ʼಸಲಗʼ ಗೆ   ಸಿದ್ದು , ಪುನೀತ್‌ ರಾಜ್‌ಕುಮಾರ್ ಸಾಥ್

ದುನಿಯಾ ವಿಜಯ್ ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿ, ನಟಿಸಿರುವ ‘ಸಲಗ’ ಚಿತ್ರ ಅಕ್ಟೋಬರ್ 14ಕ್ಕೆ ತೆರೆಗೆ ಬರಲಿದೆ. ಸಿನಿಮಾ ತಂಡದಿಂದ  ಈಗಾಗಲೇ ಪ್ರಚಾರ ಜೋರಾಗಿದ್ದು ಸಿನಿಮಾವನ್ನು ಹೆಚ್ಚು ಮಂದಿಗೆ ತಲುಪಿಸುವ ಪ್ರಯತ್ನದಲ್ಲಿದೆ. ‘ಸಲಗ’ ಚಿತ್ರತಂಡ ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ‘ಸಲಗ’ದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಪುನೀತ್ ರಾಜ್‌ಕುಮಾರ್ ಸಹ ಬರಲಿದ್ದಾರೆ. ಪುನೀತ್ ರಾಜ್‌ಕುಮಾರ್, ಸಿದ್ದರಾಮಯ್ಯ ಹಾಗೂ ಇನ್ನಿತರು ಅತಿಥಿಗಣ್ಯರು ‘ಸಲಗ’ ಸಿನಿಮಾದ ಟ್ರೈಲರ್ ಲಾಂಚ್ ಅದ್ದೂರಿಯಾಗಿ ಮಾಡಲಿದ್ದಾರೆ.ಪುನೀತ್, ದುನಿಯಾ ವಿಜಯ್ ಜೊತೆಯಾಗಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿವೆ.

ಟ್ವೀಸ್ಟ್‌ ಅಂದ್ರೆ ಇದಪ್ಪ ‘ಸಲಗ’ ಸಿನಿಮಾಕ್ಕೆ ಪ್ರತಿಸ್ಪರ್ಧಿಯಾಗಿ ಕಿಚ್ಚ ಸುದೀಪ್ ಅಭಿನಯದ  ‘ಕೋಟಿಗೊಬ್ಬ 3’ ಎದುರಾಗಿದೆ. ಎರಡೂ ಸಿನಿಮಾಗಳು ಅಕ್ಟೋಬರ್ 14ರಂದೇ ಚಿತ್ರಮಂದಿರಕ್ಕೆ ಬರುತ್ತಿವೆ. ಯಾವ ಸಿನಿಮಾ ಸಿನಿ ಪ್ರೇಕ್ಷಕರನ್ನು  ಹೆಚ್ಚು ಗಮನ ಸೆಳೆಯುತ್ತದೆ ಎಂಬುದು ಕಾದು ನೋಡಬೇಕಿದೆ.

 

‘ಸಲಗ’ ಸಿನಿಮಾದ ಎರಡು ಹಾಡುಗಳು ಈವರೆಗೆ ಬಿಡುಗಡೆ ಆಗಿದ್ದು, ಎರಡೂ ಹಾಡುಗಳು ಮಸ್ತ್‌ ಹಿಟ್ ಆಗಿವೆ. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಕಾರಣ ಸಿನಿಮಾದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್, ಸಂಜಯ್ ಆನಂದ್, ತ್ರಿವೇಣಿ ರಾವ್, ಅಚ್ಯುತ್ ಕುಮಾರ್,ಕೋಕ್‌ ರೋಜ್‌ ಇನ್ನೂ ಹಲವು ನಟರು ನಟಿಸಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

5830 ಬ್ಯಾಂಕ್ ಹುದ್ದೆ ಕನ್ನಡದಲ್ಲೇ ಪರೀಕ್ಷೆ

Thu Oct 7 , 2021
ಒಟ್ಟು 5830 ಹುದ್ದೆಗಳಿಗೆ ನೇಮಕ ನಡೆಯಲಿದ್ದು ಇಂದಿನಿಂದಲೇ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ರಾಜ್ಯದಲ್ಲಿ 454 ಹುದ್ದೆಗಳಿವೆ ಮುಖ್ಯವಾಗಿ ರಾಜ್ಯ ಮೂಲದ ಕೆನರಾ ಬ್ಯಾಂಕ್ 140 ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 209 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿವೆ. ನೇಮಕಕ್ಕೆ ಸಂಬಂಧಿಸಿದಂತೆ ಡಿಸೆಂಬರ್ನಲ್ಲಿ ಪೂರ್ವಭಾವಿ ಮತ್ತು ಜನವರಿ-ಫೆಬ್ರವರಿ ಯಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗುತ್ತದೆ. ಈ ಎರಡು ಪರೀಕ್ಷೆಗಳನ್ನು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗಿದೆ […]

Advertisement

Wordpress Social Share Plugin powered by Ultimatelysocial