“ನಿಮ್ಮನ್ನು ಗುಂಡಿಕ್ಕಿ ಕೊಲ್ಲಲು ಭಯೋತ್ಪಾದಕನನ್ನು ಕಳುಹಿಸುತ್ತೇವೆ”.

ಚೆನ್ನೈ: ವಿರುದ್ಧ ಡಿಎಂಕೆ ನಾಯಕರೊಬ್ಬರು ನೀಡಿದ ಹೇಳಿಕೆ ಪ್ರಸ್ತುತ ಸಿಎಂ ಎಂಕೆ ಸ್ಟಾಲಿನ್ ಹಾಗೂ ರಾಜ್ಯಪಾಲದ ನಡುವೆ ನಡೆಯುತ್ತಿರುವ ವಿವಾದಕ್ಕೆ ತುಪ್ಪ ಸುರಿದಂತೆ ಆಗಿದೆ.

ಡಿಎಂಕೆಯ ಶಿವಾಜಿ ಕೃಷ್ಣಮೂರ್ತಿ ಅವರು ಸಭೆಯೊಂದರಲ್ಲಿ ರಾಜ್ಯಪಾಲರಾದ ಆರ್.ಎನ್.ರವಿ ಅವರ ಮೇಲೆ ಗುಡುಗುವ ಭರದಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ರಾಜ್ಯಪಾಲರನ್ನು ನಿಂದಿಸಬೇಡಿ ಎಂದು ಸಿಎಂ ಹೇಳುತ್ತಿದ್ದಾರೆ. ಅವರು ಭಾಷಣವನ್ನು ಸರಿಯಾಗಿ ಓದಿದ್ದರೆ ನಾನು ಅವರ ಕಾಲಿಗೆ ಹೂವುಗಳನ್ನು ಇಟ್ಟು ಕೈಮುಗಿದು ಧನ್ಯವಾದ ಹೇಳುತ್ತಿದ್ದೆ. ಆದರೆ ಅಂಬೇಡ್ಕರ್ ಹೆಸರು ಹೇಳಲು ನಿರಾಕರಿಸಿದರೆ ಚಪ್ಪಲಿಯಿಂದ ಹೊಡೆಯುವ ಹಕ್ಕು ನನಗಿಲ್ಲವೇ? ನೀವು ಅಂಬೇಡ್ಕರ್ ಹೆಸರನ್ನು‌ ಹೇಳಲು ನಿರಾಕರಿಸಿದರೆ, ನೀವು ಕಾಶ್ಮೀರಕ್ಕೆ ಹೋಗಿ. ನಿಮ್ಮನ್ನು ಗುಂಡಿಕ್ಕಿ ಕೊಲ್ಲಲು ನಾವು ಒಬ್ಬ ಭಯೋತ್ಪಾದಕನನ್ನು ಕಳುಹಿಸುತ್ತೇವೆ” ಎಂದು ಶಿವಾಜಿ ಕೃಷ್ಣಮೂರ್ತಿ ಸಭೆಯಲ್ಲಿ ಹೇಳಿದ್ದಾರೆ.

ಸದ್ಯ ಈ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಜೆಪಿ ನಾಯಕ ನಾರಾಯಣನ್ ತಿರುಪತಿ ಶಿವಾಜಿ ಕೃಷ್ಣಮೂರ್ತಿ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.

ಡಿಎಂಕೆಗೆ ಯಾವ ಭಯೋತ್ಪಾದಕ ಸಂಬಂಧವಿದೆ ಎಂದು ಪೊಲೀಸರು ತನಿಖೆ ನಡೆಸಬೇಕು, ಏಕೆಂದರೆ ಅವರು ಭಾಷಣದಲ್ಲಿ ರಾಜ್ಯಪಾಲರನ್ನು ಕಾಶ್ಮೀರಕ್ಕೆ ಕಳುಹಿಸುತ್ತೇವೆ ಮತ್ತು ಕಾಶ್ಮೀರಕ್ಕೆ ಭಯೋತ್ಪಾದಕರನ್ನು ಕಳುಹಿಸುತ್ತೇವೆ ಎಂದು ಹೇಳಿದರು. ಸಿಎಂ ಸ್ಟಾಲಿನ್‌ ಅವರ ಪ್ರಚೋದನೆಯಿಂದ ಅವರು ಇಂಥ ಮಾತುಗಳನ್ನಾಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಡಿಎಂಕೆ ಮುಖಂಡರಾದ ಶಿವಾಜಿ ಕೃಷ್ಣಮೂರ್ತಿ ಮತ್ತು ಆರ್‌ಎಸ್‌ ಭಾರತಿ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಬಿಜೆಪಿ ನಾಯಕ ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಸದನದಲ್ಲಿ ಸರ್ಕಾರದಿಂದ ಮುದ್ರಿಸಿ ಅಂಗೀಕರಿಸಿದ ಭಾಷಣವನ್ನು ರಾಜ್ಯಪಾಲರು ಸಂಪೂರ್ಣವಾಗಿ ಓದದೇ ಬಿಟ್ಟಿದ್ದರು. ಇದಕ್ಕೆ ಸಿಎಂ ಸ್ಟಾಲಿನ್‌ ಭಾಷಣದ ಕೆಲವು ಭಾಗಗಳನ್ನು ಬಿಟ್ಟು ಹೋಗಿದ್ದಾರೆ ಮತ್ತು “ವಿಧಾನಸೌಧದ ಶಿಷ್ಟಾಚಾರಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿ ನಡೆದುಕೊಂಡಿದ್ದಾರೆ” ಎಂದು ಆರೋಪಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಮಾರಸ್ವಾಮಿಯವರು 224 ಸ್ಥಾನಗಳಿಗೆ ಜೆಡಿಎಸ್ ಅಭ್ಯರ್ಥಿಗಳನ್ನು ಹಾಕಲಿ

Sat Jan 14 , 2023
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ. ಅವರು ಮೊದಲು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿ ಎಂದು ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಅವರು ಸವಾಲು ಹಾಕಿದರು. ನಗರದ ಐವಾನ್ ಶಾಹಿ ಅತಿಥಿ ಗೃಹದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಇದು ಕೊನೆಯ ಚುನಾವಣೆಯಾಗಲಿದೆ ಎಂಬ ಕುಮಾರಸ್ವಾಮಿಯವರ ಟೀಕೆಗೆ ತಿರುಗೇಟು ನೀಡಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರು ಮುಖ್ಯಮಂತ್ರಿಗಳಾಗಿದ್ದಾಗ […]

Advertisement

Wordpress Social Share Plugin powered by Ultimatelysocial