ನಟಿ ಪೂರ್ಣಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ.

ಒಂದೆಡೆ ಕಿರುತೆರೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಪೂರ್ಣಾ ದುಬೈ ಉದ್ಯಮಿಯೊಬ್ಬರನ್ನು ಮದುವೆಯಾಗಿದ್ದಾರೆ.

ನಟಿ ಈಗ ಗರ್ಭಿಣಿ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬೇಬಿ ಬಂಪ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈಗ ಅವು ವೈರಲ್ ಆಗುತ್ತಿವೆ. ನಟಿ ಮದುವೆಯಾಗಿ ಮೂರೇ ತಿಂಗಳಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ. ಈ ಜೋಡಿ ಅಕ್ಟೋಬರ್​24 2022ರಂದು ಮದುವೆಯಾಗಿದ್ದಾರೆ.

ನಟಿ ಕ್ರೀಮ್ ಕಲರ್​ನ ಸುಂದರವಾದ ಗೌನ್ ಧರಿಸಿ ಕ್ಯೂಟ್ ಆಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಅವರು ಕೈಯಲ್ಲಿ ಹಾರ್ಟ್ ಸಿಂಬಲ್ ಮಾಡಿ ತೋರಿಸುವುದನ್ನು ಇಲ್ಲಿ ಕಾಣಬಹುದು.

ಸಿಂಪಲ್ ಆಗಿರುವ ಒಂದು ಚೈನ್ ಮಾತ್ರ ಧರಿಸಿದ್ದ ನಟಿ ಸಿಂಪಲದ ಮೇಕಪ್ ಹಾಗೂ ಹೇರ್​ಸ್ಟೈಲ್ ಮಾಡಿಕೊಂಡಿದ್ದರು. ಅವರ ಕೈಗಳಲ್ಲಿ ಮೆಹಂದಿ ರಂಗನ್ನು ಕಾಣಬಹುದು.

ತಮ್ಮ ಬೇಬಿ ಬಂಪ್ ಹಿಡಿದು ಕ್ಯೂಟ್ ಆಗಿ ಸ್ಮೈಲ್ ಕೊಟ್ಟ ಸಖತ್ ಸ್ಟೈಲಿಷ್ ಆಗಿ ಕಾಣಿಸಿದ್ದಾರೆ. ಅವರ ನಗು ಸುಂದರವಾಗಿ ಮೂಡಿ ಬಂದಿದೆ.

ಮೈ ತುಂಬ ಆಭರಣಗಳನ್ನು ಧರಿಸಿದ್ದ ಶಮ್ನಾ ಖಾಸಿಂ ಅವರ ಮದುವೆಯಲ್ಲಿ ಸಖತ್ ಆಗಿ ಮಿಂಚಿದ್ದರು. ಅವರ ಮದುವೆ ಫೋಟೋಗಳು ವೈರಲ್ ಆಗಿದ್ದವು.

ಪೂರ್ಣಾ ತನ್ನ ಸೌಂದರ್ಯ ಹಾಗೂ ಅಭಿನಯದಿಂದ ಹಲವಾರು ವರ್ಷಗಳಿಂದ ಸೌತ್ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ನರೇಶ್ ಅಭಿನಯದ ‘ಸೀಮಾ ತಪಕೈ’ ಚಿತ್ರದಲ್ಲಿ ನಟಿಸಿದ ನಂತರ ಮಲಯಾಳಿ ಸುಂದರಿ ಪೂರ್ಣ ಜನಪ್ರಿಯರಾದರು. ಇವರು ಕೇರಳದ ಕಣ್ಣೂರಿನವರು.

ಇತ್ತೀಚಿಗೆ ಪೂರ್ಣಾ ಅವರಿಗೆ ಹೀರೋಯಿನ್ ಅವಕಾಶಗಳು ಕಡಿಮೆಯಾದ ಕಾರಣ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಆಯಕ್ಟಿವ್ ಆಗಿದ್ದಾರೆ. ಅಕ್ಟೋಬರ್​ನಲ್ಲಿ ಯುಎಇ ಉದ್ಯಮಿ ಶಾನಿದ್ ಆಸಿಫ್ ಅಲಿ ಅವರನ್ನು ಮದುವೆಯಾಗುವುದಾಗಿ ಪೂರ್ಣಾ ಘೋಷಿಸಿದ್ದಾರೆ.

ದುಬೈನ ಜೆಬಿಎಸ್ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ ಮತ್ತು ಸಿಇಒ ಶಾನಿದ್ ಆಸಿಫ್ ಅಲಿ ಅವರನ್ನು ಪೂರ್ಣಾ ಪ್ರೀತಿಸುತ್ತಿದ್ದರು. ಪೂರ್ಣ ಅವರ ಪತಿ ಅವರಿಗೆ ಮದುವೆಗೈ ಮುನ್ನ 2700 ಗ್ರಾಂ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ.ಇದರ ಮೌಲ್ಯ ಸುಮಾರು ರೂ. 1.30 ಕೋಟಿ. ನಟಿಗೆ ದುಬೈನಲ್ಲಿರುವ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಇದರ ಮೌಲ್ಯ ಸುಮಾರು 25 ಕೋಟಿ. ದುಬಾರಿ ಕಾರು ಹಾಗೂ ಕೆಲವು ಕಂಪನಿಗಳ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇವುಗಳ ಮೌಲ್ಯ 30 ಕೋಟಿಯವರೆಗೂ ಇರಲಿದೆ ಎನ್ನಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸದಾ ಕನ್ನಡಪರ ಕೆಲಸಗಳನ್ನು ಮಾಡ್ತಾ ಇರ್ತಾರೆ.

Fri Feb 17 , 2023
ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್ ಬಾಸ್ ನಿಂದ ಹೆಚ್ಚು ಖ್ಯಾತಿ ಹೊಂದಿದ್ದಾರೆ. ಸದಾ ಕನ್ನಡಪರ ಕೆಲಸಗಳನ್ನು ಮಾಡ್ತಾ ಇರ್ತಾರೆ. ಕನ್ನಡ ಹೋರಾಟಗಾರ ಎಂದೇ ಗುರುತಿಸಿಕೊಂಡಿರುವ ರೂಪೇಶ್ ರಾಜಣ್ಣ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮನೆಗೆ ಭೇಟಿ ನೀಡಿದ್ದಾರೆ. ಕನ್ನಡಹಬ್ಬ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಬ್ರಿಗೇಡ್ ರೋಡ್ ಬಳಿ ನಡೆಯುತ್ತಿರೋ ಕನ್ನಡ ಕುಣಿತ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮಾನ್ಯ ಶ್ರೀ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಆಹ್ವಾನ ಕೊಡಲಾಯಿತು ಎಂದು ರೂಪೇಶ್ ರಾಜಣ್ಣ […]

Advertisement

Wordpress Social Share Plugin powered by Ultimatelysocial