ಭಾರತದ ಮೊದಲ ಗಗನಯಾತ್ರಿ ರಾಕೇಶ್ ಶರ್ಮಾ ಜೀವನಾಧಾರಿತ ಸಿನಿಮಾಗೆ ಟೈಟಲ್ ಫಿಕ್ಸ್.!

ಮುಂಬೈ: ಭಾರತದ ಮೊದಲ ಗಗನಯಾನಿ ರಾಕೇಶ್ ಶರ್ಮಾ ಜೀವನಾಧಾರಿತ ಸಿನಿಮಾ ‘ಸಾರೆ ಜಹಾಂಸೆ ಅಚ್ಚಾ’ ಖಂಡಿತವಾಗಿ ನಿರ್ಮಾಣಗೊಳ್ಳಲಿದೆ ಎಂದು ದೇಶದ ಪ್ರಖ್ಯಾತ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಹೇಳಿದ್ದಾರೆ. ಈ ಸಿನಿಮಾ ತಮ್ಮ ಜೀವನಕ್ಕೆ ತುಂಬಝತ್ತಿರವಾದುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಿನಿಮಾದ ಚಿತ್ರಕಥೆಯನ್ನು ಅಂಜುಂ ರಾಜಬಲಿ ರಚಿಸಲಿದ್ದು, ನಿರ್ದೇಶನದ ಜವಾಬ್ದಾರಿ ಮಹೇಶ್ ಮಥಾಯಿ ಅವರ ಹೆಗಲೇರಿದೆ. ಸಿದ್ಧಾರ್ಥ್ ರಾಯ್ ಕಪೂರ್ ಅವರ ನೂತನ ವೆಬ್ ಸಿರೀಸ್ ಅರಣ್ಯಕ್ ಗೆ ನೆಟ್ ಫ್ಲಿಕ್ಸ್ ನಲ್ಲಿ ವ್ಯಾಪಕ ಮನ್ನಣೆ ದೊರೆಯುತ್ತಿದೆ.

ಇದೀಗ ಹಲವು ವರ್ಷಗಳ ಹಿಂದೆಯೇ ಶುರುವಾಗಬೇಕಿದ್ದ ರಾಕೇಶ್ ಶರ್ಮಾ ಬಯೋಪಿಕ್ ಸಿನಿಮಾಗೆ ಮತ್ತೆ ಮರುಜೀವ ದೊರೆತಿದೆ. ರಾಕೇಶ್ ಶರ್ಮಾ 1984ರಲ್ಲಿ ಗಗನಯಾನ ಮಾಡಿದ್ದರು. ರಾಕೇಶ್ ಶರ್ಮಾ ಪಾತ್ರದಲ್ಲಿ ಆಮೀರ್ ಖಾನ್ ಮತ್ತು ಶಾರುಖ್ ಖಾನ್ ನಟಿಸುವರೆಂದು ಹೇಳಲಾಗಿತ್ತು. ಆದರೆ ಅವರಿಬ್ಬರ ಹೆಸರುಗಳು ನಂತರ ಡ್ರಾಪ್ ಆಗಿತ್ತು. ಇದೀಗ ಸಾರೆ ಜಹಾಂಸೆ ಅಚ್ಚಾ ನಾಯಕ ಪಾತ್ರಕ್ಕೆ ರಣ್ ಬೀರ್ ಕಪೂರ್, ವಿಕ್ಕಿ ಕೌಶಲ್ ಮತ್ತು ಫರ್ಹಾನ್ ಅಖ್ತರ್ ಹೆಸರು ಕೇಳಿಬರುತ್ತಿವೆ. ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಸಿನಿಮಾ ತಂಡ ಬಿಟ್ಟುಕೊಟ್ಟಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RRR Movie:ಓಮಿಕ್ರಾನ್ ವೈರಸ್ ಗೆ ಬೆದರಿದ ''ಆರ್ ಆರ್ ಆರ್'' ಸಿನಿಮಾ; ಬಿಡುಗಡೆ ದಿನಾಂಕ ಮುಂದೂಡಿಕೆ;

Sun Jan 2 , 2022
ದೇಶಾದ್ಯಂತ ಮಹಾಮಾರಿ ಕೊರೊನಾ ಹಾಗೂ ಒಮಿಕ್ರಾನ್​​ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಅನೇಕ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ ಮಾಡಲಾಗ್ತಿದೆ. ಇದರ ಪರಿಣಾಮ ಸಿನಿಮಾ ರಂಗದ ಮೇಲೆ ನೇರವಾಗಿ ಬೀರುತ್ತಿರುವ ಕಾರಣ ಅನೇಕ ಚಿತ್ರಗಳ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಲಾಗ್ತಿದೆ. ಒಮಿಕ್ರಾನ್​​ ಆತಂಕ ಬೆನ್ನಲ್ಲೇ ಈಗಾಗಲೇ ಶಾಹಿದ್​ ಕಪೂರ್​ ಅಭಿನಯದ ‘ಜೆರ್ಸಿ’ ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಲಾಗಿದ್ದು, ಅದರ ಬೆನ್ನಲ್ಲೇ ಇದೀಗ ‘ಆರ್​ಆರ್​ಆರ್​’ ಚಿತ್ರದ ರಿಲೀಸ್​ ಡೇಟ್​ ಮುಂದೂಡಿಕೆ […]

Advertisement

Wordpress Social Share Plugin powered by Ultimatelysocial