ಮೆಸ್ಸಿಗೆ ಫಿಫಾದ ಅತ್ಯುತ್ತಮ ಆಟಗಾರ ಪ್ರಶಸ್ತಿ,

ಪ್ಯಾರಿಸ್‌: 2022ನೇ ಸಾಲಿನ ಫುಟ್‌ಬಾಲ್ ವಿಶ್ವಕಪ್ ವಿಜೇತ ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್ ಮೆಸ್ಸಿ, ಫಿಫಾದ ಅತ್ಯುತ್ತಮ ಆಟಗಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸ್ಪೇನ್‌ನ ಅಲೆಕ್ಸಿಯಾ ಪುಟೆಲ್ಲಾಸ್ ಅವರು, ಮಹಿಳಾ ವಿಭಾಗದ ಪ್ರಶಸ್ತಿ ಗಳಿಸಿದ್ದಾರೆ.ಇತ್ತೀಚೆಗೆ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳ ಅಂತರದ ಗೆಲುವು ದಾಖಲಿಸಿದ್ದ ಅರ್ಜೇಂಟೀನಾ ಮೂರನೇ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿತ್ತು.36 ವರ್ಷಗಳ ಬಳಿಕ ಅರ್ಜೆಂಟೀನಾ ವಿಶ್ವಕಪ್ ಗೆದ್ದು ಸುದೀರ್ಘ ಬರವನ್ನು ನೀಗಿಸಿಕೊಂಡಿತ್ತು. ತಮ್ಮ ಕೊನೆಯ ವಿಶ್ವಕಪ್ ಫೈನಲ್‌ನಲ್ಲಿ ಎರಡು ಗೋಲು ಬಾರಿಸಿದ್ದ ಮೆಸ್ಸಿ, ಪ್ರಶಸ್ತಿ ಕನಸನ್ನು ನನಸಾಗಿಸಿಕೊಂಡಿದ್ದರು. ಗೋಲ್ಡನ್ ಬಾಲ್ ತಮ್ಮದಾಗಿಸಿಕೊಂಡಿದ್ದರು.ಇದೇ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲುಗಳ ಸಾಧನೆ ಮಾಡಿದ್ದ ಎಂಬಾಪೆ ಕೂಡಾ ಪ್ರಶಸ್ತಿ ರೇಸ್‌ನಲ್ಲಿದ್ದರು.ಬ್ರೆಜಿಲ್‌ನ ನೇಮರ್, ಅರ್ಜೇಂಟೀನಾದ ಜೂಲಿಯನ್‌ ಅಲ್ವಾರೆಜ್‌, ಕ್ರೋವೆಷಿಯಾದ ಲುಕಾ ಮೊಡ್ರಿಕ್, ಈಜಿಪ್ಟ್‌ನ ಮೊಹಮ್ಮದ್ ಸಲಾ ಸೇರಿ ಒಟ್ಟು 14 ಮಂದಿ ಪ್ರಶಸ್ತಿ ರೇಸ್‌ನಲ್ಲಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಶಿವಶಕ್ತಿ ಮಿಂಚು: ಬಿಎಫ್‌ಸಿಗೆ ಜಯ,

Tue Feb 28 , 2023
ಬೆಂಗಳೂರು: ಶಿವಶಕ್ತಿ ನಾರಾಯಣನ್ ಅವರು ಗಳಿಸಿದ ಎರಡು ಸೊಗಸಾದ ಗೋಲುಗಳ ಬಲದಿಂದ ಬೆಂಗಳೂರು ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು.ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಲೀಗ್ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಬಿಎಫ್‌ಸಿ 3-1ರಿಂದ ಎಫ್‌ಸಿ ಗೋವಾ ತಂಡಕ್ಕೆ ಸೋಲುಣಿಸಿತು.ಇದರೊಂದಿಗೆ ಲೀಗ್‌ ಹಂತದಲ್ಲಿ ಮೂರನೇ ಸ್ಥಾನ ಗಳಿಸಿತು.ತೀವ್ರ ಪೈಪೋಟಿ ನಡೆದ ಪಂದ್ಯದಲ್ಲಿ ಆರನೇ ನಿಮಿಷದಲ್ಲೇ ಬಿಎಫ್‌ಸಿಗೆ ಮುನ್ನಡೆ ಸಿಕ್ಕಿತು. ರೋಶನ್ ನೊರೆಮ್‌ ಅವರು […]

Advertisement

Wordpress Social Share Plugin powered by Ultimatelysocial