ಕಾಶ್ಮೀರಕ್ಕೆ ಮೋದಿ ಭೇಟಿ ಕೊಟ್ಟಿದ್ದಕ್ಕೆ ಪಾಕ್ ವಿರೋಧ!

ಇಸ್ಲಾಮಾಬಾದ್, ಪಾಕಿಸ್ತಾನ: “ಇದೊಂತರಾ ನದಿ ನೀರಿಗೆ  ದೊಣ್ಣೆ ನಾಯಕನ ಅಪ್ಫಣೆ ಯಾಕೆ?” ಎನ್ನುವಂತಾಯಿತು. ಕಾಶ್ಮೀರದಲ್ಲಿ  ಭಾರತ ಅಭಿವೃದ್ಧಿ ಕಾಮಗಾರಿ ನಡೆಸಿದರೆ ಪಕ್ಕದ ಪಾಕಿಸ್ತಾನಕ್ಕೆ  ಹೊಟ್ಟೆಯೊಳಗೆ ಸಂಕಟ ಆಗುತ್ತಂತೆ.
ಇಷ್ಟು ದಿನ ಗಡಿ ವಿಚಾರದಲ್ಲಿ ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನ, ಇದೀಗ ಅಭಿವೃದ್ಧಿ ಕಾಮಗಾರಿ ವಿಚಾರದಲ್ಲೂ ತನ್ನ ಬುದ್ಧಿ ತೋರಿಸಿದೆ. ಕಳೆದ ಭಾನುವಾರ ಪ್ರಧಾನಿ ನರೇಂದ್ರ ಮೋದಿ   ಕಾಶ್ಮೀರಕ್ಕೆ ಭೇಟಿ ನೀಡಿ, ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಟ್ಟಿದ್ದರು. ಇದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದೆ. ಮೋದಿ ಭೇಟಿಯನ್ನು ಪಾಕಿಸ್ತಾನ ಪ್ರಧಾನಿ (Pak PM) ಶಹಬಾಜ್‌ ಷರೀಫ್‌  ವಿರೋಧಿಸಿದ್ದಾರೆ.

ಮೋದಿ ಕಾಶ್ಮೀರ ಭೇಟಿಗೆ ಪಾಕಿಸ್ತಾನ ವಿರೋಧ

ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿ ಚೆನಾಬ್‌ ನದಿ ನೀರನ್ನು ಬಳಸಿಕೊಂಡು ಆರಂಭಿಸುವ ರಾಟಲ್‌ ಮತ್ತು ಕ್ವಾರ್‌ ಜಲವಿದ್ಯುತ್‌ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇದಕ್ಕೆ ಪಾಕಿಸ್ತಾನ ಪಧಾನಿ ಶಹಬಾಜ್‌ ಷರೀಫ್‌ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
“ಸಿಂಧೂ ಒಪ್ಪಂದದ ಉಲ್ಲಂಘನೆ” ಎಂದ ಪಾಕ್
ಪ್ರಧಾನಿ ನರೇಂದ್ರ ಮೋದಿಯವರ ಕಾಶ್ಮೀರ ಭೇಟಿಯನ್ನು ಟೀಕಿಸಿರುವ ಪಾಕಿಸ್ತಾನ, ಇದು ಸಿಂಧೂ ನದಿ ನೀರಿನ ಹಂಚಿಕೆ ಒಪ್ಪಂದದ ನೇರ ಉಲ್ಲಂಘನೆ, “ಭಾರತದ ಪ್ರಧಾನಿಯವರು ಎರಡು ಯೋಜನೆಗಳ ಶಂಕುಸ್ಥಾಪನೆಯನ್ನು ಪಾಕಿಸ್ತಾನವು 1960 ರ ಸಿಂಧೂ ಜಲ ಒಪ್ಪಂದದ (IWT) ನೇರ ಉಲ್ಲಂಘನೆ ಎಂದು ಪರಿಗಣಿಸುತ್ತದೆ” ಎಂದು ಆರೋಪಿಸಿದೆ. ಕಾಶ್ಮೀರ ಸಮಸ್ಯೆನ್ನು ಮರೆಮಾಚಲು ಭಾರತ ಕೈಗೊಂಡಿರುವ ಇಂತಹ ಹತಾಶ ಪ್ರಯತ್ನಗಳಿಗೆ ಅಂತರರಾಷ್ಟ್ರೀಯ ಸಮುದಾಯ ಸಾಕ್ಷಿಯಾಗಿದೆ’ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಟೀಕಿಸಿದೆ.
ಇದು ಒಪ್ಪಂದದ ಉಲ್ಲಂಘನೆ ಎಂದ ಪಾಕ್
“ಭಾರತವು ವಿನ್ಯಾಸಗೊಳಿಸಿದಂತೆ ರಾಟಲ್ ಜಲವಿದ್ಯುತ್ ಸ್ಥಾವರದ ನಿರ್ಮಾಣವು ಪಾಕಿಸ್ತಾನದಿಂದ ವಿವಾದಕ್ಕೊಳಗಾಗಿದೆ ಮತ್ತು ಕ್ವಾರ್ ಜಲವಿದ್ಯುತ್ ಸ್ಥಾವರಕ್ಕಾಗಿ ಭಾರತವು ಪಾಕಿಸ್ತಾನದೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವ ಒಪ್ಪಂದದ ಬಾಧ್ಯತೆಯನ್ನು ಇದುವರೆಗೆ ಪೂರೈಸಿಲ್ಲ” ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿದೆ. IWT ಅಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಪೂರೈಸಲು ಮತ್ತು IWT ಚೌಕಟ್ಟಿಗೆ ಹಾನಿಕಾರಕವಾದ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ಪಾಕಿಸ್ತಾನವು ಭಾರತಕ್ಕೆ ಕರೆ ನೀಡುತ್ತದೆ ಎಂದು ಅದು ಹೇಳಿದೆ.
ಏನಿದು ಸಿಂದೂ ನದಿ ಒಪ್ಪಂದ?
1960 ರ ಸಿಂಧೂ ಜಲ ಒಪ್ಪಂದ, ವಿಶ್ವ ಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ್ದು ಮತ್ತು ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಸಹಿ ಹಾಕಿದ್ದರು. ಎರಡೂ ದೇಶಗಳಲ್ಲಿ ಹರಿಯುವ ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರನ್ನು ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ನಿರ್ವಹಿಸುತ್ತದೆ. 1960 ರ ಸಿಂಧೂ ಜಲ ಒಪ್ಪಂದದ ನಿಬಂಧನೆಗಳ ಅಡಿಯಲ್ಲಿ, ಪೂರ್ವ ನದಿಗಳ ನೀರನ್ನು – ಸಟ್ಲೆಜ್, ಬಿಯಾಸ್ ಮತ್ತು ರವಿ – ಭಾರತಕ್ಕೆ ಮತ್ತು ಪಶ್ಚಿಮ ನದಿಗಳು – ಸಿಂಧೂ, ಝೀಲಂ ಮತ್ತು ಚೆನಾಬ್ – ಪಾಕಿಸ್ತಾನಕ್ಕೆ ಹಂಚಿಕೆ ಮಾಡಲಾಗಿತ್ತ..
370ನೇ ವಿಧಿ ರದ್ಧತಿ ಬಳಿಕ ಪ್ರಧಾನಿ ಮೊದಲ ಭೇಟಿ
2019ರ ಆಗಸ್ಟ್‌ನಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಮೊದಲ ಬಾರಿಗೆ ಮೋದಿ ಅವರು ಮೊನ್ನೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಈ ಭೇಟಿ ಭಾರೀ ಮಹತ್ವ ಪಡೆದಿತ್ತು.
5,300 ಕೋಟಿ ರೂಪಾಯಿ ವೆಚ್ಚದ ಯೋಜನೆ
ಕಾಶ್ಮೀರದ್ಲಲಿ ಪ್ರಧಾನಿ ಮೋದಿ ಅವರು ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಈ ಯೋಜನೆಯಡಿಯಲ್ಲಿ ಕಿಶ್ತ್ವಾರ್‌ನ ಚೆನಾಬ್ ನದಿಯಲ್ಲಿ ಸುಮಾರು 5,300 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಿರುವ 850 MW ಸೌಲಭ್ಯ ಮತ್ತು 4,500 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಅದೇ ನದಿಯಲ್ಲಿ 540 MW ಕ್ವಾರ್ ಜಲವಿದ್ಯುತ್ ಯೋಜನೆಗೆ ನಿರ್ಮಿಸಲಾಗುವುದು ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್-19 ಗಾಗಿ ಸೆರೆಯಲ್ಲಿರುವ ಕಾಡು ಪ್ರಾಣಿಗಳನ್ನು ಪರೀಕ್ಷಿಸಲು ಕರೆ ಮಾಡಿ!

Tue Apr 26 , 2022
ನಗರ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಹೆಲ್ತ್ ಅಂಡ್ ವೆಟರ್ನರಿ ಬಯೋಲಾಜಿಕಲ್ಸ್ (IAHVB) ಪ್ರಕಾರ ಹುಲಿಗಳು ಮತ್ತು ಸಿಂಹಗಳಂತಹ ಮೃಗಾಲಯದ ಪ್ರಾಣಿಗಳನ್ನು ಇತರ ಕೋರೆಹಲ್ಲುಗಳು ಮತ್ತು ಬೆಕ್ಕುಗಳಿಗೆ ವ್ಯಾಯಾಮ ಮಾಡುವ ಮೊದಲು ಕೋವಿಡ್ -19 ಗಾಗಿ ಪರೀಕ್ಷಿಸಬೇಕು ಮತ್ತು ಪರೀಕ್ಷಿಸಬೇಕು. ಏಪ್ರಿಲ್ 26 ರಂದು ವೈದ್ಯಕೀಯ ಶಿಕ್ಷಣ ಇಲಾಖೆಯು ಕರೆದಿರುವ ರಾಜ್ಯದ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಯೊಂದಿಗಿನ ಸಭೆಯಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಲು ಸಂಸ್ಥೆ ಉದ್ದೇಶಿಸಿದೆ. […]

Advertisement

Wordpress Social Share Plugin powered by Ultimatelysocial