ಡಾ. ರಾಜ್‌ಕುಮಾರ್‌ ಮುಂದಿನ ಯುವಪೀಳಿಗೂ ಆದರ್ಶ ಆದ್ರು..!

ಮಾಲೂರು : ಅಭಿಮಾನ ಮತ್ತು ಸರಳತೆಯಿಂದಲೇ ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಕನ್ನಡ ಚಿತ್ರರಂಗದ ಅನಭಿಶಕ್ತಿ ದೊರೆ ವರನಟ ಡಾ. ರಾಜಕುಮಾರ್ ಅವರು ಅಭಿಮಾನಿಗಳ ಮನದಾಳದಲ್ಲಿ ಇಂದಿಗೂ ಅಮರ ಎಂದು ಕಾಸಪ್ಪ ತಾಲೂಕು ಅಧ್ಯಕ್ಷ ಎಂ.ವಿ ಹನುಮಂತಯ್ಯ ಹೇಳಿದರು. ಪಟ್ಟಣದ ಪುರಸಭಾ ಆವರಣದಲ್ಲಿರುವ ಕರ್ನಾಟಕ ರತ್ನ, ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಪುತ್ಥಳಿಗೆ 94 ನೇ ಜಯಂತಿ ಅಂಗವಾಗಿ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಡಾ. ರಾಜ್‌ಕುಮಾರ್‌ ಮುಂದಿನ ಯುವಪೀಳಿಗೂ ಆದರ್ಶ, ನಟ. ಇಂದಿಗೂ ಅವರ ಸಿನಿಮಾಗಳನ್ನು ಜನರು ಕುಟುಂಬ, ಸಮೇತ ಕುಳಿತು ಮತ್ತೆ ಮತ್ತೆ ನೋಡುತ್ತಾರೆ. ಈ ರೀತಿಯ,  ಖ್ಯಾತಿ ಇರುವ ಏಕೈಕ ನಟ ಎಂದರೆ ಅದು ರಾಜ್‌ಕುಮಾರ್,  ಮಾತ್ರ. ಡಾ. ರಾಜ್‌ಕುಮಾರ್ ಸರಳತೆಗೆ ಬ್ರಾಂಡ್ ಅಂಬಾಸಿಡರ್ ಎಂದರೆ ತಪ್ಪಾಗುವುದಿಲ್ಲ, ಅವರು ಸಣ್ಣ ಹುಡುಗನಿಂದ ಹಿಡಿದು,  ವಯೋವೃದ್ಧರನ್ನೂ ಪ್ರೀತಿಯಿಂದ ಮಾತನಾಡಿಸುತ್ತಿದ್ದರು.

ತೆರೆಯ ಮೇಲೆ ತಾವು ನಟಿಸಿದ ಪಾತ್ರಗಳ ಮೌಲ್ಯಗಳನ್ನು ಜೀವನದಲ್ಲೂ ಅಳವಡಿಸಿಕೊಂಡು ಜೀವಿಸಿದವರು. ಯಾವಾಗಲೂ ಬಿಳಿ ಉಡುಪು ಧರಿಸುತ್ತಿದ್ದ ರಾಜ್‌ಕುಮಾರ್ ನಿಜ ಸಂತನಂತೆ ಕಾಣುತ್ತಿದ್ದರು.ಯುವಕರು ಹಾಗೂ ಇಂದಿನ ನಟರು ಅವರ ಆದರ್ಶ, ಸರಳತೆಯನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕಲ್ಲುಸೀನಪ್ಪ ಸುಬ್ರಮಣಿ, ಎಚ್.ವಿ.ಲಿಂಗೇಶ್ವರಯ್ಯ ,ಗುಲ್ಜಾರ್, ಬಹದ್ದೂರ್ ಸಾಬ್, ಎ.ಎನ್.ದಯಾನಂದ್, ಶ್ರೀಧರ್, ಅಮರಾವತಿ, ಡಿ.ಎನ್.ಗೋಪಾಲ್, ಮಾಸ್ತಿ ಕೃಷ್ಣಪ್ಪ, ಕೆ.ಮುನಿಕೃಷ್ಣಪ್ಪ, ಜೆ.ಎಂ.ಸುರೇಶ್ ಕುಮಾರ್, ಕೆ.ತಂಗರಾಜ್ ಎಂ.ಪಿ.ಪ್ರಕಾಶ್ ಚಕ್ರವರ್ತಿ, ಮಣಿಗಂಡನ್, ಕಿರಣ್ ರಾಜ್, ಕೆಂಪನಹಳ್ಳಿ ರವಿ, ಸೇರಿದಂತೆ ಹಲವಾರು ಅಭಿಮಾನಿಗಳು ಹಾಜರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ..!

Mon Apr 24 , 2023
ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅಹಮದ್. ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ತುಮಕೂರು ನಗರ 1, 2 ,ಮತ್ತು 3 ,ನೇ ವಾರ್ಡ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ನನಗೆ ಈ ಭಾರಿ ತುಮಕೂರು ನಗರಕ್ಕೆ ಟಿಕೆಟ್ ನಿಡಿರುವುದು ನನಗೆ ಖುಷಿ ಎನಿಸುತ್ತದೆ ನನಗೆ ಈ ಬಾರಿ […]

Advertisement

Wordpress Social Share Plugin powered by Ultimatelysocial