರೆಗೂ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ‘ಲವ್‌ ಮಾಕ್‌ಟೇಲ್‌’ ಸಿನಿಮಾ ಈ ಇಬ್ಬರಿಗೂ ದೊಡ್ಡ ಬ್ರೇಕ್ ನೀಡಿತ್ತು. ಆನಂತರ ಈ ಜೋಡಿ ‘ಲವ್‌ ಮಾಕ್‌ಟೇಲ್‌ 2’ ಕೂಡ ಮಾಡಿದ್ದರು. ‘ಡಾರ್ಲಿಂಗ್’ ಕೃಷ್ಣ ಮತ್ತು ಮಿಲನಾ ನಾಗರಾಜ್‌ ಒಟ್ಟಿಗೆ ನಟಿಸಿರುವ ಮತ್ತೊಂದು ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಹೌದು, ‘Mr. ಬ್ಯಾಚುಲರ್’ ಹೆಸರಿನ ಹೊಸ ಸಿನಿಮಾದಲ್ಲಿ ಕೃಷ್ಣ ಮತ್ತು ಮಿಲನಾ ನಟಿಸಿದ್ದಾರೆ. ನಿಮಿಕಾ ರತ್ನಾಕರ್ ಕೂಡ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘Mr. ಬ್ಯಾಚುಲರ್’ ಸಿನಿಮಾ ಜನವರಿ 6ರಂದು ರಿಲೀಸ್ ಆಗುತ್ತಿದೆ.ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ‘ಡಾರ್ಲಿಂಗ್’ ಕೃಷ್ಣ, ‘ನಾನು ಮೊದಲೇ ಹೇಳಿದ ಹಾಗೆ, ಈ ಚಿತ್ರದ ಮೇಲೆ ನನಗೆ ವಿಶೇಷ ಪ್ರೀತಿ ಇದೆ. ಯಾಕೆಂದರೆ, ನಾನು ಈ ಚಿತ್ರ ಒಪ್ಪಿಕೊಂಡ ನಂತರ ನಿರ್ಮಾಪಕನಾಗಿ ‘ಲವ್ ಮಾಕ್ಟೇಲ್’ ಸಿನಿಮಾ ಮಾಡಿದೆ. ಈ ಚಿತ್ರದ ಸಂಭಾವನೆಯಿಂದಲೇ ನಾನು ‘ಲವ್ ಮಾಕ್ಟೇಲ್’ ಶುರು ಮಾಡಿದ್ದು. ಹಾಗಾಗಿ ನನಗೆ ಈ ಚಿತ್ರದ ಮೇಲೆ ವಿಶೇಷ ಪ್ರೀತಿ. ಇನ್ನುಈ ಚಿತ್ರದ ಬಗ್ಗೆ ‌ಹೇಳಬೇಕೆಂದರೆ ನಿರ್ದೇಶಕ ನಾಯ್ಡು ಅವರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡು ಈ ಸಿನಿಮಾ ಮಾಡಿದ್ದಾರೆ. ಅವರು ಕಥೆ ಹೇಳಲು ಬಂದಾಗಲೇ, ಕಥೆ ಕೇಳಿ ಸಾಕಷ್ಟು ಎಂಜಾಯ್ ಮಾಡಿದ್ದೆ. ನಾನು ಇಲ್ಲಿಯವರೆಗೆ ಯಾವ ಚಿತ್ರದಲ್ಲೂ ಹಾಕಿರದಷ್ಟು ಬಟ್ಟೆಗಳನ್ನು ಈ ಚಿತ್ರದಲ್ಲಿ ಹಾಕಿದ್ದೇನೆ. ಅದಕ್ಕೆ ನಿರ್ದೇಶಕರೇ ಕಾರಣ. ಅವರಿಗೆ ಸಾಕಷ್ಟು ಅಭಿರುಚಿ ಇದೆ. ಮಿಲನಾ ನಾಗರಾಜ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ನಿಮಿಕಾ ರತ್ನಾಕರ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ..’ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೀಲಿಂಗ್​ ನಿಯಂತ್ರಣಕ್ಕೆ ಸಂಚಾರ ಪೊಲೀಸರಿಂದ ಹೊಸ ಫ್ಲಾನ್..!

Thu Jan 5 , 2023
ವಿಲ್ಹಿಂಗ್ ಮಾಡಿ ಹುಚ್ಚಾಟ ಮಾಡೋರಾ ಹೆಡೆ ಮುರಿ ಕಟ್ಟಲು ಪೊಲೀಸರು ರೆಡಿ ರಸ್ತೆಯಲ್ಲಿ ವಿಲ್ಹಿಂಗ್ ಮಾಡಿ ಹುಚ್ಚಾಟ ಮಾಡೋ ಯುವಕರು ಈ ಸ್ಟೋರಿ ನೋಡಲೇಬೇಕು ವಿಲ್ಹಿಂಗ್ ಮಾಡೋದಕ್ಕೆ ಕಡಿವಾಣ ಹಾಕಲು ಸಂಚಾರ ಪೊಲೀಸರಿಂದ ಹೊಸ ಟಾಸ್ಕ್ ಫೋರ್ಸ್​ ಟೀಂ ರಚನೆ ಖುದ್ದು ಸಂಚಾರಿ ಜಂಟಿ ಪೊಲೀಸ್ ಆಯುಕ್ತರ ಟಾಸ್ಕ್ ಫೋರ್ಸ್ ಟೀಂ ರಚನೆ ನಗರದಲ್ಲಿ ದಿನೇ ದಿನೇ ವೀಲ್ಹಿಂಗ್ ಹೆಚ್ಚಾಗ್ತಾ ಇದ್ದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಇದ್ರಿಂದ ಜಂಟಿ […]

Advertisement

Wordpress Social Share Plugin powered by Ultimatelysocial