ನುಗ್ಗೆಕಾಯಿ ತಿಂದ್ರೆ ತ್ವಚೆ, ಕೂದಲು, ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ, ಗೊತ್ತಾ?

ಸಾಂಬಾರ್‌ನಲ್ಲಿ ನುಗ್ಗೆಕಾಯಿ ಇದ್ದರೆ ಆ ಸಾಂಬಾರ್ ರುಚಿಯೇ ಬೇರೆ. ಈ ನುಗ್ಗೆ ಕಾಯಿ ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ನಿಮಗೆ ಗೊತ್ತಿರಬಹುದು, ಆದರೆ ಇಷ್ಟೆಲ್ಲಾ ಆರೋಗ್ಯಕರ ಗುಣಗಳಿವೆ ಎಂಬುವುದು ಗೊತ್ತೇ? ಹೌದು ನುಗ್ಗೆಕಾಯಿ ನಿಮ್ಮ ತ್ವಚೆ, ಕೂದಲು, ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ:

ನುಗ್ಗೆಕಾಯಿಯಿಂದ ತ್ವಚೆಗಾಗುವ ಪ್ರಯೋಜನ

ತ್ವಚೆಯಲ್ಲಿ ಕೊಲೆಜಿನ್‌ ಉತ್ಪತ್ತಿ ಹೆಚ್ಚಾಗುವುದು, ಇದು ಮುಖದಲ್ಲಿ ಮೊಡವೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಇನ್ನು ತುಂಬಾ ಮೊಡವೆ ಸಮಸ್ಯೆಯಿದ್ದರೆ ನುಗ್ಗೆಕಾಯಿ ಸೊಪ್ಪನ್ನು ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ. ಇನ್ನು ಸೊಪ್ಪನ್ನು ನೆರಳಿನಲ್ಲಿ ಒಣಗಿಸಿ ಆ ಸೊಪ್ಪಿನ ಪುಡಿ ದಿನಾ ಒಂದು ಚಮಚ ತೆಗೆದುಕೊಂಡರೆ ಮುಖದಲ್ಲಿ ನೆರಿಗೆ ಬೀಳುವುದು ತಡೆಗಟ್ಟಿ 50 ವರ್ಷ ದಾಟಿದರೂ ಯೌವನದ ಕಳೆಯಿಂದ ಮಿಂಚಬಹುದು.

ಮುಖದ ಕಾಂತಿ ಹೆಚ್ಚುವುದು

ನುಗ್ಗೆಕಾಯಿ ಸೊಪ್ಪಿನ ಪುಡಿ ದಿನಾ ಸೇವಿಸುತ್ತಿದ್ದರೆ ಫೇಶಿಯಲ್ ಮಾಡಿದಂತೆ ಮುಖದ ಕಾಂತಿ ಹೆಚ್ಚುವುದು ಅಲ್ಲದೆ ಮುಖ ಡ್ರೈಯಾಗುವುದನ್ನು ತಡೆಗಟ್ಟಿ, ಮುಖದ ಹೊಳಪು ಹೆಚ್ಚಿಸುತ್ತದೆ. ನುಗ್ಗೆಕಾಯಿ ಕೂಡ ಸೌಂದರ್ಯ ಹೆಚ್ಚಿಸಲು ತುಂಬಾನೇ ಸಹಕಾರಿ.

ಕೂದಲಿನ ಆರೋಗ್ಯಕ್ಕೆ

ನುಗ್ಗೆಕಾಯಿ ಹಾಗೂ ನುಗ್ಗೆ ಸೊಪ್ಪಿನಲ್ಲಿ ಒಮೆಗಾ 3 ಇರುವುದರಿಂದ ಕೂದಲಿನ ಆರೋಗ್ಯ ಹೆಚ್ಚಿಸುತ್ತದೆ. ಇದು ಕೂದಲಿನ ಬುಡ ಬಲವಾಗಿಸುವುದರಿಂದ ಕೂದಲು ಉದುರುವ ಸಮಸ್ಯೆ ತಡೆಗಟ್ಟುವುದು.

* ಇದರಲ್ಲಿ ವಿಟಮಿನ್ ಎ, ಸತು ಮತ್ತು ಕಬ್ಬಿಣದಂಶವಿರುವುದರಿಂದ ಕೂದಲು ಉದುರಲು ಸಹಕಾರಿಯಾಗಿದೆ.

* ಕೂದಲಿನ ಹೊಳಪು ಕೂಡ ಹೆಚ್ಚಿಸುವುದು.

ದೇಹಕ್ಕೆ ಈ ಪ್ರಯೋಜನಗಳಿವೆ

ಕ್ಯಾನ್ಸರ್ ತಡೆಗಟ್ಟುತ್ತದೆ

ದಿನಾ ನುಗ್ಗೆ ಕಾಯಿ ಸೊಪ್ಪಿನ ಪುಡಿ ಸೇವಿಸಿದರೆ ಕ್ಯಾನ್ಸರ್‌ ಅದರಲ್ಲೂ ಮಹಿಳೆಯರು ಸ್ತನ ಕ್ಯಾನ್ಸರ್ ಬಾರದಂತೆ ತಡೆಗಟ್ಟಬಹುದು.

* ಇನ್ನು ರಕ್ತದೊತ್ತಡ, ಮಧುಮೇಹ ನಿಯಂತ್ರಣದಲ್ಲಿಡಲು ನುಗ್ಗೆಸೊಪ್ಪು ಸಹಕಾರಿಯಾಗಿದೆ.

ಸಕ್ಕರೆಯಂಶ ನಿಯಂತ್ರಣದಲ್ಲಿಡಲು ನಗ್ಗೆಕಾಯಿ ಮತ್ತು ಸೊಪ್ಪು ಹೇಗೆ ಬಳಸಬೇಕು?

* ನೀವು ಸ್ವಲ್ಪ ನುಗ್ಗೆಕಾಯಿ ಸೊಪ್ಪನ್ನು ನೀರಿನಲ್ಲಿ ಹಾಕಿ ಕುದಿಸಿ, ನಂತರ ಸೋಸಿ ಅದಕ್ಕೆ ಸ್ವಲ್ಪ ನಿಂಬೆರಸ ಮತ್ತು ಜೇನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

* ಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಇಟ್ಟಿದ್ದರೆ ಅದನ್ನು ದಿನಾ 1 ಚಮಚ ಬಿಸಿ ನೀರಿನಲ್ಲಿ ಹಾಕಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

ಇನ್ನು ನುಗ್ಗೆಕಾಯಿ ಕೂಡ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ ಎಂದು ಅಧ್ಯಯನ ವರದಿ ಹೇಳಿದೆ.

ಇನ್ನು ಫೆಬ್ರವರಿಯಿಂದ ಏಪ್ರಿಲ್‌ವರೆಗೆ ನುಗ್ಗೆಕಾಯಿ ಸೀಸನ್‌, ಈ ಸಮಯದಲ್ಲಿ ನುಗ್ಗೆಕಾಯಿ ತಿನ್ನುವುದು ಮಿಸ್‌ ಮಾಡಲೇಬೇಡಿ, ಏಕೆಂದರೆ ನುಗ್ಗೆಕಾಯಿಯಲ್ಲಿ ಇಂಥ ಅದ್ಭುತ ಗುಣಗಳಿವೆ:

ರೋಗ ನಿರೋಧಕ ಶಕ್ತಿ ಹೆಚ್ಚುವುದು

ನುಗ್ಗೆಕಾಯಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಇದನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುವುದರಿಂದ ಕೆಮ್ಮು, ಶೀತ ಇವುಗಳನ್ನು ತಡೆಗಟ್ಟುತ್ತದೆ.

ಮೂಳೆಯ ಆರೋಗ್ಯಕ್ಕೆ ಒಳ್ಳೆಯದು

ನುಗ್ಗೆಕಾಯಿ ಮತ್ತು ನುಗ್ಗೆಕಾಯಿ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದಂಶ ಅಧಿಕವಿರುತ್ತದೆ, ಇದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.

ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು

ಇದರಲ್ಲಿ ವಿಟಮಿನ್‌ ಬಿ, ನಿಯಾಸಿನ್, ರಿಬೋಫ್ಲೇವಿನ್, ವಿಟಮಿನ್ ಬಿ 12 ಇವೆಲ್ಲಾ ಇರುವುದರಿಂದ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು.

ರಕ್ತ ಶುದ್ಧೀಕರಿಸಲು ಸಹಕಾರಿ

ಇನ್ನು ನುಗ್ಗೆಸೊಪ್ಪು ಹಾಗೂ ನುಗ್ಗೆಕಾಯಿ ರಕ್ತ ಶುದ್ಧೀಕರಿಸಲು ತುಂಬಾನೇ ಸಹಕಾರಿಯಾಗಿದೆ. ಏನಾದರೂ ತ್ವಚೆ ಸಮಸ್ಯೆಯಿದ್ದರೆ ನುಗ್ಗೆ ಕಾಯಿ ಸೊಪ್ಪು ಹಾಗೂ ನುಗ್ಗೆಕಾಯಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ಮಹಿಳೆ ಮತ್ತು ಪುರುಷರ ಲೈಂಗಿಕ ಆರೋಗ್ಯಕ್ಕೆ ಒಳ್ಳೆಯದು

ನುಗ್ಗೆಕಾಯಿ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಆಹಾರವಾಗಿದೆ. ನುಗ್ಗೆಕಾಯಿಯನ್ನು ತಿನ್ನುವುದರಿಂದ ದಂಪತಿಯಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುವುದು.

ಯಾರಿಗೆ ನುಗ್ಗೆಕಾಯಿ ಹಾಗೂ ಸೊಪ್ಪು ಒಳ್ಳೆಯದಲ್ಲ?

ಸಾಮಾನ್ಯವಾಗಿ ನುಗ್ಗೆಕಾಯಿ ಹಾಗೂ ಸೊಪ್ಪಿನಿಂದ ಯಾವುದೇ ತೊಂದರೆಯಿಲ್ಲ,ಆದರೆ ಗರ್ಭಿಣಿಯರು ನುಗ್ಗೆಕಾಯಿ ತಿನ್ನುವುದು ಅಷ್ಟು ಸುರಕ್ಷಿತವಲ್ಲ ಎಂದು ಹೇಳಲಾಗುವುದು, ಏಕೆಂದರೆ ಕೆಲವರಿಗೆ ಗರ್ಭಪಾತವಾಗುವ ಸಾಧ್ಯತೆ ಇದೆ.

* ನುಗ್ಗೆಕಾಯಿ ಕೆಲವರಿಗೆ ಅಲರ್ಜಿ ಉಂಟು ಮಾಡಬಹುದು, ಅಂಥವರು ತಿನ್ನದಿರುವುದು ಒಳ್ಳೆಯದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ವಿರುದ್ಧ ಮುಂದುವರಿದ ಪೋಸ್ಟರ್ ಅಭಿಯಾನ!

Tue Feb 28 , 2023
ಜಿಲ್ಲೆಗೆ ಇಂದು(ಫೆ.28) ಸಿಎಂ ಬೊಮ್ಮಾಯಿ ಪ್ರವಾಸ ಹಿನ್ನಲೆ, ಸಿಎಂ ಸಂಚರಿಸುವ ಬನವಾಸಿಯ ರಸ್ತೆ ಉದ್ದಕ್ಕೂ ‘ಪೇ ಸಿಎಂ’ ಪೋಸ್ಟರ್ ಅಳವಡಿಕೆ ಮಾಡಲಾಗಿದೆ. ‘ಡೀಲ್ ನಿಮ್ಮದು ಕಮಿಷನ್ ನಮ್ದು’ ಎಂಬ ಬರಹವುಳ್ಳ ಪೋಸ್ಟರ್ ಇದಾಗಿದೆ. ಉತ್ತರ ಕನ್ನಡ : ಜಿಲ್ಲೆಗೆ ಇಂದು(ಫೆ.28) ಸಿಎಂ ಬೊಮ್ಮಾಯಿ ಪ್ರವಾಸ ಹಿನ್ನಲೆ, ಸಿಎಂ ಸಂಚರಿಸುವ ಬನವಾಸಿಯ ರಸ್ತೆ ಉದ್ದಕ್ಕೂ ‘ಪೇ ಸಿಎಂ’ ಪೋಸ್ಟರ್ ಅಳವಡಿಕೆ ಮಾಡಲಾಗಿದೆ. ‘ಡೀಲ್ ನಿಮ್ಮದು ಕಮಿಷನ್ ನಮ್ದು’ ಎಂಬ ಬರಹವುಳ್ಳ ಪೋಸ್ಟರ್ ಇದಾಗಿದೆ. […]

Advertisement

Wordpress Social Share Plugin powered by Ultimatelysocial