ಉಗ್ರರ ಗುಂಡೇಟಿಗೆ ಖ್ಯಾತ ನಟಿ ಬಲಿ: ಮನೆಗೆ ಬಂದು ದಾಳಿ ಮಾಡಿದ ಭಯೋತ್ಪಾದಕರು!

ಕಾಶ್ಮೀರ: ಕಾಶ್ಮೀರದಲ್ಲಿ ಗುಂಡಿನ ಕಾಳಗ ನಿಲ್ಲುತ್ತಿಲ್ಲ. ಬುದ್ಗಾಮ್ ಜಿಲ್ಲೆಯ ಚದೂರ ಪ್ರದೇಶದಲ್ಲಿ ಭಯೋತ್ಪಾದಕರು ಖ್ಯಾತ ನಟಿ, ಗಾಯಕಿ ಅಮ್ರೀನ್ ಭಟ್ (35) ಅವರನ್ನು ಕೊಲೆ ಮಾಡಿದ್ದಾರೆ. ಅಮ್ರೀನ್​ ಅವರ ಮನೆಗೆ ನುಗ್ಗಿದ ಉಗ್ರರು ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಈ ಘಟನೆಯಲ್ಲಿ 10 ವರ್ಷದ ಅಮ್ರೀನ್​ ಅವರ ಸೋದರಳಿಯ ಗಾಯಗೊಂಡಿದ್ದಾನೆ.

ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ಯ ಮೂವರು ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುತ್ತಿಗೆಯಲ್ಲಿ ಗುಂಡು ಹಾರಿದ್ದರಿಂದ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೆ ಗುಂಡಿನ ದಾಳಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.

ಅಮ್ರೀನ್ ಭಟ್ ಟಿವಿ ಕಲಾವಿದೆ ಮತ್ತು ಗಾಯಕಿಯಾಗಿ ಗುರುತಿಸಿಕೊಂಡವರು. ಸಾಮಾಜಿಕ ಮಾಧ್ಯಮಗಳಲ್ಲಿ ಇವರು ಹಾಡುವ ವಿಡಿಯೋಗಳಿಗೆ ಭಾರಿ ಬೇಡಿಕೆ ಇತ್ತು.

ಘಟನೆಯನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಖಂಡಿಸಿದ್ದಾರೆ. ಇದು ತುಂಬಾ ದುಃಖಕರವಾಗಿರುವ ವಿಷಯ ಎಂದಿದ್ದಾರೆ. ಹೀಗೆ ಅಮಾಯಕರು, ಮಹಿಳೆಯರ ಮೇಲೆ ದಾಳಿ ಮಾಡುತ್ತಿರುವುದನ್ನು ವಿರೋಧಿಸಿ ಹಲವು ಪಕ್ಷಗಳ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಲೆಯ ಕೌಂಪೌಂಡ್ ಸೇರಿ ರಸ್ತೆಯುದ್ಧಕ್ಕೂ `SORRY' ಬರಹ : ಪಾಗಲ್ ಪ್ರೇಮಿ ವಿರುದ್ಧ `FIR' ದಾಖಲು

Thu May 26 , 2022
ಬೆಂಗಳೂರು : ಬೆಂಗಳೂರು ಸುಂಕದಕಟ್ಟೆಯ ಶಾಂತಿಧಾಮ ಶಾಲೆಯ ಮೆಟ್ಟಿಲು, ಕಾಂಪೌಂಡ್ ಹಾಗೂ ರಸ್ತೆಯುದ್ದಕ್ಕೂ `SORRY’ ಎಂದು ಬರೆದಿದ್ದ ಪಾಗಲ್ ಪ್ರೇಮಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.ಮೇ 23ರ ರಾತ್ರಿ 11 ಗಂಟೆ ವೇಳೆಗೆ ಜೊಮ್ಯಾಟೊ ಬ್ಯಾಗ್ ನೊಂದಿಗೆ ಸುಂಕದಕಟ್ಟೆಯ ಶಾಂತಿಧಾಮ ಶಾಲೆಯ ಬಳಿ ಬಂದ ಇಬ್ಬರಿಂದ ಈ ಕೃತ್ಯ ಎಸಗಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ.ಜೊಮ್ಯಾಟೊ ಬ್ಯಾಗ್ ತುಂಬಾ ಸ್ಪ್ರೇ ತಂದು ರೋಡಲ್ಲಿ ಸಾರಿ ಬರೆದಿದ್ದಾರೆ.ಇದನ್ನು ಯಾರೋ ಪಾಗಲ್ ಪ್ರೇಮಿ ಬರೆದಿದ್ದಿರ ಎಂಬ […]

Advertisement

Wordpress Social Share Plugin powered by Ultimatelysocial