ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆ ಲಾಕ್‌ ಡೌನ್ ಜಾರಿಗೊಳಿಸಿದೆ, ನಗರದಲ್ಲಿ ಬಹುತೇಕ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದು, ಚಿಕಿತ್ಸೆ ಸಿಗದೆ ಗರ್ಭಿಣಿ ಸಾವನ್ನಪ್ಪಿದ ಘಟನೆ‌ ಬುಧವಾರ ನಡೆದಿದೆ. ಕಡಪಟ್ಟಿ ಗ್ರಾಮದ ನಿವಾಸಿ ರೂಪಾ ಶಿವಾನಂದ ಹೊಸಮನಿ(23) ಮೃತ ಗರ್ಭಿಣಿ. ಕೊರೊನಾ ಹಿನ್ನೆಲೆ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಖಾಸಗಿ ಆಸ್ಪತ್ರೆ ವೈದ್ಯರ ಹಿಂದೇಟು ಹಾಕುತ್ತಿದ್ದಾರೆ.  ಆಂಬುಲೆನ್ಸ್ ನಲ್ಲಿ ಗರ್ಭಿಣಿಯನ್ನು ಹೊತ್ತು  ವಿವಿಧ ಖಾಸಗಿ ಆಸ್ಪತ್ರೆಗೆ ಸಂಬಂಧಿಕರ ಅಲೆದಾಟ ನಡೆಸಿದ್ದಾರೆ. ಆದ್ರೆ‌ ಯಾವುದೇ […]

ಪಾದರಾಯಪುರ ಗಲಭೆ ಪ್ರಕರಣದ ಆರೋಪಿಗಳನ್ನು ಈಗಾಗಲೇ ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದ್ದು, ಸಮಾಜದ ಸ್ವಾಸ್ಥ್ಯ ಕದಡುವ ಗೂಂಡಾಗಳ ವರ್ತನೆಗೆ ಕಡಿವಾಣ ಹಾಕಲು ಹೊಸ ಕಾಯ್ದೆ ಜಾರಿಗೆ ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಿಂದ ಜನರನ್ನು ರಕ್ಷಣೆ ಮಾಡಲು ಹಗಲು ರಾತ್ರಿ ಎನ್ನದೆ ಪೊಲೀಸರು,ವೈದ್ಯರು ಕರ್ತವ್ಯದಲ್ಲಿ ತೊಡಗಿದ್ದಾರೆ. ಅವರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಇಂತಹ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. […]

ಕೊರೋನಾ ಪೀಡಿತ ವ್ಯಕ್ತಿಗಳಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅನುಮತಿ ನೀಡಿದ್ದು, ರಾಜ್ಯದಲ್ಲಿ ಈ ಮಾದರಿಯ ಚಿಕಿತ್ಸೆ ಮುಂದುವರೆಸಬಹುದು ಎಂದು ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.  ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರೋನಾದಿಂದ ಗುಣಮುಖರಾದ ವ್ಯಕ್ತಿಯ ದೇಹದಿಂದ ರೋಗ ನಿರೋಧಕ ಶಕ್ತಿಯನ್ನು ಉಂಟು ಮಾಡುವ ರಕ್ತದ ಕಣಗಳನ್ನು ರೋಗ ಪೀಡಿತ ವ್ಯಕ್ತಿಗೆ ನೀಡುವ ಮೂಲಕ ಆತನನ್ನೂ ಈ ಕಾಯಿಲೆಯಿಂದ ಗುಣಪಡಿಸಬಹುದು. ಡಾ. ವಿಶಾಲ್ ರಾವ್ ಅವರಿಗೆ […]

ಪಾದರಾಯನಪುರಕ್ಕೆ ಅನುಮತಿ ಪಡೆದು ಹೋಗಲು ಅದು ಜಮೀರ್ ಅಹಮದ್ ಫಾದರ್ ಪ್ರಾಪರ್ಟಿ ಅಲ್ಲ ಎಂದು ಸಚಿವ ಸಿ.ಟಿ.ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಚಿಕ್ಕಮಗಳೂರನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವಾಗ ವಿಧಾನಸಭೆಗೆ ಆಯ್ಕೆಯಾಗಿ ಬಂದಿದ್ದೇನೆಯೋ ಅವಾಗಲೇ ಜಮೀರ್ ಕೂಡ ಆಯ್ಕೆಯಾಗಿ ಬಂದಿದ್ದಾರೆ. ಹೀಗಾಗಿ ಜಮೀರ್ ಅವರಿಗೆ ಒಂದು ಕಾನೂನು ನನಗೊಂದು ಕಾನೂನು ಇಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುತ್ತದೆ. ಈಗಾಗಲೇ ಮುಖ್ಯಮಂತ್ರಿಗಳು ಅವನು […]

ಉಡುಪಿ: ಕೊರೊನಾ ಸೋಂಕು ಹರಡುತ್ತಿರೋ ಈ ಸಂಧರ್ಭದಲ್ಲಿ ಸಂಘ ಸಂಸ್ಥೆಗಳು, ಶ್ರೀಮಂತರು ಬಡವರಿಗೆ ಆಹಾರ ಸಾಮಾಗ್ರಿಗಳನ್ನು ವಿತರಣೆ ನಡೆಸುತ್ತಿದ್ದಾರೆ. ಆದ್ರೆ ಇಲ್ಲೊಬ್ಬ ಮಹಿಳೆ ತಾನೇ ಗುಡಿಸಲಲ್ಲಿ ವಾಸವಾಗಿದ್ರೂ, ಬಡವರ ಸಂಕಷ್ಟಕ್ಕೆ ನೆರವಾಗೋ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ..ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಅಲ್ಲೋ ಇಲ್ಲೊ ಸಿಕ್ಕಿದ ಮೀನು ಮಾರಿ ಪುಟ್ಟ ಗುಡಿಸಲಲ್ಲಿ ಜೀವನ ಸಾಗಿಸುತ್ತಿರುವ ಶಾರದಕ್ಕ ಎಂಬುವವರು, ಮಲ್ಪೆ ವಡಬಾಂಡೇಶ್ವರ ವಾರ್ಡ್ ನೆರ್ಗಿ ಯಲ್ಲಿ ಒಟ್ಟು 140 ಮನೆಗಳಿಗೆ […]

ಕರ್ನಾಟಕದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಒಂದೇ ದಿನ 7 ಜನರಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 425 ಕ್ಕೆ ಏರಿಕೆಯಾಗಿದೆ. ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ, ಕಲಬುರಗಿಯಲ್ಲಿ ಇಂದು 4 ತಿಂಗಳ ಮಗು ಸೇರಿದಂತೆ ಹೊಸದಾಗಿ 5 ಜನರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಕಲಬುರಗಿಯ ಐದು ಜನರಿಗೆ […]

ಆರೋಗ್ಯ ಸಿಬ್ಬಂದಿಗಳ ತಂಟೆಗೆ ಬಂದ್ರೇ  ಹುಷಾರ್. ಹಲ್ಲೆ, ದೌರ್ಜನ್ಯ ಮಾಡಿದ್ರೆ ಕೈ ಕಾಲ್ ಕಟ್. ಕೊರೊನಾ ವಾರಿಯರ್ಸ್ ತಂಟೆಗೆ ಬರಬೇಡಿ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ್  ನಡಹಳ್ಳಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹಲ್ಲೆ ಮಾಡಿದ್ರೆ ಅಂತವರ ಕೈ ಕಾಲು ಮುರಿಯಿರಿ ಎಂದು ಪೊಲೀಸ್ ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದ್ದಾರೆ.  

ನವದೆಹಲಿ : ಕರ್ತವ್ಯ ನಿರ್ವಹಣೆ ವೇಳೆ ವೈದ್ಯರಿಗೆ ಸೂಕ್ತ ಭದ್ರತೆ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಮಾರಕ ಕೊರೊನಾ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಗಲಿರುಳು ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ. ಹೀಗಿದ್ದರೂ ದೇಶದ ವಿವಿಧೆಡೆ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ, ದೌರ್ಜನ್ಯ ಘಟನೆಗಳು ವರದಿಯಾಗುತ್ತಲೇ ಇವೆ. ಹೀಗಾಗಿ ವೈದ್ಯರು ಸಾಂಕೇತಿಕ ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಬೆನ್ನಲ್ಲೇ ಇಂದು […]

ಶಾಸಕ ಜಮೀರ್ ಅಹ್ಮದ್ ಅವರನ್ನ ಹೋಮ್ ಕ್ವಾರಂಟೈನ್ ಮಾಡಬೇಕು ಅಂತ ಆರೋಗ್ಯ ಸಚಿವ ಶ್ರೀರಾಮುಲು ಬಳ್ಳಾರಿಯಲ್ಲಿ ಹೇಳಿದ್ದಾರೆ. ಅಲ್ಲದೆ ಪಾದರಾಯನ ಪುರಕ್ಕೆ ಭೇಟಿ ನೀಡಿದ್ದ ಗೃಹಸಚಿವ ಬಸವರಾಜ್ ಬೊಮ್ಮಯಿ ಅವರನ್ನ ಕೂಡಾ ತಪಾಸಣೆ ಮಾಡಬೇಕಿದೆ ಅಂತ ಹೇಳಿದ್ದಾರೆ. ಈ ಹಿಂದೆ ವೃದ್ಧೆಯೊಬ್ಬರ ಸಾವಿಗೆ ಜಮೀರ್ ಅಹ್ಮದ್ ತೆರಳಿದ್ರು. ಅಲ್ಲಿ ಸುಮಾರು ೨೫ ಜನ ಸೇರಿದ್ರು. ಹೀಗಾಗಿ ಶಾಸಕ ಜಮೀರ್ ಅವರನ್ನ ಹೋಮ್ ಕ್ವಾರಂಟೈನ್ ಮಾಡಬೇಕು ಅಂತ ಹೇಳಿದ್ದಾರೆ.

ಆಶಾ ಕಾರ್ಯಕರ್ತೆಯ ಮೇಲೆ ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಗೆ ನಿಂದಿಸಿ ಹಲ್ಲೆ ಮಾಡುವವರು, ಧಮ್ಕಿ ಹಾಕಿದವರು ಮನುಷ್ಯರಲ್ಲ, ಮೃಗಗಳು. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಕಠಿಣ ಕಾನೂನು ಜಾರಿಗೆ ತರಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  

Advertisement

Wordpress Social Share Plugin powered by Ultimatelysocial