ಚಿತ್ರದುರ್ಗ ಕೋಟೆಯಲ್ಲಿ ಒನಕೆ ಓಬವ್ವ ಸಮಾಧಿ

 

ಚಿತ್ರದುರ್ಗ, ಜನವರಿ 28: ದಶಕಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಚಿತ್ರದುರ್ಗ ಪಾಳೇಗಾರರ ಕಾಲದ ವೀರ ವನಿತೆ ಒನಕೆ ಓಬವ್ವನ ಸಮಾಧಿಯನ್ನು ಮರುನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.

ಚಿತ್ರದುರ್ಗ ಕೋಟೆಯೊಳಗೆ ಹೈದರಾಲಿಯ ಸೈನ್ಯವನ್ನು ಸದೆಬಡಿದ ಕರ್ನಾಟಕದ ವೀರ ನಾರಿ ಒನಕೆ ಓಬವ್ವನ ಸಮಾಧಿ ಕನಿಷ್ಟ ಕಳೆದ ಐದು ದಶಕಗಳಿಂದ ಶಿಥಿಲಾವಸ್ಥೆಯಲ್ಲಿ ಇತ್ತು.

ಇದನ್ನು ನವೀಕರಿಸಲು ಸ್ಥಳಿಯರಿಂದಲೂ ಅನೇಕ ಪ್ರಯತ್ನಗಳಾದವು. ಆದರೆ ಅದು ಫಲಕಾರಿಯಾಗಲಿಲ್ಲ. ಕಳೆದ ಮೂರು ವರ್ಷಗಳಿಂದ ನಿಲುಮೆ ಬಳಗ ಈ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡುತಲಿತ್ತು. ಈಗ ಅದು ಅಂತಿಮ ಹಂತಕ್ಕೆ ಬಂದಿದೆ.

ನಿಲುಮೆ ಬಳಗದ ಈ ಪ್ರಯತ್ನಕ್ಕೆ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಮುನಿರಾಜು ಗೌಡರಿಂದ ಬಲ ಮತ್ತು ವೇಗ ಸಿಕ್ಕಿತು. ಮುನಿರಾಜು ಗೌಡರು ಬೆಂಗಳೂರಿನ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ, ಇದಕ್ಕೆ ಸಂಬಂಧಪಟ್ಟ ಅಷ್ಟೂ ಇಲಾಖೆಗಳ ಕಚೇರಿಗಳನ್ನು ನಿರಂತರವಾಗಿ ಸಂಪರ್ಕದಲ್ಲಿದ್ದು, ಸಮಾಧಿ ಮರುನಿರ್ಮಾಣ ಕೆಲಸಕ್ಕೆ ವೇಗ ಕೊಟ್ಟರು. ಕಳೆದ ಆಗಸ್ಟ್ 7ಕ್ಕೆ ಈ ಕಾರ್ಯ ಆದಷ್ಟು ಬೇಗ ಪೂರ್ಣಗೊಳಿಸಲು ಪ್ರಾರಂಭ ಮಾಡಲಾಗಿತ್ತು.

ಸಮಾಧಿ ನಿರ್ಮಾಣ ಆರಂಭವಾದ ಆರು ತಿಂಗಳಿಗೆ ಅಂದರೆ, ಜನವರಿ 26ರಂದು ಚಿತ್ರದುರ್ಗದ ಏಳು ಸುತ್ತಿನ ಕೋಟೆಯೊಳಗೆ ಮತ್ತೆ ಒನಕೆ ಓಬವ್ವಳ ಸಮಾಧಿ ತಲೆ ಎತ್ತಿ ನಿಂತಿದೆ.ಎಂಎಲ್ಸಿ ತುಳಸಿ ಮುನಿರಾಜು ಗೌಡರ ಭಗೀರಥ ಪ್ರಯತ್ನ, ನಿಲುಮೆ ಸಂಕಲ್ಪ ಮತ್ತು ಕೋಟ್ಯಂತರ ಕನ್ನಡಿಗರ ಆಶಯ ಫಲಿಸಿದ್ದು, ಶಿಥಿಲಗೊಂಡಿದ್ದ ಓಬವ್ವನ ಸಮಾಧಿ ಮತ್ತೆ ಸಮಾಜಕ್ಕೆ ದುರ್ಗದ ದುರ್ಗಿಯ ವೀರಗಾತೆಯನ್ನು ಹೇಳಲು ತಲೆಯೆತ್ತಿ ನಿಂತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ಯಾಮೊಮೈಲ್ ಹೂವಿನ ಆರೋಗ್ಯ ಪ್ರಯೋಜನಗಳು

Fri Jan 28 , 2022
ಕ್ಯಾಮೊಮೈಲ್ ಡೈಸಿ ಕುಟುಂಬದಿಂದ ಹೂಬಿಡುವ ಸಸ್ಯದಿಂದ ಬರುವ ಮೂಲಿಕೆಯಾಗಿದೆ. ಕ್ಯಾಮೊಮೈಲ್‌ನ ತಾಜಾ ಮತ್ತು ಒಣಗಿದ ಹೂವುಗಳೆರಡನ್ನೂ ಹಲವಾರು ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಲು ಚಹಾಗಳನ್ನು ತಯಾರಿಸಲು ಶತಮಾನಗಳಿಂದ ಬಳಸಲಾಗುತ್ತದೆ. ಕ್ಯಾಮೊಮೈಲ್ ಸಾರಭೂತ ತೈಲದಲ್ಲಿನ ಸಕ್ರಿಯ ಘಟಕಾಂಶವನ್ನು ಬಿಸಾಬೊಲೋಲ್ ಎಂದು ಕರೆಯಲಾಗುತ್ತದೆ, ಇದು ಹಲವಾರು ವಿರೋಧಿ ಕಿರಿಕಿರಿಯುಂಟುಮಾಡುವ, ಉರಿಯೂತದ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ. ತಮಿಳಿನಲ್ಲಿ ಇದನ್ನು “ಸೀಮೈ ಚಾಮಂಧಿ” ಎಂದು ಕರೆಯಲಾಗುತ್ತದೆ.   ಕ್ಯಾಮೊಮೈಲ್ನ ಪ್ರಯೋಜನಗಳು ಯಾವುವು? ಕ್ಯಾಮೊಮೈಲ್ ಅನ್ನು ಸ್ಥಳೀಯವಾಗಿ […]

Advertisement

Wordpress Social Share Plugin powered by Ultimatelysocial