ಕ್ರಿಕೆಟ್ ಲಕ್ಷ್ಮೇಶ್ವರ ಆಝಾದ್ ತಂಡಕ್ಕೆ ಪ್ರಥಮ ಬಹುಮಾನ.

ಲಕ್ಷ್ಮೇಶ್ವರ, 23: ಅಂಕೋಲಾದಲ್ಲಿ ಬಿಲಾಲ್ ಸ್ಪೋರ್ಟ್ಸ್ ವತಿಯಿಂದ ಅಂಕೋಲಾ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಲ್ ಬಿಲಾಲ್ ಮುಸ್ಲಿಮ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಸ್ಮಾಯಿಲ್ ಆಡೂರ ಮಾಲಿಕತ್ವದ ಆಝಾದ್ 11 ಲಕ್ಷ್ಮೇಶ್ವರ ತಂಡ ಪ್ರಥಮ ಬಹುಮಾನಗಳಿಸಿ ಪಟ್ಟಣ ಕೀರ್ತಿಗೆ ಪಾತ್ರವಾಗಿದೆ. ಪ್ರಥಮ ಬಹುಮಾನ 100,786 ನಗದು ಮತ್ತು ಆಕರ್ಷಕ ಟ್ರೋಫಿ ಪಡೆದರು.

ಟ್ರೋಫಿ ಪಡೆದು ಮಾತನಾಡಿದ ಪ್ರಥಮ ಸ್ಥಾನ ಪಡೆದ ಆಝಾದ್ 11 ತಂಡದ ಮಾಲಿಕ ಇಸ್ಮಾಯಿಲ್ ಆಡೂರ ಯೋಗ ಮತ್ತು ಕ್ರೀಡೆಯಿಂದ ಜೀವನದಲ್ಲಿಸದೃಢ ವ್ಯಕ್ತಿಗಳಾಗಿ ಬೆಳೆಯಬಹುದು. ನಿತ್ಯ ಯೋಗ ಮಾಡುವುದರಿಂದ ಸದಾ ಉತ್ಸಾಹಿಯಾಗಿರಬಹುದು ಎಂದು ಹೇಳಿದರು.

ಜೀವನದಲ್ಲಿಯ ಉದ್ದೇಶ ಈಡೇರಿಸಿಕೊಳ್ಳಲು ಆರೋಗ್ಯವಂತ ಮನಸ್ಸು ಮತ್ತು ಶರೀರದ ಅವಶ್ಯಕತೆ ಇದೆ. ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಯೋಗ ಮತ್ತು ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ನಮ್ಮ ಲಕ್ಷ್ಮೇಶ್ವರ ಪಟ್ಟಣದ ಕ್ರೀಡಾಪಟುಗಳು ಹಲವಾರು ಸಾಧನೆ ಮಾಡಿದ್ದಾರೆ. ಪಟ್ಟಣದಲ್ಲಿ ಕ್ರೀಡೆಗೆ ನಮ್ಮಂತಹವರು ಪ್ರೋತ್ಸಾಹ ನೀಡಬೇಕಾಗಿದೆ. ಪಟ್ಟಣದಲ್ಲಿ ಕ್ರಿಕೆಟ್ ಸೇರಿದಂತೆ ಹಲವಾರು ವಿವಿಧ ಕ್ರೀಡೆಗಳ ಕ್ರೀಡಾಪಟುಗಳು ಇದ್ದಾರೆ. ಅವರಿಗೆ ಪ್ರೋತ್ಸಾಹ ನೀಡಿ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಅಲ್ಲದೇ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಬೇಕಾಗಿದೆ. ಅಂತಹ ಕೆಲಸಕ್ಕೆ ನಾವು ಮುಂದಾಗಿದ್ದು, ಯಾವಂತಿಗು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಮುಂದಾಗುತ್ತೆವೆ. ಅಂಕೋಲಾದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ನನ್ನ ತಂಡದಲ್ಲಿ ಆಡಿದ ಆಟಗಾರರು ತುಂಬಾ ಅದ್ಭುತ ಕ್ರೀಡಾಪಟುಗಳು, ಪ್ರಥಮ ಸ್ಥಾನಗಳಿಸಿ ಲಕ್ಷ್ಮೇಶ್ವರ ಪಟ್ಟಣದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿವಮೊಗ್ಗದ ಬಡವರ ವೈದ್ಯ ಡಾ. ಮಂಜಪ್ಪ ನಿಧನ.

Mon Jan 23 , 2023
ಸಾಗರ ಜನವರಿ 23: ಕೇವಲ ಎರಡು ರೂಪಾಯಿ ಪಡೆದು ರೋಗಿಗಳನ್ನು ತಪಾಸಣೆ ಮಾಡುವ ಮೂಲಕ ಶಿವಮೊಗ್ಗದಲ್ಲಿ ಬಡವರ ಪಾಲಿಗೆ ದೇವರಾಗಿದ್ದ ವೈದ್ಯ ಮಂಜಪ್ಪ ನಿಧನರಾಗಿದ್ದಾರೆ. ಮಂಜಪ್ಪ ಡಾಕ್ಟ್ರು ಎಂದು ಪ್ರೀತಿಯಿಂದ ಕರೆಯಲ್ಪಡುವ ಇವರು 60 ವರ್ಷಗಳಿಂದ ಮಲೆನಾಡಿನಲ್ಲಿ ಸಾವಿರಾರು ಜನರ ಜೀವಗಳನ್ನು ಉಳಿಸಿದ್ದಾರೆ. 85 ವರ್ಷ ವಯಸ್ಸಿನ ಡಾ.ಮಂಜಪ್ಪ ಭಾನುವಾರ ಕೊನೆಯುಸಿರೆಳಿದ್ದಾರೆ. ಮಂಜಪ್ಪ ಅವರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಡಾ.ಮಂಜಪ್ಪ ಅವರು ಕಳೆದ ಆರು ದಶಕಗಳಿಂದ ಖಾಸಗಿ […]

Advertisement

Wordpress Social Share Plugin powered by Ultimatelysocial