ಕನ್ನಡದಲ್ಲಿ ಬರುತ್ತಿದೆ ಮತ್ತೊಂದು ಹಾರಾರ್ ಚಿತ್ರ “ಸೆಕ್ಟರ್ 7”.

ಸಂಜೀವ್ ಗವಂಡಿ ನಿರ್ದೇಶನದ ಈ ಚಿತ್ರಕ್ಕೆ ಶ್ರೀ ಮುನೇಶ್ವರ ದೇವಸ್ಥಾನದಲ್ಲಿ ಚಾಲನೆ..!  ಕನ್ನಡದಲ್ಲಿ ಈಗ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ಹೆಚ್ಚಾಗಿ ಗೆಲುತ್ತಿದೆ‌. ಅಂತಹ ವಿಭಿನ್ನ ಹಾಗೂ ನೈಜಘಟನೆ ಆಧಾರಿತ ” ಸೆಕ್ಟರ್ 7″ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಉಲ್ಲಾಳದ ಶ್ರೀಮುನೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಕೃಷ್ಣರಾಜೇ ಅರಸ್ ಆರಂಭ ಫಲಕ ತೋರಿದರು. ಶ್ರೀಕಾಂತ್ ರಾಜೇ ಅರಸ್ ಕ್ಯಾಮೆರಾ ಚಾಲನೆ ಮಾಡಿದರು. ಬೆಂಗಳೂರು ಹಾಗೂ ಊಟಿಯಲ್ಲಿ ಚಿತ್ರೀಕರಣ ನಡೆಯಲಿದೆ.

ನೈಜಘಟನೆ ಆಧಾರಿತ ಹಾಗೂ ಹಾರಾರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಸಂಜೀವ್ ಗವಂಡಿ ನಿರ್ದೇಶಿಸುತ್ತಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂಜೀವ್ ಗವಂಡಿ ಅವರೆ ಬರೆದಿದ್ದಾರೆ. “ಮಂಗಾಟ” ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ್ದ ಸಂಜೀವ್ ಅವರಿಗೆ “ಸೆಕ್ಟರ್ 7” ಐದನೇ ನಿರ್ದೇಶನದ ಚಿತ್ರ.

ಎಂ.ಎಸ್ ಮೂವೀಸ್ ಲಾಂಛನದಲ್ಲಿ ಮಂಜುಳ ಅರಸ್ ಈ ಚಿತ್ರವನ್ನು ನಿರ್ಮಾಣ‌ ಮಾಡುತ್ತಿದ್ದಾರೆ. ಎರಡು ಹಾಡುಗಳಿರುವ ಈ ಚಿತ್ರಕ್ಕೆ ವಿನು ಮನಸ್ಸು ಸಂಗೀತ ನೀಡುತ್ತಿದ್ದಾರೆ. ವೀರೇಶ್ (ಎನ್ ಟಿ ಎ) ಛಾಯಾಗ್ರಹಣ, ಆದಿ ಆದರ್ಶ(ಬಾಂಬೆ) ಸಂಕಲನ ಹಾಗೂ ವಿ.ನಾಗೇಶ್ ಅವರ ನೃತ್ಯ ನಿರ್ದೇಶನ “ಸೆಕ್ಟರ್ 7” ಚಿತ್ರಕ್ಕಿದೆ.

ನೂತನ ಪ್ರತಿಭೆ ಸುನೀಲ್ ಕುಮಾರ್ ಈ ಚಿತ್ರದ ನಾಯಕ. ಐಶ್ವರ್ಯ ನಾಯಕಿ. ನಿರ್ಮಾಪಕಿ ಮಂಜುಳ ಅರಸ್ ಅವರು ಸಹ ಪ್ರಮುಖಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ನೇಹ, ನಾಗರಾಜು, ಹನುಮಂತೇ ಗೌಡ, ಗಿರೀಶ್ ಜತ್ತಿ, ಹೇಮಾ, ವಿನೋದ್ ಗೊಬ್ಬರಗಾಲ, ಚೇತನ್, ಮೈಕೋ ಶಿವಕುಮಾರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೂರ್ಯ ಅಭಿನಯದ ‘ಕಂಗುವ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ...!

Sun Apr 16 , 2023
ತಮಿಳಿನ ಬಹುನಿರೀಕ್ಷಿತ ಚಿತ್ರಗಳ ಪೈಕಿ ಸೂರ್ಯ ಅಭಿನಯದ ‘ಸೂರ್ಯ 42’ ಚಿತ್ರವೂ ಒಂದು . ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಘೋಷಣೆಯಾದ ಈ ಚಿತ್ರವು 3ಡಿಯಲ್ಲಿ ಮೂಡಿಬರುತ್ತಿದ್ದು, 10 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ಈ ಬಹುನಿರೀಕ್ಷಿತ ಚಿತ್ರಕ್ಕೆ ಇದೀಗ ‘ಕಂಗುವ’ ಎಂದು ನಾಮಕರಣ ಮಾಡಲಾಗಿದ್ದು ಮೋಷನ್ ಪೋಸ್ಟರ್ ಸಹ ಇತ್ತೀಚೆಗೆ ಬಿಡುಗಡೆಯಾಗಿದೆ. ಸ್ಟುಡಿಯೋ ಗ್ರೀನ್ನಡಿ ಕೆ.ಇ. ಜ್ನಾನ ವೇಲ್ ರಾಜ ನಿರ್ಮಿಸಿ, ಶಿವ ನಿರ್ದೇಶಿಸುತ್ತಿರುವ ಈ ಚಿತ್ರವು […]

Advertisement

Wordpress Social Share Plugin powered by Ultimatelysocial